ಶ್ರೀನಿವಾಸಪುರ:ಪೋಲಿಸ್ ಬೀಗಿ ಬಂದೋಬಸ್ತಿನಲ್ಲಿ ಒತ್ತುವರಿಯಾಗಿದ್ದ ಸ್ಮಶಾನದ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡಿಸಿರುತ್ತಾರೆ.
ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದ ಸರ್ವೇ ನಂ.79 ರಲ್ಲಿ 1 ಎಕರೆ 32 ಗುಂಟೆ ಜಮೀನು ಸಾರ್ವಜನಿಕರ ಸ್ಮಶಾನಕ್ಕೆ ಮೀಸಲಿಡಲಾಗಿದ್ದು ಇದನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು ಈ ಬಗ್ಗೆ ತೆರವುಗೊಳಿಸಿಕೊಡುವಂತೆ ಕೇತಗಾನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಹೈರಾಣವಾಗಿದ್ದರು ಆದರೂ ಬೆಂಬಡದೆ ಗ್ರಾಮಸ್ಥರು ಹೆಬ್ಬಟ ಪಂಚಾಯತಿ ಸದಸ್ಯ ಅನಂತ್ ಸಹಕಾರದೊಂದಿಗೆ ಸ್ಮಶಾನ ಜಾಗವನ್ನು ಗುರುತಿಸಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ ಮೇರೆಗೆ ಸ್ಪಂದಿಸಿದ ತಾಲೂಕು ಆಡಳಿತ ಕಂದಾಯ ಅಧಿಕಾರಿಗಳಾದ ಡೆಪ್ಯೂಟಿ ತಹಶೀಲ್ದಾರ್ ನಂಜುಂಡಪ್ಪ, ಕಸಬಾ ರೆವಿನ್ಯೂ ಇನ್ಸಪೆಕ್ಟರ್ ಮುನಿರೆಡ್ಡಿ ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ಸ್ಮಶಾನಕ್ಕೆ ಸಂಬಂದಿಸಿದ ಜಾಗ ಗುರುತಿಸಿ ಗ್ರಾಮಸ್ಥರೆಗೆ ಅನಕೂಲ ಮಾಡಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಚಲ್ದಿಗಾನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್ ಹಾಗು ಸಿಬ್ಬಂದಿ ಸ್ಮಶಾನದ ಜಾಗವನ್ನು ಜೆಸಿಬಿ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಿ ಗಡಿ ಗುರುತಿಸಿಕೊಟ್ಟಿರುತ್ತಾರೆ.ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಬೀಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು.