ಶ್ರೀನಿವಾಸಪುರ:ತಾಲೂಕಿನ ದಲಿತ ಸಮುದಾಯದ ಹಿರಿಯ ನಾಯಕ ಹಾಗು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕ್ರೌನ್ಸಿಲರ್ ಶ್ರೀನಿವಾಸನ್ ಅವರ ಹತ್ಯೆಯನ್ನು ಸಿಬಿಐಗೆ ವಹಿಸಬೇಕು ಎಂದು ಇಂದು ವಿವಿಧ ಮಠಾಧೀಶರು ಮತ್ತು ಹಾಗೂ ಸಂಘ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಒಕ್ಕೂರಲಿನಿಂದ ಅಗ್ರಹಿಸಲಾಯಿತು.
ಅ.23 ರಂದು ಕೌನ್ಸಿಲರ್ ಶ್ರೀನಿವಾಸನ್ ಅವರನ್ನು ಅವರ ತೋಟದ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು,ಈ ಸಂಬಂದ ಆರೋಪಿಗಳನ್ನು ಬಂಧಿಸಲಾಗಿದ್ದು ಹಾಗು ಒತ್ತಾಯದ ಮೇರೆಗೆ ಹತ್ಯೆ ತನಿಖೆಯನ್ನು ಸಿಒಡಿಗೆ ವಹಿಸಲಾಗಿದೆ.
ಶ್ರದ್ಧಾಂಜಲಿ ಸಭೆಯಲ್ಲಿ ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು ಮಾತನಾಡಿ ಹುಟ್ಟುಹೋರಾಟಗಾರರಾಗಿದ್ದ ಕೌನ್ಸಿಲರ್ ಶ್ರೀನಿವಾಸನ್ ಹತ್ಯೆಯಾಗಿ ಇಂದು ನಮ್ಮಿಂದ ದೂರವಾಗಿರುವ ವಿಚಾರ ಅತ್ಯಂತ ದುರದುಷ್ಟಕರ,ಅವರ ಹತ್ಯೆಗೆ ಸಂಚು ರೂಪಿಸಿದವರು ಕಾನೂನು ಬದ್ದವಾಗಿ ಶಿಕ್ಷಗೆ ಒಳಗಾದರೆ ಮಾತ್ರ ಹತ್ಯೆಯಾದ ಕೌನ್ಸಿಲರ್ ಶ್ರೀನಿವಾಸನ್ ಅವರಿಗೆ ಚಿರಶಾಂತಿಃ ದೊರೆಯಲಿದೆ ಇಲ್ಲವಾದರೆ ಸಾಧ್ಯವಾಗದು,ಅವರ ಹತ್ಯೆಯನ್ನು ಅವರ ಕುಟುಂಬದ ಹಾಗು ಅಭಿಮಾನಿ ಬಳಗ ಬಯಸಿದಂತೆ ಸಿಬಿಐಗೆ ವಹಿಸಲು ಈ ಶ್ರದ್ಧಾಂಜಲಿ ಸಭೆ ಮೂಲಕ ಒಕ್ಕೂರಲಿನಿಂದ ಅಗ್ರಹಿಸುವುದಾಗಿ ಹೇಳಿದರು.
ಸೇರಗೊಡ್ಡಿ ಬೇಡಿಕೊಳ್ಳುತ್ತೇನೆ ನ್ಯಾಯ ಕೊಡಿಸಿ
ಕೌನ್ಸಿಲರ್ ಶ್ರೀನಿವಾಸನ್ ಪತ್ನಿ ಖ್ಯಾತ ವೈದ್ಯೆ ಚಂದ್ರಕಲಾ ಮಾತನಾಡಿ ಶ್ರೀನಿವಾಸನ್ ಇಲ್ಲದ ನಮ್ಮ ಬದುಕು
ಕಷ್ಟವಾಗಿದೆ ತೀರಿ ಹೋದವರು ಮತ್ತೆ ಬರಲಾರರು ಇವತ್ತು ನಾವು ಕಷ್ಟದಲ್ಲಿ ಇದ್ದೇವಿ ನಮ್ಮ ಕಷ್ಟ ಏನು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಕೌನ್ಸಿಲರ್ ಶ್ರೀನಿವಾಸನ್ ಹತ್ಯೆ ಹಿಂದೆ ಮಹಾ ಪಿತೂರಿ ಇದೆ ಈ ಬಗ್ಗೆ ಸರ್ಕಾರ ತೀವ್ರವಾಗಿ ಪರಿಗಣಿಸಬೇಕು ಇದಕ್ಕಾಗಿ ನಾನು ಶೋಷಿತ ಸಮಾಜದ ಮಹಿಳೆಯಾಗಿ ಸಮುದಾಯದ ಪ್ರತಿನಿಧಿಯಾಗಿ ಸರ್ಕಾರವನ್ನು ಸೇರಗೊಡ್ಡಿ ಬೇಡಿಕೊಳ್ಳುತ್ತೇನೆ ನ್ಯಾಯ ಕೊಡಿಸಿ ಹತ್ಯೆಯನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ,ಗೃಹಸಚಿವರು ಹಾಗು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಬೇಡಿಕೆಯನ್ನು ಪರಿಗಣಿಸುವಂತೆ ಒತ್ತಾಯಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಚಳ್ಳಕೆರೆ ತಿಪ್ಪೇರುದ್ರ ಸ್ವಾಮಿ,ಸಿದ್ದರಾಮ ಚೈತನ್ಯ ಸ್ವಾಮೀಜಿ, ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ,ವಾಲ್ಮೀಕಿ ಸಮಾಜದ ಮುಖಂಡ ಹೊಗಳಗೆರೆ ಅಂಜಪ್ಪ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು,ಚಿಂತಾಮಣಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಡಂಪಲ್ಲಿಶ್ರೀನಿವಾಸ್,ಪುರಸಭೆ ಸದಸ್ಯ ಭಾಸ್ಕರ್, ಪಿಎಲ್.ಡಿ ಅಧ್ಯಕ್ಷ ದಿಂಬಾಲ ಆಶೋಕ್, ಮಾಜಿ ಸದಸ್ಯ ಶಂಕರ್,ದಲಿತ ಮುಖಂಡರಾದ ವರ್ತನಹಳ್ಳಿ ವೆಂಕಟೇಶ್,ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಈರಪ್ಪ,ರಾಮಾಂಜಮ್ಮ,ತಿಮ್ಮಯ್ಯ,ಕಿರುವಾರ ಶ್ರೀನಿವಾಸ್ ಸೇರಿದಂತೆ ಮುಂತಾದವರು ಇದ್ದರು.