ಶ್ರೀನಿವಾಸಪುರ:ಅಪರಿಚಿತ ವಾಹನ ಬಡಿದು ಜಿಂಕೆಯೊಂದು ಸಾವನಪ್ಪಿರುವ ಘಟನೆ ಶ್ರೀನಿವಾಸಪುರ-ಕೋಲಾರ ರಸ್ತೆಯ ದಳಸನೂರು ರಾಜ್ಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಇಂದು ಮಧ್ಯಾನಃ ರಸ್ತೆ ದಾಟಲು ಬಂದ ಜಿಂಕೆಗೆ ಅಪರಿಚಿತ ವಾಹನ ಬಡಿದು ತೀವ್ರ ರಕ್ತಸ್ರಾವವಾಗಿ ಜಿಂಕೆ ಸ್ಥಳದಲ್ಲೆ ಸಾವನಪ್ಪಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ. ಸಾವನಪ್ಪಿರುವ ಗಂಡು ಜಿಂಕೆಗೆ ಐದು ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದ್ದು,ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.
ReadAlso:!https://www.vcsnewz.com/a-car-caught-fire-after-getting-stuck-in-a-bean-field-on-mulbagal-road/ರಸ್ತೆಯಲ್ಲಿನ ಹುರಳಿ ಕಣದಲ್ಲಿ ಸಿಲುಕಿ ಹೊತ್ತಿ ಉರಿದ ಕಾರು