ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮತ್ತು ಶ್ರೀನಿವಾಸಪುರದ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಮದ್ಯೆ ಟಾಕ್ ಫೈಟ್ (ಮಾತಿನ ಯುದ್ದ) ನಡೆದಿದೆ ಇಬ್ಬರು ಒಬ್ಬರನ್ನೊಬ್ಬರು ವೈಯುಕ್ತಿಕವಾಗಿ ದೂಷಿಸಿಕೊಂಡಿದ್ದಾರೆ ಇಬ್ಬರ ನಡುವೆ ಎರಡು ದಶಕದ ವಯಸ್ಸಿನ ಅಂತರ ಇದ್ದರು ಒಬ್ಬರಿಗೊಬ್ಬರು ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತೆ ಪರಸ್ಪರವಾಗಿ ಬಹಿರಂಗವಾಗಿ ವಿರುದ್ದ ಹೇಳಿಕೊಟ್ಟು,ಕೊಂಡಿದ್ದಾರೆ!
ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಇತ್ತಿಚಿಗೆ ನಡೆದ ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ಅಮೃತಮಹೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಕುಮಾರ್ ಪರವಾಗಿ ಕಾರ್ಯಕ್ರಮದಲ್ಲಿ ಬೆಂಬಲಿಸಿ ಭಾಗವಹಿಸಿದ್ದ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮದ ಸಭಾವೇದಿಕೆಯಲ್ಲಿ ಮಾತನಾಡಿ ರಮೇಶ್ ಕುಮಾರ್ ಅವರನ್ನು ಹೋಗಳಿ ಮೆಚ್ಚಿಸುವ ಆವೇಶದಲ್ಲಿ ಶ್ರೀನಿವಾಸಪುರದ ಮಾಜಿ ಶಾಸಕ ವೆಂಕಟಶಿವಾರೆಡ್ಡಿಯನ್ನು ತೀವ್ರವಾಗಿ ಚುಚ್ಚಿ ಮಾತನಾಡಿದ್ದು ಎಲ್ಲಡೆ ವೈರಲ್ ಆಗಿದೆ ಕಳೆದ ನಾಲ್ಕು ದಶಕಗಳಿಂದ ಎರಡು ಟಗರುಗಳ ನಡುವೆ ಫೈಟ್ ನಡಿತಿತ್ತು ಈಗ ಅದ್ಯಾವುದೋ ಟಗರಿಗೆ ವಯಸ್ಸಾಗಿದೆ ಗೌವನಿಪಲ್ಲಿ ಸಂತೆಯಲ್ಲೂ ಅದನ್ನು ಕೊಳ್ಳೊರಿಲ್ಲದೆ ಆಗೋಗಿದೆ ವಯಸ್ಸಾಗಿರುವ ಟಗರಿಗೆ ಒಡಾಡಲು ಸಾದ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು ತೆಲಗನಲ್ಲಿ ಮಾತನಾಡಿ ವಯಸ್ಸಾಗೋದ್ ಮೇಲೆ ರಮೇಶ್ ಕುಮಾರ್ ಎಂಬ ಹುಲಿ ಮುಂದೆ ಹೋರಾಟ ಮಾಡಲು ಬಳ್ಳಾಪುರದಿಂದ ಇಲಿಯೊಂದನ್ನು ಹಿಡಿದುಕೊಂಡು ಬರಲಾಗಿದೆ ಎಂದು ವೆಂಕಟಶಿವಾರೆಡ್ದಿಯನ್ನು ಪರೋಕ್ಷವಾಗಿ ವ್ಯಂಗ್ಯದ ಮಾತುಗಳ ಮೂಲಕ ತೆಗಳಿದ್ದರು ಅಷ್ಟಕ್ಕೆ ಮಾತು ನಿಲ್ಲಿಸದ ಸುಧಾಕರ್ ತೆಲಗು ಸಿನಿಮಾ ಪುಷ್ಪದ ಶೈಲಿಯಲ್ಲಿ ರಮೇಶ್ ಕುಮಾರ್ ಅಂಟೆ ಗುಡಿಲೊ ಪುಜ ಚೇಸೆ ಸ್ವಾಮನಕುಂಟರ್ರಾ ಕಾದು…. ಇದಿ ಪುಲೆ ಸ್ಪೇಷಲ್ ಬೊಬ್ಬುಲಿ ಪುಲಿ ಅದಿ ಎಪ್ಪಟಿಕಿ ತಗ್ಗೇದೇ ಲೇದು ಎಂದು ಸಿನಿಮಾ ಶೈಲಿಯಲ್ಲಿ ತೆಲಗಿನಲ್ಲೇ ಡೈಲಾಗ್ ಹೊಡೆದು ರಂಜಿಸಿದ್ದರು.
ಇದು ಶ್ರೀನಿವಾಸಪುರದ ಜೆಡಿಎಸ್ ಯುವ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿ ತಮ್ಮ ನಾಯಕನ ಕೈಲಿ ಹೇಳಿಕೆ ಕೊಡಿಸಿದ್ದು ಅಲ್ಲದೆ ಇನ್ನೂ ಕೆಲ ಯುವ ಮುಖಂಡರು ಡಾ.ಎಂ.ಸಿ.ಸುಧಾಕರ್ ಅವರನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಉತ್ತರ ಹೇಳಿದ್ದರು.
ವೆಂಕಟಶಿವಾರೆಡ್ಡಿ ಪ್ರತಿಕ್ರಿಯೇ ಏನು?
ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಹಾಗು ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಶಕುನಿಯ ಪಪ್ಪೆಟ್ ನಗಿದ್ದಾನೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗೆ ದೊಡ್ಡವರು-ಚಿಕ್ಕವರು ಎಂಬ ಗೌರವ ಅರಿಯದಂತೆ ವರ್ತಿಸುತ್ತಾನೆ ಇತನ ಅತಿಯಾದ ವರ್ತನೆಗೆ ಇವರದೇ ಪಕ್ಷದ ಹಿರಿಯ ರಾಜಕಾರಣಿ ವಿ.ಮುನಿಯಪ್ಪನವರು 10 ವರ್ಷಗಳ ಹಿಂದೆಯೇ ಇತನನ್ನು ಮೆಂಟಲ್ ಡಾಕ್ಟರೊ ಅಥವಾ ಡೆಂಟಲ್ ಡಾಕ್ಟರೊ ಎಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದರು.
ಈತ ಚಿಂತಾಮಣಿಯ ಪಾಳೆಗಾರ ಎಂಬಂತೆ ವರ್ತಿಸುತ್ತಾನೆ ದಲಿತ ಸಮಾಜದ ಹಿರಿಯ ಮುಖಂಡ ರಾಷ್ಟ್ರೀಯ ನಾಯಕ ಕೆ.ಹೆಚ್. ಮುನಿಯಪ್ಪನವರನ್ನು ಏಕವಚನದಲ್ಲಿ ಜಾತಿಯ ಹೆಸರು ತೆಗೆದು ನಿಂದಿಸಿತ್ತಾನೆ ತನ್ನ ಕ್ಷೇತ್ರದ ಅಲ್ಪ ಸಂಖ್ಯಾತರನ್ನು ಈ ಹಿಂದೆ ಶೋಷಣೆಗೆ ಒಳಪಡಿಸಿದ್ದ, ಕಳೆದ ಲೋಕಸಭಾ ಚುನಾವಣೆಯಲ್ಲಿ ಈತ ಮತ್ತು ಶಕುನಿ ರಮೇಶ್ ಕುಮಾರ್ ನೇರವಾಗಿ ಬಿಜೆಪಿಯನ್ನು ಬೆಂಬಲಿಸಿ ಅಲ್ಪ ಸಂಖ್ಯಾತರ ಗೌರವಕ್ಕೆ ಧಕ್ಕೆ ತಂದಿದ್ದರು, ಕಳೆದ 10 ವರ್ಷಗಳಿಂದ ಈತ ಬಿಜೆಪಿಯ ಬಾಗಿಲು ತಟ್ಟುತ್ತಿರುವುದು ಜಗತ್ತಿಗೆ ತಿಳಿದಿರುವ ವಿಚಾರವಾಗಿದೆ.
ಚಿಂತಾಮಣಿಯ ಗೌರ್ಹಾನಿತ ರಾಜಕಾರಣಿ ಚೌಡರಡ್ಡಿಯವರ ಮಗನಾಗಿ ಅವರ ಹಾದಿಯಲ್ಲಿ ನಡೆದಿದ್ದರೆ ಈತನೂ ಒಬ್ಬ ಸಭ್ಯ ರಾಜಕಾರಣಿಯಾಗುತ್ತಿದ್ದ.
ಅದರೆ ಇತನ ಸರ್ವಾಧಿಕಾರಿ ಧೋರಣೆ ಹೇಗಿರುತ್ತದೆ ಎಂದರೆ ತನ್ನ ಕುಟುಂಬದ ಮೇಲೆ ಅಭಿಮಾನ ಇಟ್ಟು ಬರುವಂತ ಕಾರ್ಯಕರ್ತರನ್ನೇ ಕಸದಂತೆ ನೋಡುವ ಈತ ಮಾನಸಿಕ ರೋಗದಿಂದ ಬಳಲುತ್ತಿರಬಹುದು ಎಂಬ ಸಂಶಯ ಮೂಡುತ್ತದೆ ಈ ಹಿನ್ನಲೆಯಲ್ಲಿ ಈತ ಆದಷ್ಟು ಬೇಗ ಸೈಕಿಯಾಟ್ರಿಸ್ಟ ಅಥವಾ ಮನೋವೈದ್ಯನ ಬಳಿ ಚಿಕಿತ್ಸೆ ಪಡೆದು ತನ್ನ ಮನೋರೋಗಕ್ಕೆ ಪರಿಹಾರ ಕಂಡುಕೊಳ್ಳಲಿ ಎಂದಿರುತ್ತಾರೆ.