ನ್ಯೂಜ್ ಡೆಸ್ಕ್:ಬಂಡೆಗಳ ನಾಡು ಒಣಭೂಮಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಬೆಟ್ಟಗಳಿಂದ ಹರಿದು ಹೋಗಲಿದ್ದ ನೀರಿಗೆ ಸುಮಾರು ಒಂದು ಹೆಕ್ಟೇರ್ ಪ್ರದೇಶದಲ್ಲಿ ವಿಶಾಲ ಕೆರೆ ನಿರ್ಮಾಣಕ್ಕೆ ಶಾಸಕ ರಮೇಶ್ ಕುಮಾರ್ ಗುದ್ದಲಿ ಪೂಜೆ ಮಾಡಿದ್ದಾರೆ
ನದಿ ಮೂಲಗಳಿಲ್ಲದ ಈ ಪ್ರದೇಶ ಮಳೆಯಾಶ್ರಿತ ನೀರನ್ನು ನಂಬಿದ್ದ ಜನರು ಇರುವಂತಹದು.
ಶ್ರೀನಿವಾಸಪುರ ತಾಲೂಕಿನ ಕಟ್ಟ ಕಡೆಯ ಗ್ರಾಮವಾಗಿರುವ ರಾಯಲ್ಪಾಡು ಹೋಬಳಿಯ ಮೂಲಗೊಲ್ಲಪಲ್ಲಿ ಎನ್ನುವಂತ ಕುಗ್ರಾಮದಲ್ಲಿ ಸಣ್ಣದೊಂದು ಕೆರೆ ಇತ್ತು ಅದು ಹೂಳು ತುಂಬಿದ ಹಿನ್ನಲೆಯಲ್ಲಿ ನೀರು ನಿಲ್ಲುವುದಕ್ಕೆ ಯಾವುದೇ ಇತರೆ ವ್ಯವಸ್ಥೆ ಇರಲಿಲ್ಲ ಸುತ್ತ-ಮುತ್ತಲೂ ಬೆಟ್ಟಗುಡ್ಡಗಳಿದ್ದರೂ,ಮಳೆಯಾದರೆ ನೀರು ಆಂಧ್ರಕ್ಕೆ ಹರಿದು ಹೋಗುತ್ತದೆ. ಹೀಗಾಗಿ ಗ್ರಾಮದ ಜನರು ನೀರಾವರಿಗಾಗಿ ಬೋರ್ವೆಲ್ಗಳನ್ನ ಅವಲಂಬಿಸಿದ್ದರು. ಬೇಸಿಗೆಯಲ್ಲಿ ಬೋರ್ವೆಲ್ ಕೈ ಕೊಡುತ್ತಿದ್ದು, ಕೃಷಿ ಚಟುವಟಿಕೆ ನಡೆಸೋದು ಕಷ್ಟಕರವಾದಂತ ಪರಿಸ್ಥಿತಿ ಇದೆ. ಹೀಗಾಗಿ ಇಲ್ಲೊಂದು ಕೆರೆ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮದ ಕೆಲ ಯುವಕರು ಶಾಸಕ ರಮೇಶ್ ಕುಮಾರ್ ಬಳಿ ಮನವಿ ಸಲ್ಲಿಸಿದ್ದರು ಅದರಂತೆ ಅವರು 2020 ರ ಅಕ್ಟೋಬರ್ ತಿಂಗಳಲ್ಲಿ ಈ ಬಗ್ಗೆ ಅಧ್ಯಯನ ಮಾಡಲು ಗ್ರಾಮದ ಯುವಕರು ಮತ್ತು ಕೋಲಾರ ಸಣ್ಣ ನೀರಾವರಿ ಇಲಾಖೆ ಅಭಿಯಂತರೊಂದಿಗೆ, ಬೆಟ್ಟ ಗುಟ್ಟಗಳಲ್ಲಿ ಸುತ್ತಾಡಿ ನೀರು ನಿಲ್ಲುವ ಬಗ್ಗೆ ಯೋಜನೆ ರೂಪಿಸುವಂತೆ ಸೂಚಿಸಿದ್ದರು ಈ ವಿಚಾರವನ್ನು ಅಂದು vcsnewsz.com ನಲ್ಲಿ ಸುದ್ದಿ ಮಾಡಲಾಗಿತ್ತು.
ನಂತರದಲ್ಲಿ ಈ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಹೊಸದೊಂದು ಕೆರೆ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದೀಗ ಹೊಸ ಕೆರೆ ನಿರ್ಮಾಣ ಮಾಡುವ ಕಾಮಗಾರಿ ಬರದಿಂದ ನಡೆಯುತ್ತಿದೆ, ಗ್ರಾಮದ ಜನರು ಇದಕ್ಕೆ ಕೈ ಜೋಡಿಸಿದ್ದಾರೆ, ಮೂಲಗೊಲ್ಲಪಲ್ಲಿ ಗ್ರಾಮದ ಹೊರವಲಯದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಹೊಸ ಕೆರೆ ನಿರ್ಮಾಣ ಮಾಡಲಾಗ್ತಿದ್ದು, ಕಾಲ್ನಡಿಗೆಗೂ ದುರ್ಗಮವಾದ ಸ್ಥಳದಲ್ಲಿ ಕಳೆದ 10 ದಿನದಿಂದ ಕೆರೆ ಕಾಮಗಾರಿ ನಡೆಯುತ್ತಿದೆ, 243 ಮೀಟರ್ ಉದ್ದದಷ್ಟು ಕೆರೆ ಕಟ್ಟೆಯನ್ನ ಕಟ್ಟಲು ಗುತ್ತಿಗೆದಾರರು ಮುಂದಾಗಿದ್ದಾರೆ. ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆಯೆಂದು ಇಂಜಿನಿಯರ್ ಅನಂದ್ ಮಾಹಿತಿ ನೀಡಿದ್ದು, ಮುಂದಿನ 3 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಲುವುದಾಗಿ ತಿಳಿಸಿದ್ದಾರೆ.
ಇನ್ನು ಗ್ರಾಮದಲ್ಲಿ ಕೆರೆ ನಿರ್ಮಾಣ ಕಾರ್ಯಕ್ಕೆ ಗ್ರಾಮಸ್ತರು ಸಂತಸ ವ್ಯಕ್ತಪಡಿಸಿದ್ದು, ಗ್ರಾಮದ ನೀರಿನ ಮೂಲವಾಗಿರೊ ಬೋರ್ವೆಲ್ ಅಗಾಗ ಕೈ ಕೊಡುತ್ತಿದ್ದು, ಇದೀಗ ಕೆರೆಯಲ್ಲಿ ನೀರು ನಿಂತರೆ ಅಂತರ್ಜಲ ಮಟ್ಟ ವೃದ್ದಿಯಾಗಿ ಕೃಷಿ ಚಟುವಟಿಕೆಗೆ ಅನುಕೂಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ,
ಭೂಮಿ ಬೆಲೆ ಹೆಚ್ಚಾದಂತೆಲ್ಲಾ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕೆರೆಗಳು ಒತ್ತುವರಿಯಾಗಿತ್ತಿದೆ ಕೆಲ ಕೆರೆಗಳು ನಿರ್ವಹಣೆ ಇಲ್ಲದೆ ಬೇರೆ ಬೇರೆ ಕಾರಣಗಳಿಗೆ ಅವನತಿಯ ಅಂಚು ಹಿಡಿದಿವೆ.ಇನ್ನು ಗಡಿಬಾಗದ ಪ್ರದೇಶಗಳ ಬಹುತೇಕ ಗ್ರಾಮಗಳಲ್ಲಿ ಕೆರೆಗಳಿಲ್ಲದೆ ನೀರು ಶೇಖರಣೆಯಾಗದೆ ಪಕ್ಕದ ಆಂದ್ರಕ್ಕೆ ಹರಿದು ಹೋಗುತ್ತಿದೆ. ಹೀಗಿರುವಾಗ ಗಡಿ ಗ್ರಾಮದ ಜನರ ಬಹುದಿನಗಳ ಬೇಡಿಕೆ ಹಾಗೂ ಒತ್ತಾಯದ ಮೇರೆಗೆ ಬೆಟ್ಟಗಳ ಮದ್ಯ ಹೊಸ ಕೆರೆಯ ನಿರ್ಮಾಣಕ್ಕೆ ಕೆಲಸ ಶುರುಮಾಡಿದ್ದು ಗಡಿಗ್ರಾಮದ ಜನರ ಬಹುದಿನದ ಕನಸು ಹತ್ತಿರದಲ್ಲೇ ನನಸಾಗುವ ಕಾಲ ಕೂಡಿ ಬಂದಿದೆ.