ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ ಇದು ಹೆಮ್ಮೆಯ ವಿಚಾರ ಆದರೆ ಮಾವು ಬೆಳೆಗೆ ಸರಿಯಾದ ಬೆಲೆ ಸಿಗದೆ ಮಾವು ಬೆಳೆಗಾರರು ಸಂಕಷ್ಟದಲ್ಲಿ ಇರುವುದು ನೋವಿನ ವಿಚಾರ ಮಾವು ಬೆಳೆಗಾರ ಬದುಕು ಹಸನಾಗಬೇಕಾದರೆ ಇಲ್ಲಿಗೆ ಮಾವು ಸಂಸ್ಕರಣ ಘಟಕದ ಅಗತ್ಯ ಇದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಅನ್ನ ದಾಸೋಹಿ, ಶಿಕ್ಷಣ ಸಂತ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು ಅವರು ಶನಿವಾರ ಶ್ರೀನಿವಾಸಪುರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾವು ಸಂಸ್ಕರಣ ಘಟಕ ಎಲ್ಲಾ ಸಮುದಾಯಗಳ ರೈತರ ಕೂಗಾಗಿದೆ ಇದಕ್ಕೆ ಸಂಬಂದ ಪಟ್ಟಂತೆ ಕುಮಾಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಗೆ ಮಾವು ಸಂಸ್ಕರಣ ಘಟಕದ ಸ್ಥಾಪನೆಗೆ ಅನುಮೋದನೆ ನೀಡಿದ್ದರು ಅಂದು ಈ ಬಗ್ಗೆ ಜವಾಬ್ದಾರಿ ತಗೆದುಕೊಳ್ಳಲು ಯಾರು ಮುಂದಾಗಲಿಲ್ಲ ಅದು ರಾಮನಗರಕ್ಕೆ ಹೋಯಿತು,ಇಲ್ಲಿ ಮಾವು ಸಂಸ್ಕರಣ ಘಟಕ ನಿರ್ಮಾಣ ಕುರಿತಾಗಿ ಶಾಸಕ ವೆಂಕಟಶಿವಾರೆಡ್ಡಿರವರು ಜವಾಬ್ದಾರಿ ಹೊತ್ತು ಮುಂದೆ ನಿಂತರೆ ಮಠ ಹಾಗೂ ಮಠದ ಭಕ್ತರ ಸಹಕಾರ ನೀಡಲಾಗುವುದು ಎಂದು ಅಶ್ವಾಸನೆ ನೀಡಿದರು.
ಮಠದ ವತಿಯಿಂದ ಉಚಿತ ಶಿಕ್ಷಣ
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಿಕ್ಷಣ ಸಂಸ್ಥೆಗಳು ರಾಜ್ಯಾದ್ಯಂತ ಎಲ್ಲರಿಗೂ ಉತ್ತಮ ಶಿಕ್ಷಣ ಸಿಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಸುಮಾರು 4500 ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಉಚಿತ ಶಿಕ್ಷಣ ಸಿಗುವಂತೆ. ಶಾಲೆಯನ್ನು ನಿರ್ಮಿಸಲಾಗುವುದು ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದರು.
ಸಂಸದ ಎಸ್ ಮುನಿಸ್ವಾಮಿ ಮಾತನಾಡಿ ಇವತ್ತು ಇಡಿ ರಾಜ್ಯದ ಅಭಿವೃದ್ಧಿಗೆ ಆಗುವಷ್ಟು ರೆವಿನ್ಯೂ ಸಿಗುತ್ತಿರುವುದು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಮಾಹಾ ನಗರದಿಂದ ಮಾತ್ರ ಸಾಧ್ಯ ಆಗಿದೆ, ಎಲ್ಲಾ ಸಮುದಾಯಗಳ ವೃತ್ತಿ ಪರರು ಸೌರ್ಹಾದತೆಯ ಬಾಳ್ವೆ ನಡೆಸಲು ಬೆಂಗಳೂರು ನಗರ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಇತಿಹಾಸ ಸೃಷ್ಟಿ ಮಾಡುವವರನ್ನು ನಾವು ಯಾವತ್ತಿಗೂ ಮರೆಯಬಾರದು ಅವರನ್ನ ಪೂಜ್ಯತ ಭಾವದಲ್ಲಿ ಸ್ಮರಿಸಬೇಕು ಕೆಂಪೇಗೌಡರು ಎಲ್ಲ ಸಮುದಾಯಗಳವರು ಬದುಕಲು ದೇಶದಲ್ಲೇ ಮಾದರಿ ನಗರ ನಿರ್ಮಿಸಿದ್ದು ಅವರ ದೂರದೃಷ್ಟಿ ಪರಿಣಾಮ ಇವತ್ತು ಬೆಂಗಳೂರು ವಿಶ್ವದಲ್ಲಿಯೇ ಶರವೇಗದಲ್ಲಿ ಬೆಳೆಯುತ್ತಿದೆ ಇದಕ್ಕೆ ಕಾರಣರಾದ ಕೆಂಪೇಗೌಡರನ್ನು ಎಲ್ಲಾ ಜಾತಿ ಜನಾಂಗದವರು ನೆನೆಯಬೇಕು ಎಂದರು.
ಶಾಸಕ ವೆಂಕಟಶಿವಾರೆಡ್ಡಿ ಮಾತನಾಡಿ ಎಲ್ಲಾ ಸಮುದಾಯಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಬೆಂಗಳೂರು ನಗರವನ್ನು ಕಟ್ಟಿದರು ಅದೇ ರೀತಿಯಾಗಿ ಆದಿಚುಂಚನಗಿರಿ ಮಠ ಎಲ್ಲಾ ಸಮುದಾಯಗಳ ಮಕ್ಕಳಿಗೆ ಅನ್ನದಾಸೋಹ,ಉಚಿತ ಶಿಕ್ಷಣ ನೀಡುತ್ತಿದೆ ಮಠದ ಮಹತ್ವರದ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದ ಅವರು ಈ ಕ್ಷೇತ್ರದ ಜನತೆ ನನ್ನನ್ನು 5ನೇ ಬಾರಿಗೆ ಚುನಾಯಿಸಿದ್ದಿರಿ ಕ್ಷೇತ್ರದ ಜನರ ಋಣ ತೀರಿಸಲು ಸೇವಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು ಎಲ್ಲರ ಸಹಕಾರ ಪಡೆದು ಪಟ್ಟಣದ ಅಭಿವೃದ್ದಿಗೆ ವಿಶೇಷ ಯೋಜನೆ ರೂಪಿಸಲಾಗಿದೆ ಶ್ರೀನಿವಾಸಪುರವನ್ನು ಮಾದರಿ ತಾಲ್ಲೂಕಿನ್ನಾಗಿ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶ್ರೀ ಮಂಗಳನಂದನಾಥಸ್ವಾಮಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಂಕರಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಟಿ,ಕೋನಪ್ಪರೆಡ್ಡಿ, ಶ್ರೀ ಭೈರವೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ,ಆಡಳಿತಾಧಿಕಾರಿ ಕಲ್ಲೂರುವೆಂಕಟರೆಡ್ಡಿ,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಮಾಜಿ ಎಂಎಲ್ಸಿ ಚೌಡರೆಡ್ಡಿ, ಕರ್ನಾಟಕ ರಾಜ್ಯ ಮಾವು ನಿಗಮ ಮಂಡಲಿ ಮಾಜಿ ಅಧ್ಯಕ್ಷ ದಳಸನೂರುಗೋಪಾಲಕೃಷ್ಣ, ಐಎಎಸ್ ಅಧಿಕಾರಿ ಬಿ.ಎನ್.ರಮೇಶ್, ತಹಶೀಲ್ದಾರ್ ಶರೀನ್ತಾಜ್, ಇಒ ವಿ.ಕೃಷ್ಣಪ್ಪ, ಜಿಲ್ಲಾ ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಚಿರುವುನಹಳ್ಳಿ ಲಕ್ಷ್ಮಣಗೌಡ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಮಂಜಲನಗರ ರಘುನಾಥರೆಡ್ಡಿ, ಕಂಬಾಲಪಲ್ಲಿ ಶ್ರೀನಿವಾಸ್, ಆನಂದರೆಡ್ಡಿ, ಬಿ.ವಿ.ಶಿವಾರೆಡ್ಡಿ, ಡಾ|| ವೆಂಕಟಾಚಲ,ನಿವೃತ್ತ ಮುಖ್ಯಶಿಕ್ಷಕ ವೆಂಕಟರೆಡ್ಡಿಹಾಗೂ ತಾಲೂಕು ಒಕ್ಕಲಿಗರ ಸಮುದಾಯದ ಹಲವಾರು ಮುಖಂಡರು ಇದ್ದರು.
ಮುಳಬಾಗಿಲು ವೃತ್ತದಿಂದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಶಾಸಕರೊಂದಿಗೆ ಕಾಂಗ್ರೆಸ್ ಮುಖಂಡ ಮೆರವಣಿಗೆಯಲ್ಲಿ
ಸ್ವಾಮೀಜಿ ಅವರನ್ನು ಕರೆತಂದ ಹೂವಿನ ಪಲ್ಲಕ್ಕಿ ವಾಹನದ ಮುಂಬಾಗದಲ್ಲಿ ಶಾಸಕ ವೆಂಕಟಶಿವಾರೆಡ್ಡಿ ಅವರೊಂದಿಗೆ ಮಾವು ಮಂಡಳಿ ಮಾಜಿ ಅಧ್ಯಕ್ಷ ಹಾಗು ಪ್ರಭಾವಿ ಕಾಂಗ್ರೆಸ್ ಮುಖಂಡ ದಳಸನೂರು ಗೋಪಾಲಕೃಷ್ಣ ಜೊತೆಯಾಗಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದರು.
ಕೆಂಪೇಗೌಡ ಭಾವಚಿತ್ರ,ಪುತ್ತಲಿ ಹೊತ್ತ ಪಲ್ಲಕ್ಕಿಗಳು ತಾಲೂಕಿನಾದ್ಯಂತ ದೊಡ್ದ ಸಂಖ್ಯೆಯಲ್ಲಿ ಆಗಮಿಸಿದ್ದು ಸ್ವಾಮೀಜಿ ಅವರ ಹೂವಿನ ಪಲ್ಲಕ್ಕಿ ವಾಹನದೊಂದಿಗೆ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿತು.
ಪುತ್ಥಲಿಗೆ ಮಾಲಾರ್ಪಣೆ ವಿವಾದ
ಕೋಲಾರ-ಶ್ರೀನಿವಾಸಪು ಮಾರ್ಗ ಮದ್ಯೆ ರೋಜರನಹಳ್ಳಿ ಕ್ರಾಸ್ ಬಳಿ ಕೆಂಪೇಗೌಡರ ಪುತ್ತಲಿ ಸ್ಥಾಪಿಸಲಾಗಿದ್ದು,ಪುತ್ತಲಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳೇ ಪುಷ್ಪಮಾಲೆ ಹಾಕಬೇಕು ಎಂದು ಯುವಕರು ಮುಖಂಡರು ಸ್ವಾಮಿಗಳ ಕಾರುನ್ನು ತಡೆಯುವ ಪ್ರಯತ್ನಕ್ಕೆ ಪೊಲೀಸರು ಮತ್ತು ಒಕ್ಕಲಿಗ ಮುಖಂಡರು ತಡೆದಾಗ ಕೆಲ ಹೊತ್ತು ವಾಗ್ವಾದ ನಡೆಯಿತು ಇದಕ್ಕೆ ಸ್ಥಳಿಯ ಯುವ ಒಕ್ಕಲಿಗರ ಮುಖಂಡರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಇದಕ್ಕೆ ನಂತರದಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಂದನಾಥ ಸ್ವಾಮಿ ಕೆಂಪೇಗೌಡ ಪುತ್ತಲಿಗೆ ಮಾಲಾರ್ಪಣೆ ಮಾಡಿ ವಿವಾದಕ್ಕೆ ನಾಂದಿ ಹಾಡಿದರು.