ನ್ಯೂಜ್ ಡೆಸ್ಕ್:ಸ್ವಿಗ್ಗಿ ಡೆಲಿವರಿ ಬಾಯ್ ಅಪಾರ್ಟ್ಮೆಂಟ್ ನಿವಾಸಿಗೆ ‘ಬ್ರೋ’ ಎಂದು ಸಂಬೋಧಿಸಿದ್ದಕ್ಕೆ ಕೋಪಗೊಂಡ ಫ್ಲಾಟ್ ನಿವಾಸಿ ಡಿಲವರಿ ಬಾಯ್ ಅನ್ನು ಅಮಾನವೀಯವಾಗಿ ಹಲ್ಲೆ ಮಾಡಿರುವ ಧಾರುಣ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ನಡೆದಿದೆ.
ಫುಡ್ ಡಿಲವರಿ ಬಾಯ್ ಮೇಲೆ ಹಲ್ಲೆ ಮಾಡಿದ ಅಪಾರ್ಟ್ಮೆಂಟ್ ನಿವಾಸಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡೆಲಿವರಿ ಬಾಯ್ಸ್ ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ವಿಶಾಖಪಟ್ಟಣಂ ನಗರದ ಸೀತಾಮಧಾರ ಪ್ರದೇಶದ ಆಕ್ಸಿಜನ್ ಟವರ್ಸ್ ಅಪಾರ್ಟಮೆಂಟ್ ನ ‘ಬಿ’ ಬ್ಲಾಕ್ ನ 29 ನೇ ಮಹಡಿಯ ಫ್ಲಾಟ್ 2914 ರಲ್ಲಿ ವಾಸಿಸುವ ಪ್ರಸಾದ್ ಅವರಿಗೆ ಸ್ವಿಗ್ಗಿಯಲ್ಲಿನ ಆಹಾರ ಆರ್ಡರ್ ಅನ್ನು ವಿತರಿಸಲು ಡೆಲಿವರಿ ಬಾಯ್ ಅನಿಲ್, ಆಹಾರ ಪಾರ್ಸೆಲ್ ತೆಗೆದುಕೊಂಡು ಮಧ್ಯಾಹ್ನದ ಹೊತ್ತಿಗೆ ಬಂದಿದ್ದಾನೆ ನಿವಾಸಿ ಮನೆ ಮುಂದೆ ನಿಂತು ಕರೆಗಂಟೆ ಬಾರಿಸುತ್ತಿದ್ದಂತೆ ಒರ್ವ ಮಹಿಳೆ ಬಂದು ಬಾಗಿಲು ತೆಗೆದಿದ್ದಾಳೆ ಡಿಲವರಿ ಬಾಯ್ ಅನಿಲ್ ಮಾತು ಆಕೆಗೆ ಅರ್ಥವಾಗದ ಕಾರಣ, ಅಕೆ ಮನೆಯೊಳಗೆ ಹೋಗಿ ಮಾಲಿಕನನ್ನು ಕರೆತಂದಿದ್ದಾಳೆ ಮಾಲಿಕ ಪ್ರಸಾದ್ ಹೊರಗೆ ಬಂದು ಏನು ಎಂದು ಕೇಳಿದ್ದಾನೆ ಡಿಲವರಿ ಬಾಯ್ ಅನಿಲ್ ನಿಮಗೆ ಸ್ವಿಗ್ಗಿಯಲ್ಲಿ ಆಹಾರ ಪಾರ್ಸೆಲ್ ಬಂದಿದೆ ಬ್ರೋ ಎಂದಿದ್ದಾನೆ ಇದರಿಂದ ಸಿಟ್ಟಿಗೆದ್ದ ಮಾಲಿಕ ಪ್ರಸಾದ್ ನನ್ನನ್ನು ಸರ್ ಎನ್ನದೆ ಬ್ರೋ ಎನ್ನುತ್ತಿಯಾ ಎಂದು ಹೇಳಿ ಡಿಲವರಿ ಬಾಯ್ ಮೇಲೆ ಹಲ್ಲೆ ಮಾಡಿದ್ದಾನೆ ಅನಿಲನನ್ನು ಮಹಡಿಯಿಂದ ಕೆಳಗಿಳಿಸಿ ಭದ್ರತಾ ಸಿಬ್ಬಂದಿಯ ಸಹಾಯದೊಂದಿಗೆ ಥಳಿಸಿದ್ದಾರೆ ಇಷ್ಟಕ್ಕೆ ಬಿಡದೆ ಅನಿಲ್ ಬಟ್ಟೆ ಬಿಚ್ಚಿಸಿ, ಒಳ ಉಡುಪಿನಲ್ಲಿ ಅಪಾರ್ಟಮೆಂಟ್ ಹೊರಗೆ ನಿಲ್ಲಿಸಿದ್ದಾರೆ ಕ್ಷಮೆ ಕೋರಿ ಪತ್ರ ಬರೆಸಿಕೊಳ್ಳುವಂತೆ ಬದ್ರತಾ ಸಿಬ್ಬಂದಿಗೆ ಹೇಳಿದ ಮಾಲಿಕ ಪ್ರಸಾದ್ ಅಲ್ಲಿಂದ ಹೊರಟುಹೋಗಿದ್ದಾನೆ.

ಅಪಮಾನ ಸಹಿಸದೆ ಆತ್ಮಹತ್ಯೆಗೆ ಯತ್ನಿಸಿದ ಅನಿಲ್
ಆಕ್ಸಿಜನ್ ಟವರ್ಸ್ನಲ್ಲಿ ಹಲ್ಲೆಗೊಳಗಾಗಿ ಅಪಮಾನ ಸಹಿಸಲಾಗದೆ, ಡಿಲವರಿ ಬಾಯ್ ಅನಿಲ್ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಇದು ಇತರೆ ಡಿಲವರಿ ಹುಡುಗರಿಗೆ ತಿಳಿದು ಎಲ್ಲಾ ಆಹಾರ ವಿತರಣಾ ಹುಡುಗರು ಆಕ್ಸಿಜನ್ ಟವರ್ಸ್ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದಾರೆ ಅನಿಲ್ ಅವಮಾನಿಸಿ ಹಲ್ಲೆ ಮಾಡಿ ಅಮಾನವೀಯವಾಗಿ ನಡೆಸಿಕೊಂಡು ಅತನ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ವಿಶಾಖಪಟ್ಟಣಂ ಸ್ಥಳೀಯ ಪೋಲಿಸರು ಸಂತ್ರಸ್ತ ಅನಿಲ್ ದೂರು ನೀಡಿದರೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದಿದ್ದಾರೆ.