- ಡಿಗ್ರಿ ಹಾಸ್ಟಲ್ ನಿರ್ವಹಣೆ ಇಲ್ಲದೆ
- ದನದ ಕೊಟ್ಟಿಗೆಯಂತಾಗಿದೆ
- ಮೇಲ್ವಿಚಾರಕ ಪತ್ತೆ ಇಲ್ಲ
ಶ್ರೀನಿವಾಸಪುರ:ಪಟ್ಟಣದ ಸರ್ಕಾರಿ ಪದವಿ ಹಾಸ್ಟಲ್ ನಿರ್ಹಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಅಸಡ್ಡೆ ತೋರುತ್ತಿದ್ದಾರೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಗರಂ ಆಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ದೂರವಾಣಿ ಮೂಲಕ ತರಾಟೆಗೆ ತಗೆದುಕೊಂಡರು.
ಇಂದು ಭಾನುವಾರ ಉಪಲೋಕಾಯುಕ್ತ ಬಿ.ವೀರಪ್ಪ ಮತ್ತು ಎಸ್.ಪಿ ಧನಂಜಯ್ ಡಿ.ವೈ.ಎಸ್.ಪಿ ಸೂರ್ಯನಾರಯಣ್ ತಂಡ ಅವರು ಶ್ರೀನಿವಾಸಪುರದ ಸರ್ಕಾರಿ ಪದವಿ ಹಾಸ್ಟಲ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಕೆಂಡಾಮಂಡಲವಾದರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಅವರು ಇಂತಹ ವಾತವರಣದಲ್ಲಿ ವಿದ್ಯಾರ್ಥಿಗಳು ವಾಸ ಮಾಡಲು ಯೋಗ್ಯವಾಗಿಲ್ಲ ಇಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲ ಅಡುಗೆ ಕೋಣೆಯಲ್ಲಿ ಸ್ವಚ್ಚತೆ ಇಲ್ಲ ಕಟ್ಟಡದ ಕಾಂಪೌಂಡಿಗೆ ಗೇಟ್ ಹಾಳಾಗಿದ್ದರು ಸರಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ ಹಾಸ್ಟಲ್ ಮೇಲ್ವಿಚಾರಕ ನಾಪಪತ್ತೆ ಆಗಿದ್ದಾನೆ ದನಗಳ ಕೊಟ್ಟಿಗೆಯಂತಿದೆ ಇಲ್ಲಗಳ ನಡುವೆ ಮಕ್ಕಳು ವಿದ್ಯಾಭ್ಯಾಸ ಮಾಡುವಂತ ಶೋಚನೀಯ ಪರಿಸ್ಥಿತಿ ಇದೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷತನ ಬೇಜಾವಾಬ್ದಾರಿ ಕಾರಣ ಆಗಿದೆ,ಈ ಬಗ್ಗೆ ನಿಮ್ಮ ಮೇಲೆ ಸುಮೋಟೊ ಕೆಸ್ ದಾಖಲಿಸುವ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಆಸ್ಪತ್ರೆ ಸೇವೆಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು
ಸಾರ್ವಜನಿಕ ಅಸ್ಪತ್ರೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ರೋಗಿಗಳನ್ನು ಮಾತನಾಡಿ ಅಸ್ಪತ್ರೆಯಲ್ಲಿ ಸಿಗುತ್ತಿರುವ ಸೇವೆ ಕುರಿತಾಗಿ ಮಾಹಿತಿ ಪಡೆದುಕೊಂಡ ಅವರು ನಂತರ ಔಷಧಿ ವಿತರಣೆ ಕೌಂಟರ್ ಹಾಗು ದಾಸ್ತಾನು ಕೊಠಡಿ ಪರಶಿಲಿಸಿ ನಂತರ ಕರ್ತವ್ಯದಲ್ಲಿದ್ದ ವೈದ್ಯರನ್ನು ಮಾತನಾಡಿದರು. ಇಲ್ಲಿಗೆ ಬರುವಂತವರು ಬಡವರು ಸಾಮಾನ್ಯರು ಅಂತವರಿಗೆ ಅರ್ಹ ಚಿಕಿತ್ಸೆ ಸಿಗದಿದ್ದರೆ ಹೇಗೆ ಈ ಬಗ್ಗೆ ಆಗುತ್ತಿರುವ ಲೋಪ ಸರಿಮಾಡಿಕೊಳ್ಳಿ ಎಂದು ತಿಳಿ ಹೇಳಿದರು, ಶೌಚಾಲಯ ನಿರ್ವಹಣೆ ಸಮರ್ಪಕವಾಗಿಲ್ಲ ಹಿಂದೆಲ್ಲ ಚನ್ನಾಗಿದ್ದ ಸಾರ್ವಜನಿಕ ಅಸ್ಪತ್ರೆ ಪರಿಸ್ಥಿತಿ ಹೀಗೆಕಾಯಿತು ಈ ಬಗ್ಗೆ ವೈದ್ಯಾಧಿಕಾರಿಗಳು ಮುತುವರ್ಜಿ ವಹಿಸುವಂತೆ ಸೂಚಿಸಿದರು.