ಶ್ರೀನಿವಾಸಪುರ:ಕೋರ್ಟ್ ಆದೇಶದಂತೆ ಉಳುಮೆ ಮಾಡುತ್ತಿದ್ದೇವೆ ನಮ್ಮನ್ಯಾಕೆ ತಡೆಯುತ್ತಿರಿ ಎಂದು ರೈತರು ಉಳುಮೆಗೆ ಅಡ್ಡ ಬಂದಂತ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದ ಘಟನೆ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇಂದು ಶನಿವಾರ ನಡೆಯಿತು.
ಕೇತಗಾನಹಳ್ಳಿ ವ್ಯಾಪ್ತಿಯ ಸರ್ವೆ 29 ರ ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳುಗಳ ಹಿಂದೆ ಅರಣ್ಯ ಇಲಾಖೆ ತೆರವು ಮಾಡಿದ್ದ ಭೂಮಿಯಲ್ಲಿ ಇಂದು ಶನಿವಾರ ಬೆಳ್ಳಂ ಬೆಳಿಗ್ಗೆ ಈ ಹಿಂದೆ ಉಳುಮೆ ಮಾಡಿ ಗುರುತಿಸಿಕೊಂಡಿದ್ದ ಜಮೀನಿನಲ್ಲಿ ರೈತರು ಟ್ರಾಕ್ಟರ್ನಲ್ಲಿ ಉಳುಮೆ ಮಾಡುತ್ತಿದ್ದಾರೆ ಕೆಲ ಹೊತ್ತಿನ ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಉಳುಮೆ ಮಾಡುವುದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ ಇದಕ್ಕೆ ರೈತರು ಹೈಕೋರ್ಟ್ ಆದೇಶದಂತೆ ಉಳುಮೆ ಮಾಡಲಾಗುತ್ತಿದೆ ಇದನ್ನು ಅಡ್ಡಿ ಪಡಿಸಿದರೆ ನೀವು ಕೋರ್ಟ್ ಆದೇಶವನ್ನು ದಿಕ್ಕರಿಸಿದಂತೆ ಎಂದು ಆಕ್ರೋಶಭರಿತರಾದ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದಿದ್ದಾರೆ.ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಕೆಲಕಾಲ ತಳ್ಳಾಟ,ನೂಕಾಟ ನಡೆದು ಸ್ಥಳದಲ್ಲಿ ಪ್ರಕ್ಷಬ್ದ ಪರಿಸ್ಥಿತಿ ಏರ್ಪಟ್ಟಿತು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ತಾಲೂಕಿನ ಕಾಂಗ್ರೆಸ್ ಮುಖಂಡರಾದ ದಿಂಬಾಲ್ ಆಶೋಕ್,ಬೈರಗಾನಹಳ್ಳಿ ಸಂಜಯ್ ಹಾಗು ರೈತ ಮುಖಂಡ ಸೂರಿ ಮತ್ತು ಕಾರ್ಮಿಕ ಮುಖಂಡ ಪಾತಕೋಟೆ ನವೀನ್ ಮಾತನಾಡಿ ಕೋರ್ಟ್ ಆದೇಶದಂತೆ ಉಳುಮೆ ಮಾಡಲು ಮುಂದಾಗಿರುವ ರೈತರನ್ನು ನಿವ್ಯಾಕೆ ತಡೆಯುತ್ತಿರ ಎಂದು ರೈತರ ಪರ ನಿಂತು ವಾದ ಮಂಡಿಸಿದರು ಕೇತಗಾನಹಳ್ಳಿಯ 11 ಜನ ರೈತರಿಗೆ ಬೇಸಾಯ ಮಾಡಿಕೊಳ್ಳಬಹುದು ಎಂದು ಅರಣ್ಯ ಇಲಾಖೆಗೂ ಸೇರಿ ಆದೇಶ ನೀಡಲಾಗಿದೆ.ಕೋರ್ಟ್ ಆದೇಶದಂತೆ ರೈತರು ಜಾಗಕ್ಕೆ ಬಂದಿದ್ದಾರೆ ಕೋರ್ಟ್ ಆದೇಶವನ್ನು ಯಾರೆ ಆಗಲಿ ಧಿಕ್ಕರಿಸುವುದು ಸೂಕ್ತ ಅಲ್ಲ ಎಂದು ಮನವಿ ಮಾಡಿದರು.ಇದನ್ನು ಒಪ್ಪದ ಅರಣ್ಯಾಧಿಕಾರಿಗಳ ವಿರುದ್ದ ರೈತರು ಏರು ಮಾತುಗಳಿಂದ ಆಕ್ರೋಶ ವ್ಯಕ್ತಪಡಿಸಿದರು ಪರಿಸ್ಥಿತಿ ವಿಕೋಪ ಹಂತ ತಲುಪುವಂತಾಗಿ ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಡಿಎಫ್ಒ ಸರೀನಾ,ಜಿಲ್ಲಾ ಸಹಾಯಕ ಅರಣ್ಯಾಧಿಕಾರಿ ಮಹೇಶ್,ಅಡಿಷನಲ್ ಎಎಸ್ಸ್ಪಿ ರವಿಶಂಕರ್, ಪ್ರೋಬಿಷನಲ್ ಐಪಿಎಸ್ ಎಸ್ಪಿ ಯಶ್ಕುಮಾರ್ಶರ್ಮ, ಡಿವೈಎಸ್ಪಿ ನಂದಕುಮಾರ್, ಪಿಎಸ್ಐ ಜಯರಾಮ್, ಆರ್ಎಫ್ಒ ರವಿಕೀರ್ತಿ ಇದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಕೋರ್ಟ್ ಮುಂದಿನ ಆದೇಶ ಬರುವವರೆಗೂ ನಾವಾಗಲೀ, ರೈತರಾಗಲಿ ಯಾವುದೇ ಕಾರಣಕ್ಕೂ ಜಮೀನುಗಳನ್ನು ಯಥಾ ಸ್ಥಿತಿ ಕಾಡಪಾಡಿಕೊಂಡುಬರಬೇಕೆಂದು ಬರಿಸಿಕೊಂಡು ಪರಸ್ಪರ ಸಹಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಸೀತಾರಾಮ್ರೆಡ್ಡಿ, ಶಿವರಾಮ್ಶರ್ಮ,ನಾಗದೇನಹಳ್ಳಿ ಶ್ರೀನಿವಾಸ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಡಾ|| ವೆಂಕಟೇಶ್, ಕೇತಗಾನಹಳ್ಳಿ ರೈತರಾದ ನಾಗರಾಜ್,ರಾಧಕೃಷ್ಣ,ಚನ್ನಯ್ಯಗಾರಿಪಲ್ಲಿ ವೆಂಕಟ್ರಾಯಪ್ಪ,ಕೋಟಬಲ್ಲಪಲ್ಲಿ ಶಂಕರಪ್ಪ ಉಪ್ಪರಪಲ್ಲಿ ಗುಲ್ಜಾರ್,ಪಾತಪಲ್ಲಿ ಚೌಡರೆಡ್ಡಿ, ಜಮೀನು ಕಳೆದುಕೊಂಡ ಹಲವಾರು ರೈತರು ಇದ್ದರು.