- ಹೆಚ್ಚುತ್ತಿರುವ ಕರೋನಾ ಪ್ರಕರಣಗಳು.
- ಈಗಾಗಲೇ 15 ಉದ್ಯೋಗಿಗಳು ಸಾವನ್ನಪ್ಪಿದ್ದಾರಂತೆ.
- ಭಯಾಂದೋಳನದಲ್ಲಿ TTD ಸಿಬ್ಬಂದಿ.
ನ್ಯೂಜ್ ಡೆಸ್ಕ್:- ಕರೋನಾ ಎರಡನೆ ಅಲೆಯ ಕದಂಬ ಬಾಹುವನ್ನು ತಿರುಮಲ ತಿರುಪತಿ ದೇವಾಲಯದ ನೌಕರರ ಮೇಲೂ ಬಿಸಿದ ಪರಿಣಾಮ ಸೋಂಕಿತರ ಸಂಖ್ಯೆ ಹೆಚ್ಚುತ್ತಿವೆ. ಈಗಾಗಲೇ 15 ಜನರು ಸಾವನ್ನಪ್ಪಿರುವುದರಿಂದ ನೌಕರರು ಭಯಭೀತರಾಗಿದ್ದಾರಂತೆ.
ಕಳೆದ ವರ್ಷದ ಪರಿಸ್ಥಿತಿ
ಕಳೆದ ವರ್ಷ ಮಾರ್ಚ್2020 ರಲ್ಲಿ, ಕರೋನಾ ಪ್ರಕರಣಗಳು ಹೆಚ್ಚಾಗಿದ್ದಾಗ, ಟಿಟಿಡಿ ಜನವರಿ 21 ರಿಂದ ಶ್ರೀವಾರಿ ದರ್ಶನವನ್ನು ರದ್ದುಗೊಳಿಸಿತು ಆದಾಗ್ಯೂ, 800 ಕ್ಕೂ ಹೆಚ್ಚು ಉದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಅದರಲ್ಲಿ ಒರ್ವ ಅರ್ಚಕ ಹಾಗು ಆರು ಉದ್ಯೋಗಿಗಳು ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಸರ್ಕಾರಗಳು ಲಾಕ್ಡೌನ್ ಸಡಿಲ ಗೋಳಿಸಿದ ನಂತರ 2020 ಜೂನ್ 8 ರಿಂದ 6,000 ಜನರೊಂದಿಗೆ ಶ್ರೀವಾರಿ ದರ್ಶನವನ್ನು ಪ್ರಾರಂಭಿಸಲಾಗಿತ್ತು ಅಂದಿನಿಂದ ಕ್ಷೀಣಿಸುತ್ತಿದ್ದ ಕೋವಿಡ್ ಪ್ರಕರಣಗಳು ಅನುಗುಣವಾಗಿ ಭಕ್ತರ ದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಪ್ರಸ್ತುತ ಸ್ಥಿತಿ
ಈ ವರ್ಷದ ಮಾರ್ಚ್ ಮೊದಲ ವಾರದಲ್ಲಿ 300 ರೂಪಾಯಿಗಳ 25 ಸಾವಿರ ಟಿಕೆಟ್ ಗಳನ್ನು ಬಿಡುಗಡೆ ಮಾಡಲಾಗಿತ್ತು ಎರಡನೇ ವಾರದಲ್ಲಿ 30,000 ಜನರಿಗೆ ಅವಕಾಶ ಕಲ್ಪಿಸಿದ್ದರು,ಕರೋನಾ ಎರಡನೇ ಅಲೆ ಇರುವ ಭಕ್ತರು ದೇವಾಲಯ ಭೇಟಿಯನ್ನು ಮುಂದೂಡುತ್ತಿದ್ದಾರೆ. ಈ ಕಾರಣದಿಂದಾಗಿ,ಪ್ರಸ್ತುತ 15 ಸಾವಿರಕ್ಕಿಂತ ಕಡಿಮೆ ಭಕ್ತರು ತಿರುಮಲಕ್ಕೆ ಬರುತ್ತಿದ್ದಾರೆ. ಆಂಧ್ರ ತೆಲಂಗಾಣ, ಜೊತೆಗೆ ಕರೋನಾ ಹೆಚ್ಚು ಇರುವಂತ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.ಈ ಎಲ್ಲಾ ಬೆಳವಣಿಗೆಯಲ್ಲಿ ಎರಡನೇ ತರಂಗದಲ್ಲಿ 150 ಕ್ಕೂ ಹೆಚ್ಚು ಉದ್ಯೋಗಿಗಳು ವೈರಸ್ ಸೋಂಕಿಗೆ ಒಳಗಾಗಿದ್ದರಂತೆ ಈ ಪೈಕಿ 13 ಮಂದಿ ಖಾಯಂ ನೌಕರರು ಮತ್ತು ಇಬ್ಬರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿರುತ್ತಾರೆ ಎಂದು ಟಿಟಿಡಿ ಉದ್ಯೋಗಿಗಳ ಸಂಘಗಳು ಹೇಳಿವಿಯಂತೆ. ಬುಧವಾರ ಒಂದೇ ದಿನ ಅನ್ನದಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸರ್ವರ್ ಮತ್ತು ವಿಜಿಲೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಜಮೇದಾರ್ ಮತ್ತು ಎಂಜಿನಿಯರಿಂಗ್ ಉದ್ಯೋಗಿಯನ್ನು ಕೊರೋನಾ ಆಪೋಷನಮಾಡಿಕೊಂಡಿದ್ದು.ಗುರುವಾರ ಸಹ ಕರೋನಾ ಸೋಂಕಿನ ವಿರುದ್ಧ ಹೋರಾಡಿ ಇಬ್ಬರು ಮೃತಪಟ್ಟಿದ್ದಾರಂತೆ.
ತಿರುಚಾನೂರು ಅರ್ಚಕ ನಿಧನ
ತಿರುಚಾನೂರು (ಅಲಮೇಲು ಮಂಗಾಪುರ) ಪದ್ಮಾವತಿ ಅಮ್ಮನವರ ದೇವಸ್ಥಾನದ ಅರ್ಚಕ ಎಂ.ಜಿ ರಾಮಚಂದ್ರನ್ (60) ಕರೋನಾ ಸೋಂಕಿನಿಂದ ನಿಧನರಾಗಿರುತ್ತಾರೆ. ಹತ್ತು ದಿನಗಳ ಹಿಂದೆ ಕರೋನಾ ಸೋಂಕಿಗೆ ತುತ್ತಾದ ಅವರನ್ನು ತಿರುಪತಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೇರಿಸಲಾಗಿತ್ತಂತೆ ಆರೋಗ್ಯ ಸುಧಾರಿಸಿದ ಹಿನ್ನಲೆಯಲ್ಲಿ ನಂತರ ಅವರನ್ನು ಮೂರು ದಿನಗಳ ಹಿಂದೆ ಚೆನ್ನೈಗೆ ಕರೆದೊಯ್ಯಲಾಗಿದ್ದು ಅಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿರುವುದಾಗಿ ಹೇಳಲಾಗಿದೆ. ಕರೋನಾ ಸೋಂಕಿಗೆ ರಾಮಚಂದ್ರನ್ ಅವರ ಪತ್ನಿ ಸಹ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ.