ಫೆಂಗಲ್ ಎಫೆಕ್ಟ್ ನಿಂದಾಗಿ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಸಣ್ಣದಾಗಿ ಮಳೆಯಾಗುತ್ತಿದೆ.ಎಡೆಬಿಡದೆ ಮಳೆ ಜಿನಗುತ್ತಿದೆ ಜೊತೆಗೆ ಚಳಿ ಕೊಂಚ ಹೆಚ್ಚಾಗಿದ್ದು ಜನರನ್ನು ನಡುಗಿಸುತ್ತಿದೆ ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶ್ರೀನಿವಾಸಪುರ: ಫೆಂಗಲ್ ತೂಫಾನ್ ಪ್ರಭಾವದಿಂದ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಸಣ್ಣದಾಗಿ ಪ್ರಾರಂಭವಾದ ಮಳೆ ಭಾನುವಾರ ಮಧ್ಯಾನದಃ ಹೊತ್ತಿಗೆ ಧಾರಕಾರವಾಗಿ ಸುರಿಯಲು ಶುರುವಾಗಿದೆ.
ಸುರಿಯುತ್ತಿರುವ ಮಳೆ ಚಳಿಯಿಂದಾಗಿ ಕೃಷಿ ಕೆಲಸ ಕಾರ್ಯಗಳಿಗೆ ಹಾಗು ವ್ಯಾಪಾರ ವ್ಯವಹಾರಕ್ಕೆ ತೊಂದರೆಯಾಗಿದ್ದು ಜನ ಮನೆಗೆ ಸೀಮಿತವಾಗಿದ ಪರಿಣಾಮ ಯಾರು ರಸ್ತೆಗಿಳಿಯದೆ ರಸ್ತೆಗಳು ಬಿಕೋ ಎನ್ನುತ್ತಿವೆ ಮಳೆಯೊಂದಿಗೆ ಚಳಿಯೂ ಜೋರಾಗಿದ್ದು ವೃದ್ಧರು ಸೇರಿದಂತೆ ಸಾಮನ್ಯರ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಎಫೆಕ್ಟ್ ರಸ್ತೆಗಳು ಕೆಸರು ಗದ್ದೆಗಳಾಗಿವೆ ಸಣ್ಣ-ಪುಟ್ಟ ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ ಭಾನುವಾರದ ನಂತರ ಮಳೆ ಇನ್ನಷ್ಟು ಹೆಚ್ಚಾಗಬಹುದು ದೊಡ್ಡ ಮಟ್ಟದಲ್ಲಿ ನೀರು ಹರಿಯುವಂತ ಮಳೆಯಾಗಬಹುದು ಎನ್ನುತ್ತಾರೆ ತಜ್ಞರು.
ಕೋಲಾರ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ. ಫೆಂಗಲ್ ಚಂಡಮಾರುತ ಸೋಮವಾರ ತೀವ್ರವಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ಮಳೆಯಾಗುವುವ ಕಾರಣ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಜಿಲ್ಲಾದ್ಯಂತ ಇರುವಂತೆ ಎಲ್ಲಾ ತೆರವಾದ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದಾಗಿ ಕೋಲಾರ ಜಿಲ್ಲಾಧಿಕಾರಿ ಅಕ್ರಮಪಾಷ ತಿಳಿಸಿದ್ದಾರೆ