ಶ್ರೀನಿವಾಸಪುರ:ಅಪರಿಚಿತ ವಾಹನ ಬಡಿದು ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿ ಮೃತ ಪಟ್ಟ ಘಟನೆ ಶನಿವಾರ ತಡ ಸಂಜೆ ಬೆಂಗಳೂರು-ಕಡಪಾ ಹೈವೆಯಲ್ಲಿ ನಡದಿದೆ.
ಮೃತ ವ್ಯಕ್ತಿಯನ್ನು ತಾಲೂಕಿನ ದಲಿತ ಮುಖಂಡ ಗಾಂಡ್ಲಹಳ್ಳಿನಾರಯಣಸ್ವಾಮಿ(65) ಎಂದು ಗುರತಿಸಲಾಗಿದೆ. ಬೆಂಗಳೂರು-ಕಡಪಾ ಹೈವೆಯಲ್ಲಿ ಶನಿವಾರ ಸಂಜೆ ಗಾಂಡ್ಲಹಳ್ಳಿನಾರಯಣಸ್ವಾಮಿ ಚಿಂತಾಮಣಿ ಕಡೆಯಿಂದ ದ್ವಿಚಕ್ರವಾಹದಲ್ಲಿ ಬರುತ್ತಿದ್ದು ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಕ್ರಾಸ್ ಬಳಿ ಎದರುಗಡೆಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ವಾಹನ ಚಲಾಯಿಸುತ್ತಿದ್ದ ಗಾಂಡ್ಲಹಳ್ಳಿನಾರಯಣಸ್ವಾಮಿ ವಾಹನದಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೀಯೆ ಸಾವನಪ್ಪಿರುತ್ತಾರೆ ಎಂದು ಪೋಲಿಸರು ಶಂಕಿಸಿರುತ್ತಾರೆ.ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಬತ್ತರ ದಶಕದಲ್ಲಿ ಕೋಲಾರ ಜಿಲ್ಲೆಯ ದಲಿತ ಸಂಘಟನೆಯಲ್ಲಿ ಚುರುಕಾಗಿದ್ದ ಗಾಂಡ್ಲಹಳ್ಳಿನಾರಯಣಸ್ವಾಮಿ ಅವಿವಾಹಿತರಾಗಿದ್ದು ಪ್ರಖರ ಭಾಷಣಕಾರಾಗಿದ್ದ ಅವರು ಯಾವುದೆ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಳ್ಳದೆ ನೇರ ಹಾಗು ನಿಷ್ಠೂರವಾದಿ ಎಂದು ಖ್ಯಾತರಾಗಿದ್ದರು.
ಶ್ರದ್ದಾಂಜಲಿ ಅರ್ಪಣೆ
ತಾಲೂಕು ಕಚೇರಿ ಮುಂಬಾಗದಲ್ಲಿನ ಅಂಬೇಡ್ಕರ್ ಪುತ್ಥಳಿ ಬಳಿ ತಾಲೂಕಿನ ದಲಿತ ದಂಘಟನೆಗಳ ಮುಖಂಡರು ಗಾಂಡ್ಲಹಳ್ಳಿನಾರಯಣಸ್ವಾಮಿ ಪಾರ್ಥೀವ ಶರಿರ ಇಟ್ಟು ಸಾಮೂಹಿಕವಾಗಿ ಶ್ರದ್ದಾಂಜಲಿ ಅರ್ಪಣೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರು ಸಾಮಾಜಿಕ ಕಳಕಳಿ ಹೊಂದಿದ್ದ ಗಾಂಡ್ಲಹಳ್ಳಿನಾರಯಣಸ್ವಾಮಿ ಸ್ನಾತಕೊತ್ತರ ಪಧವಿದರರಾಗಿ ಎಲ್ಲರ ಜೊತೆ ಬೆರೆಯುವ ಸಹೃದಯಿ ವ್ಯಕ್ತಿತ್ವದ ಅವರದು, ಬದುಕಿನುದ್ದಕ್ಕೂ ಸಮಾಜದಲ್ಲಿ ಸೌಹಾರ್ದತೆಯ ಪ್ರೀತಿ ಸ್ನೇಹ ಸಂಪಾದಿಸಿದಂತ ವ್ಯಕ್ತಿ ಇವತ್ತು ಇಲ್ಲ ಅನ್ನುವುದು ನೋವಿನ ವಿಚಾರ ಎಂದು ದಲಿತ ಸಂಘಟನೆಗಳ ಮುಖಂಡರು ಗಾಂಡ್ಲಹಳ್ಳಿನಾರಯಣಸ್ವಾಮಿಗೆ ನೋವಿನ ವಿದಾಯ ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಉಪ್ಪರಪಲ್ಲಿತಿಮ್ಮಯ್ಯ,ರಾಮಾಂಜಮ್ಮ, ಚಲ್ದಿಗಾನಹಳ್ಳಿಮುನಿವೆಂಕಟಪ್ಪ,ರೊಜರಪಲ್ಲಿವೆಂಕಟರಮಣಪ್ಪ, ಶ್ರೀನಾಥ್,ಅವಲಕುಪ್ಪಬಾಬು, ಹನುಮಂತಪ್ಪ,ನಾಗದೇನಹಳ್ಳಿಶ್ರೀನಿವಾಸ್, ವೆಂಕಟ್ರಾಮಪ್ಪ,ವಕೀಲನಾಗರಾಜ್,ನರಸಿಂಹ ಮುಂತಾದವರು ಇದ್ದರು,