ಶ್ರೀನಿವಾಸಪುರ:-ಸಂಕ್ರಾಂತಿಯಂದು ಕಾಟಮರಾಯುಡು ದೇವಾಲಯದ ಬಯಲಿನಲ್ಲಿ ಹಚ್ಚುವ ಕಿಚ್ಚಿನ ಬಳಿ ಕೃಷಿಕರು ತಾವು ಸಾಕುವ ಜಾನುವಾರಗಳನ್ನು ತಂದು ಪೂಜಿಸಿದರೆ ಜಾನುವಾರಗಳ ವಂಶಾಭಿವೃದ್ಧಿಯಾಗುತ್ತದೆ ಎಂದು ಕೃಷಿಕರ ನಂಬಿಕೆ ಅದರಂತೆ ರೈತರು ಪಟ್ಟಣದ ಮುಳಬಾಗಿಲು ರಸ್ತೆಯ ಹೊಗಳಗೆರೆ ತಿರುವಿನಲ್ಲಿರುವ ಕಾಟಮರಾಯುಡು ದೇವಾಲದ ಬಯಲಿನಲ್ಲಿ ಹಾಕಲಾಗಿದ್ದ ಕಿಚ್ಚು ಬೆಂಕಿ (ಹತ್ತಿರ) ಪ್ರತಿ ವರ್ಷದಂತೆ ಈ ವರ್ಷವು ತಮ್ಮ ಜಾನುವಾರುಗಳನ್ನು ತಂದು ಪೂಜಿಸಿಕೊಂಡು ನಂತರ ಕಾಟಮರಾಯಡು ಪಟಕ್ಕೆ ಪೂಜೆ ಸಲ್ಲಿಸಿದರು.
ಇದು ಇಲ್ಲಿನ ಸಂಪ್ರದಾಯ ಎನ್ನುತ್ತಾರೆ ಕಾಟಮರಾಯುಡು ದೇವಾಲಯದ ವಂಶಪಾರಂಪರ್ಯ ಅರ್ಚಕ ಕುಟುಂಬದ ಅಪ್ಪೂರೊಳ್ಳು ರಾಜು,ಅವರು ಮಾತನಾಡಿ ಹಿಂದೆ ದೇವಾಲಯದ ಬಳಿ ದೊಡ್ಡ ಮಟ್ಟದಲ್ಲಿ ಕಿಚ್ಚು ಹಾಕಲಾಗುತಿತ್ತು ಜಾನುವಾರಗಳನ್ನು ವಿಶೇಷವಾಗಿ ಹಸು ಎತ್ತುಗಳನ್ನು ಸ್ವಚ್ಚಗೊಳಿಸಿ ಶೃಂಗರಿಸಿ ತಂದು ಕಾಟಮಯಾಯುಡು ವಿಗ್ರಹಕ್ಕೆ ಪೂಜಿಸಿ ನಂತರ ಅವುಗಳನ್ನು ಬೆಂಕಿಯಲ್ಲಿ ಹಾಯಿಸಿಕೊಂಡು ಹೋಗುತ್ತಿದ್ದರು ಬದಲಾದ ವ್ಯವಸ್ಥೆಯಲ್ಲಿ ಜಾನುವಾರಗಳ ಸಂಖ್ಯೆ ಕಡಿಮೆಯಾಗುತ್ತಿದೆ ಬೆರಳಿಣಿಕೆಯಷ್ಟು ಸಂಖ್ಯೆಯಲ್ಲಿ ಹಸು,ಎತ್ತುಗಳನ್ನು ಮಾತ್ರ ಕರೆತಂದು ಪೂಜಿಸಿಕೊಂಡು ಹೋಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅರ್ಚಕ ಅಪ್ಪೂರೊಳ್ಳು ಶ್ರೀರಾಮಪ್ಪ, ಕುಟುಂಬದ ಸದಸ್ಯರು, ಹರಿಶ್,ಕೊಲಮಿಮಂಜು, ನರಸಿಂಹ, ಸೇರಿದಂತೆ ಪಟ್ಟಣದ ಪ್ರಮುಖ ಕೃಷಿಕ ಕುಟುಂದ ಸದಸ್ಯರು ರೈತರು ಭಾಗವಹಿಸಿದ್ದರು.
ಈಗಲೂ ಆಂಧ್ರದಲ್ಲಿ ಕಾಟಮರಾಯುಡು ಜೀವನ ಚರಿತ್ರೆಯನ್ನು ಜಾನಪದ ಕಲಾವಿದರು ಜನಪದ ಶೈಲಿಯಲ್ಲಿ ಊರುರೂ ತಿರುಗುತ್ತ ಹಾಡುತ್ತಾರೆ ಹಾಗು ಜಾನಪದ ನಾಟಕವಾಗಿ ಪ್ರದರ್ಶನ ನೀಡುತ್ತಾರೆ.
ಯಾರು ಕಾಟಮರಾಜ?
ಕಾಟಮರಾಜು ಅಥಾವ ಕಾಟಮಯುಡು ಆಂಧ್ರಪ್ರದೇಶದ ನೆಲ್ಲೂರಿನ ಜಿಲ್ಲೆಯ ಕನಿಗಿರಿಯ ಮಹಾರಾಜ ಈತ ಶ್ರೀಕೃಷ್ಣನ 23 ನೇ ತಲೆಮಾರಿನವ ಎನ್ನಲಾಗಿದ್ದು,13 ನೇ ಶತಮಾನದಲ್ಲಿ ಆಳ್ವಿಕೆ ನಡೆಸುತಿದ್ದ ತನ್ನಲ್ಲಿನ ಅಪಾರ ಸಂಖ್ಯೆಯ ಜಾನುವಾರುಗಳಿಗೆ ಮೇವಿಗಾಗಿ ನೆಲ್ಲೂರು ರಾಜ ನಲ್ಲಸಿದ್ದಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಎನ್ನಲಾಗಿದ್ದು ನಂತರ ಒಪ್ಪಂದ ಮುರಿದು ಬಿದ್ದ ಹಿನ್ನಲೆಯಲ್ಲಿ ಪಾಲೇರು ನದಿಯ ದಡದಲ್ಲಿ ಕಾಟಮರಾಯುಡುವಿಗೂ ಹಾಗು ನಲ್ಲ ಸಿದ್ದಿ ನಡುವೆ ಯುದ್ದ ನಡೆದು ಕಾಟಮರಾಯುಡು ಯುದ್ಧ ಗೆದ್ದನು. ಎಂದು ತೆಲಗು ಜಾನಪದ ಕಥೆಗಳಲ್ಲಿ ಉಲ್ಲೇಖಿಸಲಾಗುತ್ತದೆ.
ವರದಿ:ಚ.ಶ್ರೀನಿವಾಸಮೂರ್ತಿ