ಶ್ರೀನಿವಾಸಪುರ:ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಪುರಸಭೆ ಅಧ್ಯಕ್ಷರು ಮತ್ತು ದಲಿತ ಸಂಘಟನೆಗಳು ಪುರಸಭೆ ಕಛೆರಿ ಮುಂಬಾಗದಲ್ಲಿ ಶಾಮಿಯಾನ ಹಾಕಿ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಪುರಸಭೆ ಮುಖ್ಯಾಧಿಕಾರಿಗಳು ಅಧ್ಯಕ್ಷೆ ಲಲಿತಾಶ್ರೀನಿವಾಸ್ ಅವರಿಗೆ ಅಧಿಕಾರ ನಡೆಸಲು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಕಳೆದ ಎರಡು ದಿನಗಳಿಂದ ಆಹೋರಾತ್ರಿ ಧರಣಿ ನಡೆಸಲಾಗುತ್ತಿದ್ದೆ.
ಶ್ರೀನಿವಾಸಪುರ ಪಟ್ಟಣದ ವಾರ್ಡುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಕಚೇರಿ ಕಾರ್ಯನಿರ್ವಹಣೆ ಕುರಿತಾಗಿ ಯಾವುದೆ ರೀತಿಯಲ್ಲೂ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಸಹಕಾರ ನೀಡುತ್ತಿಲ್ಲ ಎಂದು ಆರೋಪಮಾಡುತ್ತಾರೆ ಅವರ ವಿರುದ್ಧ ಹಲವು ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದರು ಯಾವುದೆ ಪ್ರಯೋಜನವಿಲ್ಲ,ಎಂದ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆಯಲ್ಲಿ ಅಕ್ರಮವಾಗಿ ಆಡಳಿತ ನಡೆಸುತ್ತಿದ್ದು ಅವರ ವಿರುದ್ದ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಅವರನ್ನು ಈ ಕೂಡಲೆ ಅಮಾನತುಮಾಡುವಂತೆ ಅಗ್ರಹಿಸಿರುತ್ತಾರೆ.
ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಅವರ ಧರಣಿ ಪ್ರತಿಭಟನೆಯನ್ನು ಬೆಂಬಲಿಸಿ ಪ್ರಗತಿ ಪರ ಹಾಗು ದಲಿತ ಸಂಘಟನೆಗಳು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೋಂಡಿದ್ದಾರೆ.
ತಹಶೀಲ್ದಾರ್ ಪಿಡಿಗೂ ಜಗ್ಗದ ಅಧ್ಯಕ್ಷೆ
ಧರಣಿ ನಿರತ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಅವರನ್ನು ಭೇಟಿಮಾಡಿದ ತಹಶೀಲ್ದಾರ್ ಶೀರಿನ್ ತಾಜ್ ಹಾಗು ಕೋಲಾರ ಜಿಲ್ಲಾ ಪೌರಾಡಳಿತ ಅಧಿಕಾರಿ ಮತ್ತು ಪೋಲಿಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ಅವರುಗಳು ಮನವೊಲಿಸುವ ಪ್ರಯತ್ನ ಮಾಡಿ ನಿಮ್ಮ ಮನವಿ ಪತ್ರ ನೀಡಿ ಅದರಂತೆ ಅಧಿಕಾರಿ ವಿರುದ್ದ ಸೂಕ್ತ ತನಿಖೆ ನಡೆಸಿ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು ಒಪ್ಪದ ಅಧ್ಯಕ್ಷೆ ಮುಖ್ಯಾಧಿಕಾರಿಯನ್ನು ಈ ಕೂಡಲೆ ಅಮಾನತ್ತು ಮಾಡುವಂತೆ ಅಗ್ರಹಿಸಿ ಧರಣಿ ಮುಂದುವರೆಸಿದ್ದಾರೆ.
ಕೆ.ಆರ್.ಎಸ್ ಪಕ್ಷದ ಮುಖ್ಯಸ್ಥ ಭೇಟಿ
ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ದಿ ಇಂದು ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ಶ್ರೀನಿವಾಸಪುರಕ್ಕೆ ಆಗಮಿಸಿದ್ದು ಪ್ರಚಾರ ಭಾಷಣ ಮುಗಿಸಿದ ನಂತರ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ನಡೆಸುತ್ತಿರುವ ಧರಣಿ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದರು.