- ಟಿ.ಟಿ.ಡಿ ಕಲ್ಯಾಣ ಮಂಟಪದಲ್ಲಿ ಆರೈಕೆ ಕೇಂದ್ರ
- ದಾನಿಗಳ ಸಹಕಾರ ದಿಂದ ಕೇಂದ್ರ ನಿರ್ವಹಣೆ
- ಶಾಸಕ ರಮೇಶಕುಮಾರ್ ಆಶಯದಂತೆ ಕೇಂದ್ರ
ಶ್ರೀನಿವಾಸಪುರ:– ತಾಲೂಕಿನ ಉತ್ತರ ಭಾಗದ ಗ್ರಾಮದ ಕೊರೋನಾ ಸೋಂಕಿತರ ಆರೋಗ್ಯದ ದೃಷ್ಠಿಯಿಂದ ಅವರ ಅನಕೂಲಕ್ಕಾಗಿ ತಾಲೂಕಿನ ರಾಯಲ್ಪಾಡು ಹೋಬಳಿ ಯರ್ರಂವಾರಿಪಲ್ಲಿ ಪಂಚಾಯಿತಿ ವ್ಯಾಪ್ತಿಯ ಖ್ಯಾತ ಪುಣ್ಯ ಕ್ಷೇತ್ರವಾದ ಗನಿಬಂಡೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿನ ತಿರುಮಲ ತಿರುಪತಿ(ಟಿ.ಟಿ.ಡಿ) ಕಲ್ಯಾಣ ಮಂಟಪದಲ್ಲಿ ಕೊರೋನಾ ಸೋಂಕಿತರ ಆರೈಕೆ ಕೇಂದ್ರ ಹಾಗು ಅತ್ಯವಶ್ಯ ಸಂದರ್ಭದಲ್ಲಿ ಉಪಯೋಗಿಸಲು ಆಕ್ಸಿಜನ್ ಕಾನ್ಸಟ್ರೆಷನ್ಸ್ ಯಂತ್ರಗಳನ್ನು ಅಳವಡಿಸಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು ಅವರು ಕಲ್ಯಾಣ ಮಂಟಪದಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದರು. ಜೂನ್ ೧ ರಿಂದ ಪ್ರಾರಂಭವಾಗುವ ಅಕ್ಸಿಜನ್ ಸಹಿತ ಸೋಂಕಿತರ ಆರೈಕೆ ಕೇಂದ್ರದಿಂದ ಈ ಭಾಗದ ಜನರಿಗೆ ಶ್ರೀನಿವಾಸಪುರಕ್ಕೆ ಹೋಗಬೇಕಾದ ಅನಿವಾರ್ಯತೆ ತಪ್ಪುತ್ತದೆ ಎಂದ ಅವರು ಶ್ರೀನಿವಾಸಪುರಕ್ಕೆ ಹೋಗಲು ಕೆಲವೊಮ್ಮೆ ಅನಾನುಕೂಲವಾಗುತಿತ್ತು ಮತ್ತು ಅರೈಕೆ ಕೇಂದ್ರ ಮಾಡುತ್ತಿರುವ ಕಲ್ಯಾಣ ಮಂಟಪ ಅಡ್ಡಗಲ್ ಆರೋಗ್ಯ ಕೇಂದ್ರಕ್ಕೆ ಹತ್ತಿರವಾಗಿರುವ ಕಾರಣ ಇಲ್ಲಿ ಕೇಂದ್ರ ಮಾಡಲಾಗುತ್ತಿದೆ ಎಂದರು.
ಆಕ್ಸಿಜನ್ ವೆಂಟಿಲೇಟರ್ ಇರುವಂತ ಆರೈಕೆ ಕೇಂದ್ರ
ಈ ಕೇಂದ್ರದಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಸೇವೆಗಳು ಇರುವ ಬಗ್ಗೆ ಹೇಳಲಾಗಿದ್ದು
ಆರೋಗ್ಯ ಇಲಾಖೆ ಮೆಲುಸ್ತುವಾರಿಯಲ್ಲಿ ನಡೆಯುವ ಸೋಂಕಿತರ ಆರೈಕೆ ಕೇಂದ್ರಕ್ಕೆ ಬೆಂಗಳೂರಿನ ಖ್ಯಾತ ವಾಸ್ತುತಙ್ಞರಾದ ರಾಮಾನುಜಾಚಾರ್ಯ ಮಂಚಗಳು ಹಾಸಿಗೆ ಮತ್ತು ಬೇಡ್ ಶೀಟ್ ಗಳನ್ನು ದಾನವಾಗಿ ನೀಡಿರುತ್ತಾರೆ. ಇತರೆ ದಾನಿಗಳು ಸಹ ಸಹಾಯ ಹಸ್ತಚಾಚಿದ್ದು ಯುವ ಮುಖಂಡ ಹರ್ಷಕಾಣದಾಂ ನೇತೃತ್ವದಲ್ಲಿ ಊಟ ತಿಂಡಿ ಸೇರಿದಂತೆ ಇತರೆ ಅವಶ್ಯ ವ್ಯವಸ್ಥೆಗಳ ನಿರ್ವಹಣೆ ಮಾಡಲಾಗುತ್ತದೆ ಎನ್ನುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಸದಸ್ಯ ಮ್ಯಾಕಲ ನಾರಯಣಸ್ವಾಮಿ,ಯುವ ಮುಖಂಡ ಹರ್ಷಕಾಣದಾಂ ವಾಸ್ತುತಙ್ಞ ರಾಮಾನುಜಾಚಾರ್ಯ,ಗನಿಬಂಡೆ ಅರ್ಚಕ ಶ್ರೀನಾಥಚಾರ್ಯ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರುಮಂಜು,ರಾಯಲ್ಪಾಡ್ ಪಂಚಾಯ್ತಿ ಅಧ್ಯಕ್ಷ ವೆಂಕಟರವಣ ಯುವ ಮುಖಂಡರಾದ ಶಿವರಾಜಗೌಡ,ಹರಿಶ್ ಯಾದವ್ ವೇಣು,ರತ್ನಪ್ಪಮುಂತಾದವರು ಇದ್ದರು.