- ತಾಲೂಕಿನಲ್ಲಿ ವ್ಯಾಪಕವಾಗಿ ಹರಡಿರುವ ಸೋಂಕು
- ಪಂಚಾಯಿತಿ ಮಟ್ಟದಲ್ಲಿ ನಿಭಂದನೆಗಳ ಅನ್ವಯ ಜಾಗ್ರತೆ
- ಸ್ವತಃ ವೈದ್ಯನಿಗೆ ಸೋಂಕು
- ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಏರಿಕೆ!
ಶ್ರೀನಿವಾಸಪುರ:-ತಾಲೂಕಿನ ನೆಲವಂಕಿ ಹೋಬಳಿಯ ಗ್ರಾಮಗಳಲ್ಲಿ ಕೊರೋನಾ ವಿಜೃಂಬಿಸಿದೆ ಬಹುತೇಕ ಗ್ರಾಮಗಳನ್ನು ಆವರಿಸಿಕೊಂಡಿರುವ ಕೊರೋನಾ ಸೋಂಕಿತರ ಸಂಖ್ಯೆ ಸುಮಾರು 40-50 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು.ಲಕ್ಷ್ಮಿಪುರ ಪಂಚಾಯಿತಿ ವ್ಯಾಪ್ತಿಯ ಬೂರಕಾಯಿಲಕೋಟೆ(ಕಾಶಿಂಗಡ್ಡ)ಗ್ರಾಮವನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಿರುವುದಾಗಿ ಪಂಚಾಯಿತಿ ಅಧಿಕಾರಿ ಚಂದ್ರಶೇಖರ್ ತಿಳಿಸಿರುತ್ತಾರೆ.ನೆಲವಂಕಿ ಪಂಚಾಯಿತಿ ವ್ಯಾಪ್ತಿಯ ಗೋರವಿಮಾಕಲಹಳ್ಳಿ ಗ್ರಾಮದಲ್ಲಿ ಸೋಂಕಿತರು ವಾಸಿಸುವ ಪ್ರದೇಶವನ್ನು ಸೀಲ್ ಡೌನ್ ಮಾಡಿರುವುದಾಗಿ ಪಂಚಾಯಿತಿ ಅಧಿಕಾರಿ ಗೌಸ್ ಪಾಷ ತಿಳಿಸಿರುತ್ತಾರೆ.
ಹೋಬಳಿಯ ವ್ಯಾಪ್ತಿಯಲ್ಲಿ ಬರುವಂತ ಗ್ರಾಮಗಳಾದ ಲಕ್ಷ್ಮಿಪುರ,ನೆಲವಂಕಿ,ಅವುಲದೊಡ್ಡಿ,ಪಚಾರಮಾಕಲಹಳ್ಳಿ, ಜೋಡಿಕೊತ್ತಪಲ್ಲಿ.ಕೆ.ಗೊಲ್ಲಪಲ್ಲಿ,ಕೊಂಡಸಂದ್ರ,ಪಾತಕೋಟೆ,ನಂಬುವಾರಿಪಲ್ಲಿ ಹಾಗು ಪುಲಗೂರುಕೋಟೆ ಪಂಚಾಯಿತಿ ವ್ಯಾಪ್ತಿಯ ಪುಲಗೂರುಕೋಟೆ,ಮುದ್ದೆಪಲ್ಲಿ,ಪಾತಬಲ್ಲಪಲ್ಲಿ,ಜನ್ನಪಲ್ಲಿ ಗ್ರಾಮಗಳಲ್ಲಿ ಸೋಂಕಿತರು ಇರುವುದಾಗಿ ತಿಳಿಸಿರುತ್ತಾರೆ.
ನೆಲವಂಕಿ ಹೊಬಳಿಯ ಎರಡು ಗ್ರಾಮಪಂಚಾಯಿತಿಗಳಾದ ಲಕ್ಷ್ಮಿಪುರ ಮತ್ತು ನೆಲವಂಕಿ ಪಂಚಾಯಿತಿಗಳು ಲಕ್ಷ್ಮಿಪುರ ಪ್ರಾಥಮಿಕ ಆರೋಗ್ಯಕೇಂದ್ರದ ವ್ಯಾಪ್ತಿಗೆ ಒಳಪಟ್ಟಿದ್ದ್ದು ಇಲ್ಲಿನ ವೈದ್ಯೆ ವರಲಕ್ಷ್ಮಿಯವರು ಹೇಳುವಂತೆ ಕೊರೋನಾ ತಡೆಯುವ ವಿಚಾರದಲ್ಲಿ ಸಿಬ್ಬಂದಿಯೊಂದಿಗೆ ಟೀಂ ವರ್ಕ್ ಮಾಡಿರುತ್ತೇವೆ ಸೋಂಕಿನ ತೀವ್ರತೆ ಇಲ್ಲದಿರುವಂತವರಿಗೆ ಅವರ ಮನೆಯ ಅನಕೂಲಗಳನ್ನು ಪರಶೀಲನೆ ಮಾಡಿ ಹೋಂ ಕ್ವಾರಂಟೈನ್ ಮಾಡಿಸಲಾಗಿದೆ ಅನಕೂಲ ಇಲ್ಲದಂತವರಿಗೆ ಶ್ರೀನಿವಾಸಪುರದ ಕೋವಿಡ್ ಕೇಂದ್ರಕ್ಕೆ ಕಳಿಸಲಾಗುತ್ತಿದೆ,ಉಳಿದಂತೆ ಉಸಿರಾಟದ ತೊಂದರೆ ಇರುವಂತವರಿಗೆ ಶ್ರೀನಿವಾಸಪುರದ ಕೋವಿಡ್ ಆಸ್ಪತ್ರೆಗೆ ಕಳಿಸಿರುತ್ತದೆ.ಗರಿಷ್ಟ ಸಂಖ್ಯೆಯಲ್ಲಿ ಸ್ವಾಬ್ ಪರಿಕ್ಷೇ ಮಾಡಿಸಲಾಗಿದೆ.ನಿಭಂದನೆಗಳ ಅನ್ವಯ ತಗೆದುಕೊಳ್ಳಬಹುದಾದ ಕ್ರಮಗಳನ್ನು ತಗೆದುಕೊಂಡು ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವಂತ ಗ್ರಾಮಗಳಲ್ಲಿ ಕಂಟೈನ್ಮೆಂಟ್ ಪ್ರದೇಶ ಮಾಡಿಸಿರುವುದಾಗಿ ಹೇಳಿದರು. ಗ್ರಾಮಗಳಿಗೆ ಹೊರಗಿನಿಂದ ಬರುವವರಿಂದ ಸೋಂಕು ಹರಡುತ್ತಿರಬಹುದು ಎಂದು ಶಂಕಿಸಿರುತ್ತಾರೆ. ಪುಲಗೂರು ಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಅನಿಲ್ ಸೋಂಕಿತರಾಗಿದ್ದು ಹೋಂ ಐಸೋಲೇಶನ್ ಚಿಕಿತ್ಸೆಯಲ್ಲಿರುವುದಾಗಿ ತಿಳಿಸಿರುತ್ತಾರೆ.
ಕಸಬಾ ಹೊಬಳಿ ದಳಸನೂರು ಪಂಚಾಯಿತಿಯ ಗುಮ್ಮೆರೆಡ್ಡಿಪುರ ಗ್ರಾಮದಲ್ಲಿಯೇ ಸುಮಾರು 20 ಕ್ಕೂ ಹೆಚ್ಚು ಸೋಂಕಿತರು ಇರುವುದಾಗಿ ಹೇಳಲಾಗಿದೆ.
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನಲೆಯಲ್ಲಿ ಐದಕ್ಕಿಂತ ಹೆಚ್ಚು ಸೋಂಕಿತರು ಇರುವಂತ ಗ್ರಾಮಗಳನ್ನು ಗ್ರಾಮ ಆರೋಗ್ಯ ಪಡೆ ಯುವಕರ ಸಹಕಾರದೊಂದಿಗೆ ಕಂಟೈನ್ಮೆಂಟ್ ಪ್ರದೇಶ ಎಂದು ಗುರುತಿಸಿ ಗ್ರಾಮಕ್ಕೆ ಹೋರಗಿನಿಂದ ಬರುವಂತವರನ್ನು ನಿರ್ಭಂದಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ತಿಳಿಸಿರುತ್ತಾರೆ.ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶ್ರೀನಿವಾಸಪುರ ಪಟ್ಟಣದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಇರುವ 40 ಹಾಸಿಗೆಗಳ ಜೊತೆಗೆ ಇನ್ನಷ್ಟು ಹಾಸಿಗೆಗಳನ್ನು ಏರಿಸಲು ಇಂದು ತಹಶೀಲ್ದಾರ್ ಶ್ರೀನಿವಾಸ ಅವರೊಂದಿಗೆ ಮಾತನಾಡಿ ತಿರ್ಮಾನಿಸಿರುವುದಾಗಿ ತಿಳಿಸಿದರು.
ಬುರುಕಾಯಿಲ ಕೋಟಾ ಗ್ರಾಮದ ಒಂದೇ ಕುಟುಂಬದ ಸೋಂಕಿತರಾದ ಮಕ್ಕಳು ಸೇರಿದಂತೆ ತಂದೆ ತಾಯಿ 108 ಅಂಬುಲೆನ್ಸ್ ಸಮಯಕ್ಕೆ ಬಾರದ ಹಿನ್ನಲೆಯಲ್ಲಿ ತಮ್ಮ ದ್ವಿಚಕ್ರವಾಹನದಲ್ಲೇ ಕೊರೋನಾ ಕೇಂದ್ರಕ್ಕೆ ಹೋಗುತ್ತಿರುವುದು