ನ್ಯೂಜ್ ಡೆಸ್ಕ್:ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೋಮ ಪೂಜೆ ಹವನ ಮಾಡಿಸುವುದರಲ್ಲಿ ಬಾರಿ ಫೇಮಸ್ಸು ಅದರಲ್ಲೂ ಅವರ ಮಗ ಹೆಚ್.ಡಿ.ರೇವಣ್ಣ ಇನ್ನೂ ಒಂದು ಹೆಜ್ಜೆ ಮುಂದು,ಪೂಜೆ ಹೋಮ ಹವನಗಳ ಮೇಲೆ ಅಪಾರವಾದ ನಂಬಿಕೆ ಇಟ್ಟಿರುವ ಹೆಚ್.ಡಿ.ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಹಾಗು ಪುತ್ರರಾದ ಸಂಸದ ಪ್ರಜವಲ್,ವಿಧಾನಪರಿಷತ್ ಸದಸ್ಯ ಸೂರಜ್ ಸೇರಿ ನಾಲ್ಕು ಜನ ರಹಸ್ಯವಾಗಿ ಹೈದರಾಬಾದ್ ಪ್ರವಾಸ ಕೈಗೊಂಡು ಅಲ್ಲಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ನೇತೃತ್ವದಲ್ಲಿ ರಾಜ್ಯ ಶ್ಯಾಮಲಾ, ಭಗಲಾಮುಖಿ, ತಾರಾ ಹಾಗೂ ಚಿನ್ನ ಮಸ್ತ ದೇವತೆಗಳ ಹೆಸರಿನಲ್ಲಿ ಹೋಮ ಹವನ ಪೂಜೆ ಸಲ್ಲಿಸಿರುತ್ತಾರೆ, ಹೈದರಾಬಾದ್ ನಲ್ಲಿರುವ ಜ್ಯೋತಿಷಿ ವೇಣು ಸ್ವಾಮಿ ತೆಲಗು ರಾಜ್ಯಗಳ ರಾಜಕಾರಣಿಗಳ ಹಾಗು ಖ್ಯಾತ ಸಿನಿಮಾ ನಟ-ನಟಿಯರ, ಖ್ಯಾತ ಉದ್ಯಮಿಗಳ ಹಾಟ್ ಫೇವರಿಟ್ ಜ್ಯೋತಿಷಿ,ರಾಜ್ಯದ ಪವರ್ ಫುಲ್ ರಾಜಕಾರಣಿ ಡಿ.ಕೆ.ಶಿವಕುಮಾರ್ ಆಪ್ತರು ಆಗಿದ್ದು ಕಳೆದ ರಾಜ್ಯ ವಿಧಾನ ಸಭೆ ಮುಂಚಿತವಾಗಿ ಬೆಂಗಳೂರಿನ ಶಿವಕುಮಾರ್ ಮನೆಯಲ್ಲಿ ವಿಶೇಷ ಹವನ ಪೂಜೆಗಳನ್ನು ಮಾಡಿಸಿದ್ದಾರಂತೆ.ತೆಲಗು ಸಿನಿಮಾ ರಂಗದ ದೊಡ್ಡ ಸ್ಟಾರ್ ಸಿನಿಮಾಗಳ ಮೂಹುರ್ತಕ್ಕೆ ವೇಣು ಸ್ವಾಮಿ ಸಲಹೆ ಕೇಳುವುದು ಸಾಮಾನ್ಯ ಎನ್ನಲಾಗುತ್ತದೆ.
ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾತುಕತೆ ನಡೆಯುತ್ತಿರುವಾಗ ರೇವಣ್ಣ ಕುಟುಂಬ ವೇಣು ಸ್ವಾಮಿ ನೇತೃತ್ವದಲ್ಲಿ ಮಾಡಿಸಿದ ಪೂಜೆಗಳು ಯಾವ ರೀತಿಯ ಫಲ ನೀಡಲಿದಿಯೋ ಕಾದು ನೋಡಬೇಕಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ರೇವಣ್ಣ ಅತ್ತ ಸಹೋದರ ಇತ್ತ ಪತ್ನಿ ಹೀಗೆ ರಾಜಕೀಯ ತೋಳಲಾಟದಲ್ಲಿ ಸಿಲುಕಿದ್ದರು ನಂತರದಲ್ಲಿ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳು ಪಡೆದು ಪಕ್ಷದ ವರ್ಚಸ್ಸು ಗಣನೀಯವಾಗಿ ಕುಸಿದಿದೆ ಹಾಗೆ ಚುನಾವಣೆ ಬಳಿಕ ರೇವಣ್ಣ ಪಕ್ಷದಲ್ಲಿ ತೀರಾ ಸೈಲೆಂಟ್ ಆಗಿದ್ದಾರೆ ಈ ನಡುವೆ ಜೆಡಿಎಸ್ ಪಕ್ಷದ ಬಹುತೇಕ ಶಾಸಕರು ಮುಖಂಡರು ತಮ್ಮ ಮುಂದಿನ ರಾಜಕೀಯ ಅಸ್ತಿತ್ವ ಏನು ಎಂಬ ಚಿಂತಯಲ್ಲಿರುವಾಗ ಹೆಚ್.ಡಿ.ರೇವಣ್ಣ ತಮ್ಮದೆ ಆದಂತ ರಾಜಕೀಯ ಲೆಕ್ಕಾಚಾರದಲ್ಲಿ ಪಕ್ಷದ ಭವಿಷ್ಯತ್ ಅಥಾವ ರೇವಣ್ಣ ಕುಟುಂಬದ ರಾಜಕೀಯ ಅಸ್ತಿತ್ವಕ್ಕಾಗಿ ಹೋಮ ಪೂಜೆ ಮೊರೆ ಹೋದರ?ಯಾವುದೆ ನಿಕರವಾದ ಮಾಹಿತಿ ಇಲ್ಲ. ವೇಣು ಸ್ವಾಮಿಯ ಆರಾಧನೆ ಫಲ ನೀಡಿದ್ದೆ ಆದರೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಗತವೈಭವ ತರುವಂತಾಗಿ ರಾಜಕಾರಣದ ಚಕ್ರ ತಿರುಗಸಲಿದೀಯಾ ಕಾದು ನೋಡಬೇಕಿದೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22