ಶ್ರೀನಿವಾಸಪುರ:ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ದಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾವುದೆ ನಿರ್ಧಾರ ತಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದಾರೆ ಎಂಬ ಉಹಾಪೋಹಗಳ ಹಿನ್ನಲೆಯಲ್ಲಿ ಅವರನ್ನು ಮನವೊಲಿಸಲು ಅಡ್ಡಗಲ್ ಗ್ರಾಮದ ಅವರ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೆಲಿಕಾಫ್ಟರ್ ನಲ್ಲಿ ಬಂದು ಭೇಟಿ ನೀಡಿ ಕೋಪಶಮನಗೋಳಿಸುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರ ನಿಲವುಗಳ ಬಗ್ಗೆ ಬೆಸರಗೊಂಡು ಭಾನುವಾರ ‘ಕೋಲಾರದಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಕಾರ್ಯಕ್ರಮದ ಪೂರ್ವತಯಾರಿಗೂ ಬಾರದೆ ಅಂತರ ಕಾಪಾಡಿಗೊಂಡು ಕಾರ್ಯಕ್ರಮಕ್ಕೂ ಬಾರದೆ ಕ್ಷೇತ್ರದಿಂದ ಜನರನ್ನೂ ಕರೆತರುವುದಿಲ್ಲವಂತೆ ಎಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಏಕಾಏಕಿ ಗಾಭಾರಿಯಾದ ಕಾಂಗ್ರೆಸ್ ಹೈಕಮಾಂಡ್ ಹಟ ಹಿಡಿದ ರಮೇಶ್ ಕುಮಾರ್ ಅವರ ಮನವೊಲಿಸಲು ರಮೇಶ್ ಕುಮಾರ್ ಸ್ವಗ್ರಾಮಕ್ಕೆ ದಡಬಡಾಯಿಸಿ ಬಂದಿದ್ದಾರೆ.
ತಾಲ್ಲೂಕಿನ ಅಡ್ಡಗಲ್ ಗ್ರಾಮದ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಸುರ್ಜೇವಾಲಾ ಮತ್ತು ಹೆಬ್ಬಾಳ ಶಾಸಕ ಹಾಗು ಸಿದ್ದರಾಮಯ್ಯ ಆಪ್ತ ಭೈರತಿ ಸುರೇಶ್ ಆಗಮಿಸಿ ಮಾತುಕತೆ ನಡೆಸಿ ರಮೇಶ್ ಕುಮಾರ್ ಅವರೊಂದಿಗೆ ಉಪಾಹಾರ ಸೇವಿಸಿ ಮಾತುಕತೆ ನಡೆಸಿದ ಅವರು ರಮೇಶ್ ಕುಮಾರ್ ಅವರೊಂದಿಗೆ ಸುದ್ದಿಗಾರರ ಜೋತೆ ಮಾತನಾಡಿ ಜೈ ಭಾರತ ಕಾರ್ಯಕ್ರಮ ಕುರಿತು ಚರ್ಚೆ ಮಾಡಲು ರಮೇಶ್ ಕುಮಾರ್ ಮನಗೆ ಬಂದಿರುವೆ,ನಾಳೆ ಜೈ ಭಾರತ ಕಾರ್ಯಕ್ರಮ ರಾಜ್ಯ ಚುನಾವಣೆಯಲ್ಲಿ ದೊಡ್ಡ ಇತಿಹಾಸ ನಿರ್ಮಾಣ ಮಾಡಲಿದೆ,ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್ ಹಿರಿಯ ಸ್ಥಾನದಲ್ಲಿ ಕಾಣುತ್ತಿದೆ ಅವರಿಂದ ಕಲಿಯುವುದು ಸಾಕಷ್ಟಿದೆ,ರಮೇಶ್ ಕುಮಾರ್ ಪಕ್ಷದ ವಿಚಾರದಲ್ಲಿ ಕೋಪ ಮಾಡಿಕೊಂಡಿಲ್ಲ,ಅವರು ಕೆಲ ಸಲಹೆಗಳನ್ನು ನೀಡಿದ್ದು ಅದನ್ನು ಅನುಷ್ಟಾನಕ್ಕೆ ತಂದಿಲ್ಲ ಎಂಬ ಮುನಿಸು ಅಷ್ಟೆ ಮನೆ ಹೊಡೆಯುವರಿಗೂ ಹೋಗುವಂತದಲ್ಲ ಕಾಂಗ್ರೆಸ್ ಪಕ್ಷ ಬಲಿಷ್ಟ ವಾಗಿದೆ ಪಕ್ಷದಲ್ಲಿ ಯಾವುದೆ ಗೊಂದಲಗಳಿಲ್ಲ ಎಂದರು.
ಕಾಂಗ್ರೆಸ್ ಯಾರಿಗೂ ಮೋಸ ಮಾಡಿಲ್ಲ
ಕಾಂಗ್ರೆಸ್ ಪಕ್ಷ ಯಾರಿಗೂ ಮೋಸ ಮಾಡಿಲ್ಲ ಬಿಜೆಪಿ ಅಡ್ವಾಣಿ ಇಂದ ಹಿಡಿದು, ಲಕ್ಷ್ಮಣ್ ಸವದಿ ವರಿಗೂ ಎಲ್ಲರನ್ನೂ ವಂಚಿಸಿದೆ ರಾಜ್ಯದಲ್ಲಿ ಬಿ.ಎಸ್.ವೈ ಅವರ ಹಿರಿಯತನವನ್ನು ಲೆಕ್ಕಿಸದೆ ಮೂಲೆಗುಂಪುಮಾಡಲಾಗಿದೆ ಈಶ್ವರಪ್ಪ ಅವರಿಂದ ಬಲವಂತವಾಗಿ ರಾಜಿನಾಮೆ ಪಡೆಯಲಾಗಿದೆ,ನಾಲ್ಕು ಬಾರಿ ಶಾಸಕರಾಗಿದ್ದ ರಘುಪತಿ ಭಟ್ ಬಿಜೆಪಿ ಬದಲಾಗಿದೆ ಎಂದು ಕಣ್ಣೀರು ಹಾಕುತ್ತಾರೆ,ಬಿಜೆಪಿಯ ಹಿರಿಯ ಶಾಸಕ ನೆಹರು ಒಲೇಕಾರ್ ಇದು 40% ಸರ್ಕಾರ ಎಂದು ಬಿಜೆಪಿಯನ್ನು ದೂರುತ್ತಾರೆ,ಬಿಜೆಪಿ ದುಡ್ಡಿನ ಪಾರ್ಟಿ ಎಂದು ಅಂಗಾರ ಅನ್ನುತ್ತಾರೆ,ರಾಜ್ಯದಲ್ಲಿ ಸುಮಾರು 80 ಮುಖಂಡರು ಬಿಜೆಪಿ ತೊರೆದಿದ್ದಾರೆ.
ಮೀಸಲಾತಿ ಹೆಸರಲ್ಲಿ, ಒಕ್ಕಲಿಗ, ಲಿಂಗಾಯತ, ಮುಸ್ಲಿಂ ರಿಗೆ ಮೋಸ ಮಾಡಿರುವ ಎಲ್ಲರನ್ನು ವಂಚಿಸುತ್ತಿದೆ ಎಂದರು
ಬ್ಯಾಂಕ್ ಗಳ ಹಣ ಲೂಟಿ ಮಾಡಿ ಅನೇಕ ಮೋದಿ ನಾಮದೇಯ ವ್ಯಕ್ತಿಗಳು ಹೋಡಿ ಹೋಗಿದ್ದಾರೆ,
ನಿರವ್ ಮೋದಿ, ಲಲಿತ್ ಮೋದಿ ಸೇರಿದಂತೆ ಅನೇಕ ಮೋದಿ ಹೆಸರಿನವರು ಜನರ ಹಣ ಲೂಟಿ ಮಾಡಿ ಹೋಗಿದ್ದಾರೆ,
ಜನರ ಹಣ ಲೂಟಿ ಮಾಡಿದವರನ್ನು ಕಳ್ಳ ಅಂತಾರೆ,ರಾಹುಲ್ ಗಾಂಧಿ ಕಳ್ಳರನ್ನು ಕಳ್ಳರೆಂದು ಹೇಳಿರುವುದಲ್ಲಿ ತಪ್ಪೇನು ಇಲ್ಲ,
ಎಂದ ಅವರು ರಾಜ್ಯದಲ್ಲಿನ ಬಿಜೆಪಿಯ ಕಮೀಷನ್ ಸರ್ಕಾರ ತಗೆಯಲು ಜೈ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಹೈ ಕಮಾಂಡ್ ತಿರ್ಮಾನ ಮಾಡುವಂತಹದು ಎಂದರು.
ಹಳ್ಳಿಗೆ ಬಂದ ಹೆಲಿಕಾಫ್ಟರ್
ಪಂಚಾಯಿತಿ ಮುಖ್ಯಕೇಂದ್ರವಾಗಿರುವ ಅಡ್ಡಗಲ್ಲು ಗ್ರಾಮ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಯಂಚಿನ ಗ್ರಾಮ ಇಲ್ಲಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಗಿರುವ ಮುಖಂಡರು ಅದರಲ್ಲೂ ಅಡ್ಡಗಲ್ ನಂತಹ ಹಿಂದುಳಿದ ಕುಗ್ರಾಮಕ್ಕೆ ಬರುವುದು ಅಂದರೇನು ಎಂಬ ಜನಸಾಮನ್ಯರ ಊಹೆಗೂ ನಿಲಕದ ಮಾತು ಇಂದು ಆಗಿದ್ದು ಅದೆ ಪುಟ್ಟದಾಗಿ ಮಾಡಿದ್ದ ಹೆಲಿಪ್ಯಾಡ್ ನಲ್ಲಿ ಸುರ್ಜೇವಾಲ ಮತ್ತು ಭೈರತಿ ಸುರೇಶ್ ಇದ್ದ ಹೆಲಿಕಾಫ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಹಳ್ಳಿಜನ ಹುಚ್ಚೇದ್ದು ಕುಣಿದರು.ಕೈಯಲ್ಲಿದ್ದ ಮೊಬಲ್ ಕ್ಯಾಮಾರಗಳಲ್ಲಿ ಹೆಲಿಕಾಫ್ಟರ್ ಇಳಿದಿದ್ದು ಏರಿದ್ದು ಫೋಟೋಗಳನ್ನು ಕ್ಲಿಕ್ ಮಾಡಿದ್ದೆ ಮಾಡಿದ್ದು.