ನ್ಯೂಜ್ ಡೆಸ್ಕ್: ಸುಮಾರು ಎರಡು ವರೆ ವರ್ಷಗಳ ಹಿಂದೆ ಈಗಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಪಥ ಮಾಡಿದ್ದರು ಮತ್ತೆ ನಾನು ಮುಖ್ಯಮಂತ್ರಿ ಆಗುವವರಿಗೂ ಅಸಂಬ್ಲಿಗೆ ಕಾಲಿಡಲ್ಲ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದ ಅವರು ಅಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗು ಮಂತ್ರಿಗಳ ವಿರುದ್ದ ತೀವ್ರಧಾಟಿಯಲ್ಲಿ ವಾಗ್ದಾಳಿ ನಡೆಸಿ ನನ್ನ ಹಾಗು ನನ್ನ ಪತ್ನಿಯನ್ನು ಸಾರ್ವಜನಿಕವಾಗಿ ಕೇವಲವಾಗಿ ಮಾತನಾಡುವ ಮೂಲಕ ನನ್ನ ವೈಯುಕ್ತಿಕ ಜೀವನದ ಬಗ್ಗೆ ಅಸಹ್ಯಕರವಾಗಿ ವ್ಯಂಗ್ಯವಾಗಿ ಮಾತನಾಡಿ ಅಪಮಾಸಿದ್ದಾರೆ.
ಇಲ್ಲಿ ಅಸೆಂಬ್ಲಿ ಸಮಾವೇಶ ನಡೆಸುತ್ತಿಲ್ಲ ಇದು ಗೌರವ ಸಭೆ ಅಲ್ಲ, ಕೌರವರ ಸಭೆ ಎಂದು ಕಣ್ಣಿರಿಡುತ್ತ ಅಸೆಂಬ್ಲಿಯಿಂದ ಹೊರಬಂದಿದ್ದರು.
ಅಂದು ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೆಶಂ ಪಕ್ಷ ಕೆವಲ 23 ಸೀಟುಗಳನ್ನು ಸ್ಥಾನಗಳಿಗೆ ಸೀಮಿತವಾಗಿತ್ತು.ಈದಾದ ನಂತರ ರಾಜಕೀಯ ಬೆಳವಣಿಗೆಯಲ್ಲಿ ಭ್ರಷ್ಠಾಚಾರದ ಆರೋಪದಲ್ಲಿ ಚಂದ್ರಬಾಬು ನಾಯ್ಡು ಬಂಧನವಾಯಿತು ಇದನ್ನು ವಿರೋಧಿಸಿ ಆಂಧ್ರದಲ್ಲಿ ಅಷ್ಟೆ ಅಲ್ಲ ತೆಲಂಗಾಣ ತಮಿಳುನಾಡು ಕರ್ನಾಟಕ ಸೇರಿದಂತೆ ದೇಶ ವಿದೇಶಗಳಲ್ಲಿ ತೆಲಗುದೆಶಂ ಕಾರ್ಯಕರ್ತರು ಹಾಗು ದಿವಂಗತ ಎನ್.ಟಿ.ಆರ್ ಅಭಿಮಾನಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದ್ದರು.
ಬಂಧನಕ್ಕೆ ಒಳಗಾಗಿ ರಾಜಮಂಡ್ರಿ ಜೈಲಿನಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ನಟ ಹಾಗು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿಮಾಡಿ ಅವರಿಗೆ ಧೈರ್ಯ ತುಂಬಿದ್ದೆ ಅಲ್ಲದೆ ತೆಲಗುದೆಶಂ-ಜನಸೇನ-ಬಿಜೆಪಿ ಮೈತ್ರಿ ಕುರಿತಾಗಿ ಘೋಷಣೆ ಮಾಡಿದರು ಇದು ಆಂಧ್ರಪ್ರದೇಶ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿತು ಮೂರು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿತು ಮುಂದೆ ಚುನಾವಣೆಯಲ್ಲಿ ಗೆಮ್ ಚೆಂಜರ್ ಆಗಿ ರೂಪಗೊಂಡಿತು.
ಚಂದ್ರಬಾಬು ನಾಯ್ಡು ಬಂಧನ ಕುರಿತಾಗಿ ಪ್ರಪಂಚದಾದ್ಯಂತ ಇರುವಂತ ತೆಲಗು ಮಾತನಾಡುವ ಸಾಫ್ಟವೇರ್ ತಜ್ಞರು ಸೇರಿದಂತೆ ಬಹುತೇಕರು ಸಮಾಜಿಕ ಜಾಲತಾಣಗಳಲ್ಲಿ ಅಪಮಾನಕ್ಕೆ ಈಡಾದ ಚಂದ್ರಬಾಬು ನಾಯ್ಡು ಪರ ನಿಂತರು ತಮ್ಮ ನಿಲವುಗಳನ್ನು ವ್ಯಕ್ತಪಡಿಸಿ ನಮ್ಮ ಕೈಯಲ್ಲಿನ ಅಸ್ತ್ರ ಮತದಾನ ಇದನ್ನು ಸಮರ್ಪಕವಾಗಿ ಚಲಾಯಿಸಿ ಆಂಧ್ರದ ಜನತೆಗೆ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ದೇಶ ವಿದೇಶಗಳಲ್ಲಿ ನೆಲಸಿರುವ ಆಂಧ್ರಪ್ರದೇಶದ ಜನತೆ ಭಾರತಕ್ಕೆ ಬಂದು ಮತ ಚಲಾಯಿಸಿದ್ದು ವಿಶೇಷ ಅಷ್ಟೆ ಅಲ್ಲ ವಿದೇಶಗಳಲ್ಲಿ ನೆಲೆನಿಂತವರು ಕೆಲವೊಂದಷ್ಟು ಮಂದಿ ಆಂಧ್ರಪ್ರದೇಶದ ಚುನಾವಣೆಯಲ್ಲಿ ತೆಲಗುದೆಶಂ ಅಭ್ಯರ್ಥಿಗಳಾಗಿ ಸ್ಪರ್ದಿಸಿ ಗೆಲವು ಸಾಧಿಸಿದ್ದಾರೆ.