ಚಿಂತಾಮಣಿ ನಗರದ ವಾಣಿಜ್ಯೋದ್ಯಮಿ ನಾಗಹರ್ಷ ಅವರ ಪತ್ನಿ ರಶ್ಮಿಹರ್ಷ ಅವರು ರಾಷ್ಟ್ರಮಟ್ಟದ ಅತ್ಯಂತ ಜನಪ್ರಿಯ ವೈಶ್ಯ ಲೈಮ್ಲೈಟ್ ಪ್ರಶಸ್ತಿ(Most Popular Vysya Women (MPVW) – 2024)ಯನ್ನು ಪಡೆದಿರುತ್ತಾರೆ.
ಚಿಂತಾಮಣಿ:ರಾಷ್ಟ್ರಮಟ್ಟದ ಮೋಸ್ಟ್ ಪಾಪ್ಯೂಲರ್ ವೈಶ್ಯ ಲೈಮ್ಲೈಟ್ ಪ್ರಶಸ್ತಿಯನ್ನು ಚಿಂತಾಮಣಿ ನಗರದ ರಶ್ಮಿಹರ್ಷ ಅವರು ಪಡೆದಿರುತ್ತಾರೆ.ಹೈದರಾಬಾದ್ ಮೂಲದ ಪ್ರಖ್ಯಾತ ಮಾನೆಪಲ್ಲಿ ಆಭರಣ ಮಳಿಗೆ ಹಾಗು ವಾರಹಿ ಸಿಲ್ಕ್ ಸಂಸ್ಥೆ ಪ್ರಸ್ತುತ ಪಡಿಸುವ ಪ್ರಶಸ್ತಿಯಾಗಿದ್ದು ಆರ್ಯ ವೈಶ್ಯ ಸಮಾಜದ ಮಹಿಳಾ ಸಾಧಕರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ. ಅದರಂತೆ 2024 ರಲ್ಲಿ ನಡೆದ ಸ್ಪರ್ಧೆಯಲ್ಲಿ ಚಿಂತಾಮಣಿಯ ರಶ್ಮಿಹರ್ಷರವರು ಅತ್ಯಂತ ಜನಪ್ರಿಯ ವೈಶ್ಯ ಮಹಿಳೆ ಎಂದು ಆಯ್ಕೆಯಾಗಿದ್ದು ಅವರು ಮೊಸ್ಟ್ ಪಾಪ್ಯೂಲರ್ ವೈಶ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಹತ್ತು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೆ ರನ್ನರ್ ಅಪ್ ಪ್ರಶಸ್ತಿಯ ಗರಿ ದಕ್ಕಿಸಿಕೊಂಡಿದ್ದಾರೆ.

ಸೋಮವಾರ ಸಂಜೆ ಹೈದರಾಬಾದ್ ಮಹಾನಗರದ ನೊವಾಟೆಲ್ ಹೋಟೆಲ್ ನಲ್ಲಿ ನಡೆದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಕೀರಿಟ ತೋಡಿಸಿದ್ದು ನಂತರ ತೆಲಂಗಾಣ ಆರ್ಯ ವೈಶ್ಯ ನಿಗಮದ ಅಧ್ಯಕ್ಷೆ ಕಾಲ್ವಾ ಸುಜಾತ, ಆರ್ಯ ವೈಶ್ಯ ಫೆಡರೇಷನ್ ಅಧ್ಯಕ್ಷ ಉಪ್ಪಲ ಶ್ರೀನಿವಾಸಗುಪ್ತ ಪ್ರಶಸ್ತಿ ಪ್ರದಾನ ಮಾಡಿರುತ್ತಾರೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಮಂಗ್ಲಿ,ಕರ್ನಾಟಕದ ವಿಧಾನಪರಿಷತ್ ಸದಸ್ಯ ಡಾ.ಶರವಣ,ವೈಶ್ಯ ಲೈಮ್ಲೈಟ್ ಪ್ರಶಸ್ತಿಗಳ ಸಂಸ್ಥಾಪಕ ಶಿವಕುಮಾರ್ ಎಮ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

