ಶ್ರೀನಿವಾಸಪುರ:ತಾಲೂಕಿನ ಮಣಿಗಾನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದು ಚುನಾವಣೆಯಲ್ಲಿ ಒಟ್ಟು 12 ನಿರ್ದೇಶಕರು ಆಯ್ಕೆಯಾಗಿದ್ದು ಇದರಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರರಕ್ಕೆ ಬಂದಿದೆ.
ಮಣಿಗಾನಹಳ್ಳಿ ಶ್ರೀನಿವಾಸ್ ರೆಡ್ಡಿ, ಕಿರುವಾರ ಲಕ್ಷ್ಮಣರೆಡ್ಡಿ, ತಿಮ್ಮಸಂದ್ರ ನಾರಾಯಣಸ್ವಾಮಿ, ತಿಮ್ಮಸಂದ್ರ ಬೈರೆಡ್ಡಿ , ಆಲವಾಟ ವೆಂಕಟೇಶ್ ರೆಡ್ಡಿ ಆಯ್ಕೆಯಾಗಿದ್ದು ಹಿಂದುಳಿದ ವರ್ಗ “ಎ” ಕ್ಷೇತ್ರದಿಂದ ಆರಿಕುಂಟೆ ಚಿಕ್ಕರಾಮಪ್ಪ, ಹಿಂದುಳಿದ ವರ್ಗ “ಬಿ” ಕ್ಷೇತ್ರದಿಂದ ಬಂಡಪಲ್ಲಿ ಸುರೇಶ್ ರೆಡ್ಡಿ , ಪರಿಶಿಷ್ಟ ಜಾತಿ ಕ್ಷೇತ್ರದಿಂದ ಜೆ ವಿ ಕಾಲೋನಿಯ ಲಕ್ಷ್ಮೀದೇವಮ್ಮ , ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಮಣಿಗಾನಹಳ್ಳಿ ಅಂಜಪ್ಪ,ಮಹಿಳೆ ಕ್ಷೇತ್ರದಿಂದ ದೊಡಮಲದೊಡ್ಡಿ ವಿಜಯಮ್ಮ, ಹಾಗು ಆರಿಕುಂಟೆ ಸುಕನ್ಯ, ಸಾಲಗಾರರಲ್ಲದ ಕ್ಷೇತ್ರದಿಂದ ಮಣಿಗಾನಹಳ್ಳಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಒಟ್ಟು 12 ನಿರ್ದೇಶಕರ ಪೈಕಿ 11 ನಿರ್ದೇಶಕರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೆ ಆಯ್ಕೆಯಾಗಿದ್ದು ಒರ್ವ ನಿರ್ದೇಶಕ ಮಾತ್ರ ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೇಸ್ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ನೂತನ ನಿರ್ದೇಶಕರಿಗೆ ಶುಭಕೋರಿ ಮಾತನಾಡಿ 11 ನಿರ್ದೇಶಕರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನುಯಾಯಿಗಳು ಗೆಲವು ಸಾಧಿಸಿದ್ದಾರೆ ಇವರನ್ನು ಚುನಾಯಿಸಿದ ಮತದಾರರಿಗೆ ಧನ್ಯವಾದಗಳು,ಸಹಕಾರ ಸಂಘವನ್ನು ಪಕ್ಷಾತೀತವಾಗಿ ನಡೆಸುವಂತೆ, ರೈತರಿಗೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಎಲ್ಲಾ ನಿರ್ದೇಶಕರು ಪಕ್ಷ ಬೇಧ ಮರೆತು ಮಾಡಬೇಕು ಇದು ಸಂಘದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆಕೆ ಮಂಜು,ಚೌಡರೆಡ್ಡಿ,ವೆಂಕಟರೆಡ್ಡಿ ಆರಿಕುಂಟೆ ರಂಗನಾಥರೆಡ್ಡಿ ಮುಂತಾದವರು ಇದ್ದರು. ಚುನಾವಣಾಧಿಕಾರಿಯಾಗಿ ಅಭಿದ್ ಹುಸೇನ್ ಕಾರ್ಯನಿರ್ವಹಿಸಿದರು.