ಶ್ರೀನಿವಾಸಪುರ: ಪಾಲ್ಗುಣ ಮಾಸದ ಹುಣ್ಣಿಮೆಯಂದು ತಾಲೂಕಿನ ಬಹುತೇಕ ಕಡೆ ರಟೋತ್ಸವಗಳು ನಡೆಯುವುದು ಇಲ್ಲಿನ ಆಚರಣೆ ಪ್ರಮುಖವಾಗಿ ಶ್ರೀನಿವಾಸಪುರದ ಪಟ್ಟಣದ ಪ್ರಸಿದ್ದ ಶ್ರೀ ವರದ ಬಾಲಾಂಜನೇಯ ಕ್ಷೇತ್ರದಲ್ಲಿ ಸಂಭ್ರಮದಿಂದ ರಥೋತ್ಸವ ನಡೆಯಿತು.ಕಳೆದ ಎರಡು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೋಂಡಿದ್ದು ವಿಶೇಷವಾಗಿತ್ತು. ವೈಖಾನಸ ಆಗಮ ಶಾಸ್ತ್ರಙ್ಞ ಶೇಷಾದ್ರಿ ಅವರ ನೇತೃತ್ವದಲ್ಲಿ ಕಲ್ಯಾಣೋತ್ಸವ,ರಥೋತ್ಸವ ಕಾರ್ಯಕ್ರಮಗಳು ನಡೆಯಿತು.
ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವರದ ಬಾಲಾಂಜನೇಯ ಕ್ಷೇತ್ರದ ಸಂಚಾಲಕ ಗೋಫಿನಾಥರಾವ್ ಶಾಸಕ ರಮೇಶ್ ಕುಮಾರ್,ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಇತಿಹಾಸ ತಜ್ಞ ಪ್ರೊ.ನರಸಿಂಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿನಾರಯಣಸ್ವಾಮಿ, ಹಳೇಪೇಟೆ ಮಂಜು ಮುಂತಾದವರು ಪಾಲ್ಗೋಂಡಿದ್ದರು.
ನಂಬಿಹಳ್ಳಿ ರಥೋತ್ಸವ
ತಾಲೂಕಿನ ನಂಬಿಹಳ್ಳಿಯ ಕೇಂದ್ರವಾಗಿ ಸುತ್ತಲಿನ ಐದು ಗ್ರಾಮಗಳಲ್ಲಿ ಪಂಚಲಿಂಗ ಕ್ಷೇತ್ರಗಳು ಇಲ್ಲಿದ್ದು ಶ್ರೀ ಪ್ರಸನ್ನ ಸೋಮೇಶ್ವರ ಈ ಭಾಗದಲ್ಲಿ ವಿಶೇಷ ಖ್ಯಾತಿ.ಐತಿಹಾಸಿಕ ಶ್ರೀ ಪ್ರಸನ್ನ ಸೋಮೇಶ್ವರ ದೇವರ ರಥೋತ್ಸವ ನಡೆಯಿತು ಇದರ ಅಂಗವಾಗಿ ಜನ ಜಾತ್ರೆ ನಡೆಯಿತು
ತಾಲೂಕಿನ ಕೋಟಬಲ್ಲಪಲ್ಲಿ ಶ್ರೀಲಕ್ಷ್ಮೀನರಸಿಂಹ ದೇವರ ರಥೋತ್ಸವ ನಡೆಯಿತು ಅರ್ಚಕ ಅರುಣ್ ಕುಮಾರ್, ರಥೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.
Breaking News
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
Monday, April 7