ಶ್ರೀನಿವಾಸಪುರ:ಸಾಮಜಿಕ ನ್ಯಾಯದ ಅನುಷ್ಟಾನಕ್ಕಾಗಿ ಕ್ಷೇತ್ರದಲ್ಲಿರುವ ಹಿಂದುಳಿದ ಅಲ್ಪಸಂಖ್ಯಾತ ಹಾಗು ಶೋಷಿತ ಸಮುದಾಯಗಳ ಅಭಿವೃದ್ಧಿಯನ್ನು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ ಜಮೀನುಗಳ ವಿಚಾರದಲ್ಲಿ ಎಲ್ಲಾ ವರ್ಗದ ಜನರಿಗೂ ಅನ್ಯಾಯವಾಗಿದೆ,ಸೂರು ರಹಿತ ಜನರಿಗೆ ಪ್ರಾಮಾಣಿಕವಾಗಿ ನ್ಯಾಯ ಸಿಕ್ಕಿಲ್ಲ ವಿಶೇಷವಾಗಿ ಪರಿಶಿಷ್ಟ ಜಾತಿ ಜನಾಂಗದ ಬಂಧುಗಳಿಗೆ ಸಿಗಬೇಕಾದ ಸರ್ಕಾರಿ ಸೌಲತ್ತುಗಳು ಸಿಗದೆ ತೀವ್ರವಾದ ಅನ್ಯಾಯವಾಗಿದೆ
ಇವರ ಅಭಿವೃದ್ಧಿಗಾಗಿ ವಿಶೇಷ ಆಸಕ್ತಿ ವಹಿಸಿ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಇದಕ್ಕೆ ಎಲ್ಲ ವರ್ಗದ ಜನರ ಸಹಕಾರ ಬಯಸುತ್ತೇನೆ ಎಂದು ನೂತನವಾಗಿ ಆಯ್ಕೆಯಾಗಿರುವ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಬುಧವಾರ ಶ್ರೀನಿವಾಸಪುರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರಿಗೆ ಕೃತಙ್ಞತೆ ಸಲ್ಲಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಬಡಜನರ ಅಭಿವೃದ್ಧಿಗೆ ಮಾಡಬೇಕಾದ ಕೆಲಸಗಳು ಸಾಕಷ್ಟು ಇದೆ ಸರ್ಕಾರದ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಜರೂರಾಗಿ ಆಗಬೇಕಿದೆ ಅದಕ್ಕೆ ಆದ್ಯತೆ ಕೊಡಬೇಕು ಅಧಿಕಾರಿಗಳ ಸಹಕಾರ ಪಡೆದು ಈ ತಕ್ಷಣದಿಂದಲೆ ಕೆಲಸ ಮಾಡುತ್ತೇನೆ.ಶ್ರೀನಿವಾಸಪುರ ಪಟ್ಟಣದ ರಸ್ತೆಗಳು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲೂ ಆಗಿರುವಂತ ಅನ್ಯಾಯಗಳನ್ನು ಸರಿಮಾಡಬೇಕಿದೆ ಅಧಿಕಾರಿಗಳ ಬೇಜವಬ್ದಾರಿ ಎಸಗಿರುವ ಅಕ್ರಮಗಳ ಕುರಿತಾಗಿ ಪರಶೀಲನೆ ಮಾಡುವುದಾಗಿ ತಿಳಿಸಿದರು.ರಾಜಕೀಯ ವಿಚಾರಕ್ಕಾಗಿ ಯಾರು ಧ್ವೇಷದ ಭಾವನೆ ಬೆಳಸಿಕೊಳ್ಳಬೇಡಿ ಶಾಂತಿಯಿಂದ ವರ್ತಿಸಿ ಎಲ್ಲರು ಸಹೋದರತ್ವದಿಂದ ನಡೆದುಕೊಳ್ಳಿ ಎಂದರು.
ರೋಡ್ ಶೋ ನಡೆಸುವುದಕ್ಕೂ ಮುಂಚಿತವಾಗಿ ವೆಂಕಟಶಿವಾರೆಡ್ಡಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಗ್ರಾಮದೇವತೆ ಶ್ರೀ ಚೌಡೇಶ್ವರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಪಾಲ್ಗೋಂಡರು
ಈ ಸಂದರ್ಭದಲ್ಲಿ ಮುಖಂಡರಾದ ಶೇಷಾಪುರ ಡಾ.ಗೋಪಾಲ್,ಎಸ್.ಎಲ್.ಎನ್.ಮಂಜುನಾಥ್,ಶೋರೂಮ್ ನಾರಯಣಸ್ವಾಮಿ, ಬಿ.ಕೃಷ್ಣಾರೆಡ್ಡಿ, ಮೀಸಗಾನಹಳ್ಳಿವೆಂಕಟರೆಡ್ಡಿ, ನಾಸೀರ್,ಕಿಸಾನ್ ಏಜಾಜ್,ಕೆ.ಎಂ.ಎಫ್ ಮಾಜಿ ನಿರ್ದೇಶಕ ಪಾಳ್ಯಂಬೈರೆಡ್ಡಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಗೊಟ್ಟಿಕುಂಟೆ ಕೃಷ್ಣಾರೆಡ್ಡಿ, ಹಳೇಪೇಟೆಮಂಜು, ರಾಮಚಂದ್ರೇಗೌಡ, ಬಂಡಪಲ್ಲಿಕೃಷ್ಣಾರೆಡ್ಡಿ,ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ,ಶ್ರೀನಿವಾಸಪ್ಪ ಹಾಲಿ ಸದಸ್ಯ ಅನಂದಗೌಡ, ವಿಶ್ವನಾಥ್ ಮುಂತಾದವರು ಇದ್ದರು