ಶ್ರೀನಿವಾಸಪುರ:ಶ್ರೀನಿವಾಸಪುರದ ಜನತಾದಳದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಗೆದ್ದು ವಿಜಯ ಪತಾಕೆ ಹಾರಸಿದ್ದಾರೆ ತಮ್ಮ ಸಮೀಪದ ಪ್ರತಿಸ್ಪರ್ದಿ ಹಾಲಿ ಶಾಸಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹ್ಯಾಟ್ರಿಕ್ ಗೆಲವಿಗೆ ಬ್ರೆಕ್ ಹಾಕಿ ಸುಮಾರು ಹತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕೋಲಾರ ಜಿಲ್ಲೆಯ ವ್ಯಕ್ತಿಗತ ರಾಜಕೀಯಕ್ಕೆ ಹೆಸರಾದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿನ ಸಾಂಪ್ರದಾಯಿಕ ಎದುರಾಳಿಗಳಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗು ವೆಂಕಟಶಿವಾರೆಡ್ದಿ ಹತ್ತನೆ ಬಾರಿ ಎದುರಾಳಿಗಳಾಗಿ ಸ್ಪರ್ದಿಸಿ ಜಿದ್ದಾ ಜಿದ್ದಿಯಾಗಿ ನಡೆಸಿದ ಹೋರಾಟದಲ್ಲಿ ವೆಂಕಟಶಿವಾರೆಡ್ಡಿ ಭರ್ಜರಿ ಗೆಲವು ಸಾಧಿಸಿದ್ದಾರೆ.ನೀರಿಕ್ಷಿಸಿದಂತೆ ಈ ಕ್ಷೇತ್ರದಲ್ಲಿ ಯಾವುದೆ ಪಕ್ಷದ ಅಭ್ಯರ್ಥಿಗಳು ಸ್ಪರ್ದಿಸಿದ್ದರು ಚುನಾವಣೆ ನಡೆದಿರುವುದು ರಮೇಶ್ ಕುಮಾರ್ ಹಾಗು ವೆಂಕಟಶಿವಾರೆಡ್ದಿ ನಡುವೆ ಇಲ್ಲಿ ಇತರೆ ಪಕ್ಷಗಳ ಅಭ್ಯರ್ಥಿಗಳು ನಗಣ್ಯ.
ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ ಗೆದ್ದ ಜನತಾದಳದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ 94496 ಮತಗಳನ್ನು ಪಡೆದರೆ ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ 84123 ಮತಗಳನ್ನು ಪಡೆದಿರುತ್ತಾರೆ, ಇಬ್ಬರ ನಡುವಿನ ಗೆಲುವಿನ ಅಂತರ 10373 ಮತಗಳು ಇನ್ನುಳಿದಂತೆ ಆಮ್ ಆದ್ಮಿ ಪಕ್ಷದ ಡಾ.ವೆಂಕಟಾಚಲ 2076 ಮತಗಳನ್ನು ಪಡೆದಿದ್ದು ಭಾರತೀಯ ಜನತಾ ಪಕ್ಷದ ಗುಂಜೂರು ಆರ್ ಶ್ರೀನಿವಾಸರೆಡ್ಡಿ 6524 ಮತಗಳು ಪಡೆದಿರುತ್ತಾರೆ, ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿ ಆನಂದ್ ಪಡೆದಂತ ಮತಗಳು 232. ಕಣದಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ದಿಸಿದ್ದ ನಾಲ್ಕು ಜನ ಅಭ್ಯರ್ಥಿಗಳು ಎನ್.ಎಸ್.ರಮೇಶ್ ಕುಮಾರ್146,ಎಸ್.ರಮೇಶ್ ಕುಮಾರ್226,ವೆಂಕಟಶಿವಾರೆಡ್ಡಿ146, ಟಿ.ಎನ್.ವೆಂಕಟಶಿವಾರೆಡ್ಡಿ322, ಪಡೆದಿರುತ್ತಾರೆ. ನೊಟಾಗೆ 673 ಮತಗಳು ಚಲಾವಣೆಯಾಗಿದೆ
ಇದೇ ನನ್ನ ಕೊನೆ ಚುನಾವಣೆ ವಿಜಯೋತ್ಸವದಲ್ಲೆ ನಿವೃತ್ತಿ ಘೋಷಿಸಿದ ವೆಂಕಟಶಿವಾರೆಡ್ಡಿ
ನನಗೆ ರಾಜಕೀಯ ಅಥಾವ ಅಧಿಕಾರ ಹೊಸದಲ್ಲ ನಾನು ಅನುಭವಿ ರಾಜಕಾರಣಿಯಾಗಿದ್ದು ಯಾವುದೆ ಸರ್ಕಾರ ಇದ್ದರು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಶಾಸಕರಾಗಿ ಆಯ್ಕೆಯಾದ ವೆಂಕಟಶಿವಾರೆಡ್ಡಿ ಹೇಳಿದರು ಅವರು ಸುದ್ಧಿಗಾರರೊಂದಿಗೆ ಮಾತನಾಡಿ ಕ್ಷೇತ್ರದ ಮತದಾರರು ಆದರಿಸಿ ನನ್ನ ಮೆಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಜನರ ನೀರಿಕ್ಷೇಯಂತೆ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಹೇಳಿದ ಅವರು ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು ಮುಂದಿನ ದಿನಗಳಲ್ಲಿ ಯಾವುದೆ ಚುನಾವಣೆಗೆ ಸ್ಪರ್ದಿಸುವುದಿಲ್ಲ ಎಂದು ಕಾರ್ಯಕರ್ತರ ವಿಜಯೋತ್ಸವದ ನಡುವೆ ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದರು.