ನ್ಯೂಜ್ ಡೆಸ್ಕ್:ಸಾಮಾನ್ಯವಾಗಿ ಮಕ್ಕಳಿಗೆ ಮದುವೆ ವಯಸ್ಸು ಬಂದಾಗ ಹೆತ್ತವರು ಅಥಾವ ಪೋಷಕರು ಜವಾಬ್ದಾರಿ ತಗೆದುಕೊಂಡು ಒಳ್ಳೆ ಸಂಬಂಧ ನೋಡಿ ಮದುವೆ ಮಾಡಬೇಕು ಎಂದುಕೊಳ್ಳುತ್ತಾರೆ.ತಮ್ಮ ಮಗ ಅಥಾವ ಮಗಳಿಗೆ ಮದುವೆ ಮಾಡಿ ತಮ್ಮ ಜವಾಬ್ದಾರಿಗಳನ್ನು ತಿರಿಸಿಕೊಳ್ಳಲು ಆಲೋಚಿಸುತ್ತಾರೆ. ಮಕ್ಕಳು ಕೇಳುವ ಮೊದಲು ಸರಿಯಾದ ಜೋಡಿ ಹುಡಕಲು ಮಕ್ಕಳ ಅಭಿಪ್ರಾಯಗಳನ್ನು ತೆಗೆದುಕೊಂಡು ಮದುವೆಯ ಸಂಬಂಧಗಳನ್ನು ನೋಡಲು ಪ್ರಾರಂಭಿಸುತ್ತಾರೆ.
ಹುಡುಗ ಹುಡುಗಿಯನ್ನು ಇಷ್ಟಪಡದಿದ್ದರೆ ಅಥವಾ ಹುಡುಗಿ ಹುಡುಗನನ್ನು ಇಷ್ಟಪಡದಿದ್ದರೆ ಸಂಬಂಧಗಳು ಸಂಬಂದಗಳು ಮುಂದುವರಿಯದೆ ಅಥಾವ ಕೊಟ್ಟು-ತಗೆದುಕೊಳ್ಳುವ ಒಮ್ಮೊಮ್ಮೆ ಬಗ್ಗೆ ಮದುವೆ ಸಂಬಂದ ಮುರಿದು ಬಿಳುತ್ತವೆ ಇದಕ್ಕೆ ಹುಡುಗನ ಕೆಲಸದ ಬಗ್ಗೆ ಆಸ್ತಿಯ ಬಗ್ಗೆ ಊಹಾಪೊಹಗಳು ಏನೆಲ್ಲಾ ಅಡ್ಡಿ ಆತಂಕದಿಂದ ಮದುವೆಗಳು ನಡೆಯುವುದಿಲ್ಲ ಇದಕ್ಕೆ ಹಲವಾರು ಕಾರಣಗಳು ಇರುತ್ತದೆ, ಆದರೆ ಇಲ್ಲಿನ ಸ್ಟೋರಿಯೇ ಬೆರೆ ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡದೆ ಬರುವಂತ ಮದುವೆ ಸಂಬಂಧವನ್ನು ತಂದೆಯೇ ಹಾಳು ಮಾಡುತ್ತಿದ್ದಾನೆ ಎಂದು ಮಕ್ಕಳೆಲ್ಲ ಕೂಡಿ ತಂದೆ ಕಾಲು ಮುರಿದಿರುವ ಘಟನೆ ಆಂಧ್ರದ ಕರ್ನೂರು ಜಿಲ್ಲೆ ಗೋಣೆಗಂಡ್ಲದಲ್ಲಿ ನಡೆದಿದೆ. ಮಂತರಾಜು(60) ಮತ್ತು ಆದಿಲಕ್ಷ್ಮಿ ದಂಪತಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಹಿರಿಯ ಮಗಳ ಮದುವೆ ಆಗಿದೆ ಇನ್ನು ಉಳಿದ ಮೂವರಿಗೂ ಮದುವೆ ಆಗಬೇಕಿದೆ
ಆದರೆ,ತಂದೆ ಮಕ್ಕಳಿಗೆ ಮದುವೆ ಸಂಬಂಧ ನೋಡುತ್ತಿಲ್ಲ ಜೊತೆಗೆ ಮದುವೆ ಸಂಬಂಧ ಮಾಡಲು ಬರುವಂತವರಿಗೆ ಇಲ್ಲ ಸಲ್ಲದ ಮಾತು ಹೇಳಿ ಮದುವೆ ಹಂತಕ್ಕೆ ಬರುವಂತ ಸಂಬಂಧ ಹಾಳು ಮಾಡುತ್ತಿದ್ದಾನೆ ಎಂದು ಆರೋಪಿಸಿ ಮಕ್ಕಳು ಮತ್ತು ತಾಯಿ ಮನೆಯ ಯಜಮಾನನಿಂದ ದೂರ ಉಳಿದು ಬೇರೆಯಾಗಿ ವಾಸವಾಗಿದ್ದರು.
ಈ ಬಗ್ಗೆ ಗ್ರಾಮದ ಹಿರಿಯರು ಊರಿನಲ್ಲಿ ಪಂಚಾಯತಿ ಮಾಡಲು ತಂದೆ ಮಂತರಾಜ್ ನನ್ನು ಮಕ್ಕಳ ಮನೆ ಬಳಿ ಕರೆಸಿದ್ದಾರೆ ಇದರಿಂದ ಆಕ್ರೋಶಗೊಂಡ ಮಕ್ಕಳಾದ ನೀಲಕಂಠ, ಜಗದೀಶ್ ಹಾಗೂ ಮಗಳು ದೇವಿ ತಂದೆಯನ್ನು ತಾವು ನಡೆಸುತ್ತಿದ್ದ ಅಂಗಡಿಯೊಳಗೆ ಕರೆದೊಯಿದು ಶಟರ್ ಬಾಗಿಲು ಹಾಕಿ ಕಣ್ಣಿಗೆ ಕಾರದ ಪುಡಿ ಎರಚಿ ಕಾಲು ಮುರಿಯುವಂತೆ ಬಡಿದಿದ್ದಾರೆ ಹೊಡೆತ ತಾಳಲಾರದೆ ಮಂತರಾಜು ಅರಚಾಡಿದಾಗ ಕೇಳಿದ ಪಂಚಾಯಿತಿಗೆ ಬಂದಿದ್ದ ಊರಿನ ಹಿರಿಯರು ದೊಡ್ಡ ವ್ಯಕ್ತಿಗಳು ಶೆಟರ್ ಬಾಗಿಲು ತೆಗಿಸಿ ಗಾಯಗೊಂಡ ಮಂತರಾಜು ಅವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಮಕ್ಕಳಾದ ನೀಲಕಂಠ ಹಾಗೂ ಜಗದೀಶರನ್ನು ವಶಕ್ಕೆ ಪಡೆದಿದ್ದಾರೆ.
Breaking News
- ಮದುವೆ ಮಾಡುತ್ತಿಲ್ಲ ಎಂದು ಅಪ್ಪನ ಕಾಲು ಮುರಿದ ಮಕ್ಕಳು
- ಶ್ರೀನಿವಾಸಪುರದಲ್ಲಿ ಕೌಟಂಬಿಕ ಕಲಹಕ್ಕೆ ಬೆಸೆತ್ತ ಗೃಹಣಿ ಆತ್ಮಹತ್ಯೆ!
- ಉದ್ಯೋಗ ಖಾತ್ರಿಯಲ್ಲಿ ಇನ್ನಷ್ಟು ಕಾಮಗಾರಿಗಳ ಸೇರ್ಪಡೆಗೆ ಆಂಧ್ರ DCMಮನವಿ
- ಪೆನ್ಷನ್ ಹಣ ನೀಡದ ತಾಯಿಯನ್ನು ಹೊಡೆದು ಕೊಂದ ದುರ್ಮಾರ್ಗ ಮಗ!
- ಕೋಲಾರ ಸೇರಿದಂತೆ ರಾಜ್ಯದಲ್ಲಿ ಮತ್ತೆ ಎರಡ್ಮೂರು ದಿನ ಮಳೆ
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿಗೆ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ ಪೈಪೋಟಿ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
Thursday, November 28