ನ್ಯೂಜ್ ಡೆಸ್ಕ್: ಶೃಂಗಾರ ಮತ್ತು ವಯ್ಯಾರದ ನೃತ್ಯನಟಿ ತನ್ನ ಮಾದಕ ನೃತ್ಯಸೌಂದರ್ಯದಿಂದ 80-90 ರ ದಶಕದಲ್ಲಿ ಯುವಜನತೆಯ ನಿದ್ದೆಗೆಡಿಸಿದ್ದ ಹಿರಿಯ ನಟಿ ಜಯಮಾಲಿನಿ ತನ್ನ ಮಗನ ಮದುವೆ ಮಾಡಿದ್ದಾರೆ.
ದಕ್ಷಿಣ ಭಾರತದ ಚಲನ ಚಿತ್ರ ರಂಗವನ್ನು ತಮ್ಮ ಶೃಂಗಾರ ಹಾಗು ವಯ್ಯಾರದ ನೃತ್ಯದಿಂದ 80-90 ರ ಕಾಲದ ಸ್ಟಾರ್ ಬಹುತೇಕ ಹೀರೋಗಳೊಂದಿಗೆ ಐಟಂ ಸಾಂಗ್ ಗಳಲ್ಲಿ ಹೆಜ್ಜೆ ಹಾಕಿದ ಅವರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು,ಅಭಿಮಾನಿಗಳ ಮೇಲೆ ಅವರ ಪ್ರಭಾವ ಯಾವ ರಿತಿ ಇತ್ತು ಎಂದರೆ ಜಯಮಾಲಿನಿ ಅಥಾವ ಅವರ ಹಿರಿಯ ಸಹೋದರಿ ಜ್ಯೋತಿಲಕ್ಷ್ಮಿ ಶೃಂಗಾರ ನೃತ್ಯ ಇದ್ದರೆ ಸಾಕು ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗುತಿತ್ತು.
ತೆಲಗು ಚಿತ್ರರಂಗದ ದಿವಂಗತ ಎನ್.ಟಿ.ಆರ್ ನಟನೆಯ ಗಜದೊಂಗ ಸಿನಿಮಾದ “ನಿ ಇಲ್ಲು ಬಂಗಾರಮ್ ಕಾನಿ ಹಾಡು”, ವೇಟಗಾಡು ಸಿನಿಮಾದ “ಪುಟ್ಟಿಟ್ಟೋಂಳ್ಳೂ ತರಮೇಸಾರು” ಹಾಡು, ಸೂಪರ್ ಸ್ಟಾರ್ ಕೃಷ್ಣ ಜೊತೆ ನಟಿಸಿದ ಸೂಪರ್ ಹಿಟ್ ಶೃಂಗಾರ ಗೀತೆಗಳು ಕನ್ನಡ ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆಗಿನ ವಯ್ಯಾರದ ಹಾಡುಗಳು ವಿಠಲಾಚಾರ್ಯ ನಿರ್ದೇಶನದ ಜಗನ್ಮೋಹಿನಿ ಮೈಥಾಜಿಕಲ್ ಸಿನಿಮಾಗಳನ್ನು ದಕ್ಷೀಣ ಭಾರತದ ಸಿನಿಮಾ ಪ್ರೇಕ್ಷಕರು ಇಂದಿಗೂ ಮರೆತಿಲ್ಲ.
ಜಯಮಾಲಿನಿ ಅವರು 1994 ರಲ್ಲಿ ಚನೈ ಮೂಲದ ಪೊಲೀಸ್ ಅಧಿಕಾರಿ ಪಾರ್ಥಿಬನ್ ಅವರನ್ನು ವಿವಾಹವಾದ ನಂತರ ಗೃಹಿಣಿಯಾಗಿ ಸಂಪೂರ್ಣವಾಗಿ ಸಿನಿಮಾ ರಂಗದಿಂದ ದೂರ ಉಳಿದುಹೊಗಿದ್ದು ಆಗಾಗ ಯೂಟೂಬ್ ಚಾನಲಗಳಲ್ಲಿ ಸಂದರ್ಶನ ಹೊರತು ಪಡಿಸಿದರೆ ಸಾರ್ವಜನಿಕವಾಗಿ ಬಹುತೇಕ ದೂರ ಉಳಿದಿದ್ದರು.
ಜಯಮಾಲಿನಿ ಅವರ ಮಗ ಶ್ಯಾಮ್ ಹರಿ ಅವರ ವಿವಾಹ ಪ್ರಿಯಾಂಕ ಅವರೊಂದಿಗೆ ಇದೆ ಫೆಬ್ರವರಿ 23-24 ರಂದು ಚೆನ್ನೈನ ವಿಜಿಪಿ ಗೋಲ್ಡನ್ ಬೀಚ್ ರೇಸಾರ್ಟನಲ್ಲಿ ಅದ್ದೂರಿಯಾಗಿ ನಡೆದಿದೆ ಈ ಕಾರ್ಯಕ್ರಮದಲ್ಲಿ ಬಹುತೇಕ ತಮಿಳು ತೆಲಗು ಚಿತ್ರರಂಗದ ಹಿರಿಯ ನಟ-ನಟಿಯರು ಪಾಲ್ಗೋಂಡಿದ್ದರು ಎನ್ನಲಾಗಿದೆ.