ನ್ಯೂಜ್ ಡೆಸ್ಕ್:ಮುಖದ ಕಾಂತಿಹೆಚ್ಚಿಸಲು ಮತ್ತು ಮುಖದ ಮೇಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ತೆಂಗಿನ ಎಣ್ಣೆ ಹೇಗೆಲ್ಲಾ ಉಪಯೋಗವಾಗುತ್ತದೆ ತೆಂಗಿನ ಎಣ್ಣೆ ತ್ವಚೆಯ ಸೌಂದರ್ಯಕ್ಕೂ ಉತ್ತಮ ಸಹಕಾರಿಯಾಗಿದೆ
ತೆಂಗಿನ ಎಣ್ಣೆಯಲ್ಲಿ ಫ್ಯಾಟಿ ಆಸಿಡ್ ಅಂಶ ಹೆಚ್ಚಾಗಿರುವ ಜೊತೆಗೆ ವಿಟಮಿನ್ ಈ ಅಂಶಅಪಾರವಾಗಿ ಕಂಡುಬರುತ್ತದೆ. ಹಾಗಾಗಿ ಇದೊಂದು ಅತ್ಯದ್ಭುತ ಸ್ಕಿನ್ ಮಾಯಿಸ್ಚರೈಸರ್ ಎಂದೇ ಹೇಳಬಹುದು.
ಒಣ ಚರ್ಮದ ಸಮಸ್ಯೆಗೆ ತೆಂಗಿನ ಎಣ್ಣೆ ಮೊದಲ ಆಯ್ಕೆಯಾಗಿ ಉಪಯೋಗಿಸುವುದು ಉತ್ತಮ ಚರ್ಮದ ಭಾಗದಲ್ಲಿ ವಾಸಿಮಾಡುವ ಪ್ರಕ್ರಿಯೆಯಿಂದ ಹಿಡಿದು ತೇವಾಂಶವನ್ನು ನಿರ್ವಹಣೆ ಮಾಡಿ ನಿರ್ಜಲೀಕರಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.
ತೆಂಗಿನ ಎಣ್ಣೆ ನಿಮ್ಮ ಚರ್ಮದ ಮೇಲೆ ಅತ್ಯದ್ಭುತ ತಂತ್ರಗಾರಿಕೆಯ ವಿಧಾನದಲ್ಲಿ ಕಾರ್ಯನಿರ್ವಹಿಸಲಿದೆ ಚರ್ಮದ ಮೃದುತ್ವವನ್ನು ಹೆಚ್ಚಿಸುತ್ತದೆ ಜೊತೆಗೆ ಮುಖದಲ್ಲಿನ ಮೊಡವೆ ಕಲೆಗಳನ್ನು ನಿವಾರಣೆ ಮಾಡಿ ನೈಸರ್ಗಿಕವಾದ ಕಾಂತಿ ಒದಗಿಸುತ್ತದೆ.
ಗಲ್ಲದ ಮೇಲೆ,ಕೆನ್ನೆಯ ಮೇಲೆ ತೆಂಗಿನ ಎಣ್ಣೆಯನ್ನು ನಯವಾಗಿ ಹಚ್ಚಿದರೆ.ಮೊಡವೆ ಅಥಾವ ಗುಳ್ಳೆಗಳನ್ನು ಹೋಗಲಾಡಿಸುವುದರೊಂದಿಗೆ ಚರ್ಮದ ಹೊಳಪು ಹೆಚ್ಚಾಗುತ್ತದೆ.
ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ಚರ್ಮದ ಮೃದುತ್ವ ಮತ್ತು ಸೂಕ್ಷ್ಮಚರ್ಮವನ್ನು ರಕ್ಷಿಸಿಕೊಳ್ಳಲು ಚರ್ಮದ ಮೇಲೆ ಸನ್ಸ್ಕ್ರೀನ್ ನಂತೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡು ಹೋಗುವುದು ಒಳ್ಳೆಯದು.
ಎಣ್ಣೆಯುಕ್ತ ಚರ್ಮ: ಒಂದು ಬೌಲ್ನಲ್ಲಿ ಅರ್ಧ ಚಮಚ ತೆಂಗಿನೆಣ್ಣೆ, ಅರ್ಧ ಚಮಚ ನಿಂಬೆ ರಸ ಮತ್ತು ಒಂದು ಚಮಚ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆದರೆ ಎಣ್ಣೆಯುಕ್ತ ಮುಖ ಕಾಂತಿಯುತವಾಗುತ್ತದೆ.
ಸುಕ್ಕುಗಳ ನಿವಾರಣೆಗೆ: ಒಂದು ಬಟ್ಟಲಿನಲ್ಲಿ ಒಂದು ಅವಕಾಡೊ, 4 ಚಮಚ ತೆಂಗಿನ ಎಣ್ಣೆ ಮತ್ತು ಎರಡು ಚಮಚ ಜಾಯಿಕಾಯಿ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ, ಮುಖದಲ್ಲಿನ ಸುಕ್ಕುನ್ನು ನಿವಾರಿಸಿ ಚರ್ಮ ಶುಬ್ರವಾಗಿ ಹೊಳೆಯುತ್ತದೆ.
ಸಂಗ್ರಹ ಬರವಣಿಗೆ:ವಿನಿತಾಶ್ರೀನಿವಾಸ್