- ಸರ್ಕಾರದ ಕಟ್ಟುನಿಟ್ಟಾದ ನಿಯಮಾವಳಿ
- ವ್ಯಾಪಾರ ಮಾಡದ ಅಧಿಕೃತ ಪರವಾನಗಿದಾರರು
- ಅನಧಿಕೃತ ಪಟಾಕಿ ವ್ಯಾಪಾರಸ್ಥರಿಂದ ಡಬಲ್ ಧರಕ್ಕೆ ಮಾರಾಟ
ಶ್ರೀನಿವಾಸಪುರ: ಹಿಂದುಗಳ ಅತ್ಯತಂತ ಪವಿತ್ರವಾದ ಬೆಳಕಿನ ಹಬ್ಬ ದೀಪಾವಳಿ, ಈ ಹಬ್ಬದಲ್ಲಿ ಹುಡುಗರಿಂದ ಹಿಡಿದು ದೊಡ್ಡವರತನಕ ನರಕಾಸುರನ ಸಂಹಾರ ಮಾಡಿದ ದಿನವಾಗಿ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಹಾಗೆ ಸ್ಥಳೀಯವಾಗಿ ಗ್ರಾಮೀಣ ಭಾಗದಲ್ಲಿ ಕೇದಾರೇಶ್ವರ ವ್ರತಾಚರಣೆ(ಕಜ್ಜಾಯಗಳ ಹಬ್ಬ) ಸೋಮವಾರಗಳು ಕಿರುದೀಪಾವಳಿ ಕೊನೆ ಸೋಮವಾರ ಹೀಗೆ ಕಾರ್ತಿಕ ಮಾಸದ ತಿಂಗಳ ಪೂರ್ತಿ ಹಬ್ಬ ಆಚರಿಸುವುದು ವಾಡಿಕೆ, ಹೀಗೆ ಹಬ್ಬ ಮಾಡುವವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ ಅಂತಹ ಪಟಾಕಿಗಳನ್ನು ಮಾರಾಟಮಾಡಲು ಶ್ರೀನಿವಾಸಪುರದಲ್ಲಿ ಪಟಾಕಿ ವ್ಯಾಪಾರಸ್ಥರೆ ಇಲ್ಲದಂತಾಗಿ ಪಟಾಕಿ ಪ್ರಿಯರು ನಿರಾಸೆಗೊಂಡಿದ್ದಾರೆ. ಮಕ್ಕಳ ಅಟಿಕೆ ಪಿಸ್ತೂಲ್,ಯುವಕರ ಲಕ್ಷ್ಮೀ ಪಟಾಕಿ, ಆಟಮ್ ಭಾಮ್,ಯುವತಿಯರ ಫ್ಲವರ್ ಪಾಟ್,ಭೂಚಕ್ರಗಳು ಸಿಗದೆ ನಿರಾಸೆ ಗೊಂಡ ಅವರು ಕೊನೆಗೆ ಸೊಂದುಗೊಂದಿಗಳಲ್ಲಿ ಅನಧಿಕೃತವಾಗಿ ಚೀಟಿ ಪಟಾಕಿ ಏಜೆಂಟರು ಮಾರುವ ಕಡಿಮೆ ಗುಣಮಟ್ಟದ ಪಟಾಕಿಗಳನ್ನು ದುಬಾರಿ ಧರ ಕೊಟ್ಟು ತಂದು ಪಟಾಕಿ ಸಿಡಿಸಿ ಆಸೆ ತಿರಿಸಿಕೊಂಡ ಬಗ್ಗೆ ಹೇಳುತ್ತಾರೆ.
ಯಾಕೆ ಈ ವರ್ಷ ಮಾರುಕಟ್ಟೆಯಲ್ಲಿ ಪಟಾಕಿ ವ್ಯಾಪಾರ ಇಲ್ಲ?
ಅನೇಕಲ್ ನಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ದುರಂತದಲ್ಲಿ ಸಾವು-ನೋವುಗಳಾಗಿದ್ದವು. ಇದರಿಂದ ಎಚ್ಚತ್ತ ರಾಜ್ಯ ಸರ್ಕಾರ ರಾಜ್ಯದ್ಯಂತ ಪಟಾಕಿ ಮಾರಾಟಕ್ಕೆ ವಿಶೇಷ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ ಪರಿಣಾಮ ಅಧಿಕೃತ ಪಟಾಕಿ ಮಾರಾಟಗಾರರು ತಮ್ಮ ವ್ಯಾಪಾರವನ್ನೆ ನಿಲ್ಲಿಸಿ ಬಿಟ್ಟಿದ್ದಾರೆ.ಪಟಾಕಿ ಮಾರಾಟ ಮತ್ತು ಬಳಕೆಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ.ತಾಲೂಕು ಆಡಳಿತ ನೀವು ಪಟಾಕಿ ಮಾರಾಟಮಾಡುವ ಹಾಗಿದ್ದರೆ ಊರ ಹೊರಗೆ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆ ಹಾಕಿಕೊಂಡು ಮಾರಾಟ ಮಾಡಿ ಊರೋಳಗೆ ಜನವಸತಿ ಪ್ರದೇಶದಲ್ಲಿ ಮಾರಾಟಮಾಡಲು ಅವಕಾಶ ಇಲ್ಲ ನಿಯಮಾವಳಿ ಮೀರಿ ಪಟಾಕಿ ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಾಲೂಕು ಆಡಳಿತ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಇದ್ದ ಇಬ್ಬರು ಅಧಿಕೃತ ಪಟಾಕಿ ಮಾರಾಟಗಾರರು ನಾವು ಮಾಡುವ ವ್ಯಾಪಾರ ಅತಿ ಸಣ್ಣದಾಗಿದ್ದು ಇದು ನಮ್ಮ ನಮ್ಮ ವಹಿವಾಟಿಗೆ ದುಬಾರಿ ನಿಯಮಗಳನ್ನು ಜಾರಿಗೆ ತಂದಿದ್ದು ನಾವು ವ್ಯಾಪರಮಾಡಲು ಸಾಧ್ಯ ಆಗುವುದಿಲ್ಲ ಎಂದು ತಮ್ಮ ವ್ಯಾಪರವನ್ನೆ ಸ್ಥಗಿತ ಗೊಳಿಸಿದ್ದಾರೆ.
ತಾಲೂಕಿನಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಇಬ್ಬರು ಗೌವನಪಲ್ಲಿಯಲ್ಲಿ ನಾಲ್ಕು ಮಂದಿ ಒಟ್ಟು ಆರು ಮಂದಿ ಅಧಿಕೃತ ಪಟಾಕಿ ಪರವಾನಗಿದಾರರು ಇದ್ದು ಉಳಿದಂತೆ ಯಲ್ದೂರು,ಅಡ್ದಗಲ್,ರಾಯಲ್ಪಾಡು,ಸೋಮಯಾಜಲಹಳ್ಳಿ ಸೇರಿದಂತೆ ತಾಲೂಕಿನಾದ್ಯಂತ ಅನಧಿಕೃತ ಪಟಾಕಿ ಮಾರಾಟಗಾರರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಇವರ ಜೊತೆಗೆ ಪಟಾಕಿ ಚೀಟಿ ಏಜೆಂಟರು ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಾರೆ ಮನೆಗಳಲ್ಲೆ ಪಟಾಕಿ ಶೇಖರಿಸುತ್ತಾರೆ. ಇವರಿಗೆಲ್ಲ ಇಲ್ಲದ ನಿಯಾಮಾವಳಿಗಳು ಅಧಿಕೃತ ಪರವಾನಗಿ ದಾರರಿಗೆ ಯಾಕೆ ಎನ್ನುತ್ತಾರೆ, ನಾವು ಸರ್ಕಾರದ ನಿಯಮಾವಳಿಗಳಂತೆ ಇಷ್ಟು ವರ್ಷಗಳ ಕಾಲ ಪಟಾಕಿ ಮಾರಾಟ ಮಾಡಿಕೊಂಡು ಬರುತ್ತಿದ್ದು ಈ ವರ್ಷ ಅನೇಕಲ್ ಪಟಾಕಿ ಗೋದಾಮು ಬೆಂಕಿ ದುರಂತ ಮುಂದಿಟ್ಟುಕೊಂಡು ಇಲ್ಲದ ಕಾನೂನು ಜಾರಿಗೆ ತಂದ ಹಿನ್ನಲೆಯಲ್ಲಿ ಅಧಿಕೃತ ಪರವಾನಗಿದಾರರು ವ್ಯಾಪಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ಏರ್ಪಟ್ಟಿದೆ ಎಂದು ಅಲವತ್ತುಕೊಳ್ಳುತ್ತಾರೆ.
ಅನಧಿಕೃತ ಪಟಾಕಿ ವ್ಯಾಪಾರಸ್ಥರಿಂದ ಧಾಂ ಧೂಮ್ ವ್ಯಾಪರ!
ಅಧಿಕೃತ ಪಟಾಕಿ ಮಾರಾಟಗಾರರು ಇಲ್ಲದ ಹಿನ್ನಲೆಯಲ್ಲಿ ಅನಧಿಕೃತ ಪಟಾಕಿ ವ್ಯಾಪಾರಸ್ಥರು ದೊಡ್ಡಮಟ್ಟದಲ್ಲಿ ಪಟಾಕಿ ವ್ಯಾಪಾರ ಪಡೆಯಲು ಮುಂದಾಗಿದ್ದಾರೆ ವಾರ್ಷಿಕ ಪಟಾಕಿ ಚೀಟಿ ನಡೆಸುವರು ಹಾಗು ಕದ್ದು ಮುಚ್ಚಿ ಕಿರಾಣಿ ಅಂಗಡಿಯಲ್ಲಿ ಪಟಾಕಿ ಮಾರುವರು ಧಾಂ ಧೂಮ್ ಎಂದು ಪಟಾಕಿ ವ್ಯಾಪರಮಾಡುತ್ತ ದೊಡ್ಡಮಟ್ಟದಲ್ಲಿ ಲಾಭ ಗಳಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಅನಧಿಕೃತ ಪಟಾಕಿ ವ್ಯಾಪಾರಸ್ಥರು ಕೋಲಾರದ ಸುಗಟೂರು ಮತ್ತು ತಮಿಳನಾಡಿನ ಹೊಸೂರಿನಿಂದ ತಂದು ಯಾವುದೆ ನಿಯಮಾವಳಿಗಳು ಪಾಲಿಸದೆ ರಾಜರೋಷವಾಗಿ ವ್ಯಾಪರಮಾಡುತ್ತಿದ್ದಾರೆ ತಾಲೂಕು ಆಡಳಿತವಾಗಲಿ,ಪೋಲಿಸ್ ಇಲಾಖೆ ಇದಕ್ಕೂ ನಮಗೂ ಸಂಬಂದವೆ ಇಲ್ಲವೇನೊ ಎಂಬಂತಿದೆ ಎಂದು ಹೇಳಲಾಗುತ್ತಿದೆ