ಕೋಲಾರ: ಎರಡು ವರ್ಷದಿಂದ ಮಹಾಮಾರಿ ಕೋರೊನ ಇಡೀ ಜನ ಸಮೂಹವನ್ನು ಬೆಚ್ಚಿ ಬೀಳಿಸಿದ್ದು,ಸಮಾಜದಲ್ಲಿ ತೀವ್ರ ಸಂಕಷ್ಟದ ಪರಿಸ್ಥಿತಿ ಏರ್ಪಟ್ಟಿದೆ. ಪರಿಸ್ಥಿಗೆ ಹೊಂದಿಕೊಂಡು ಜೀವನ ನಡೆಸಬೇಕು ಎಂದು ಅಕ್ಷಯ ಫಲ ಸಂಸ್ಥೆಯ ಮುಖ್ಯಸ್ಥ ನವೀನ್ ಸಿಂಗ್ ಸಲಹೆ ನೀಡಿದರು.
ಕೋಲಾರ ನಗರದ ವಿವಿಧ ಬಡಾವಣೆಗಳಲ್ಲಿ ಅಕ್ಷಯ ಫಲ ಸಂಸ್ಥೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ದಿನಸಿ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಬಡವರಿಗೆ ದಿನಸಿ, ತರಕಾರಿ ಕಿಟ್ ವಿತರಣೆ ಮಾಡಲು ಸಂಸ್ಥೆಯಿಂದ ತೀರ್ಮಾನಕೈಗೊಳ್ಳಲಾಗಿದೆ. ಅರ್ಹ ಬಡವರನ್ನು ಗುರುತಿಸಲು ಸ್ವಯಂ ಸೇವಕರನ್ನು ವಾರ್ಡುವಾರು ನೇಮಕ ಮಾಡಿದ್ದು,
ಕೀಲುಕೋಟೆ, ವಿಭೂತಿಪೂರ, ಗಲ್ ಪೇಟೆ, ಮುನೇಶ್ವರ ನಗರದ ಖಾಸಗಿ ಶಾಲಾ ಶಿಕ್ಷಕರಿಗೆ, ಮನೆಗೆಲಸದವರಿಗೆ ಹಾಗೂ ಕೆಲ ಕಾರ್ಮಿಕರಿಗೆ ಮೊದಲ ಹಂತವಾಗಿ 7೦ ಮಂದಿಗೆ ಕಿಟ್ ವಿತರಣೆ ಮಾಡಲಾಗಿದ್ದು ಒಟ್ಟು ಮೂನ್ನೂರಕ್ಕೂ ಹೆಚ್ಚು ಕಿಟ್ ವಿತರಿಸುವ ಗುರಿ ಹೊಂದಿರುವುದಾಗಿ ಹೇಳಿದರು.
ಕೋರೊನ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇದರಿಂದಾಗಿ ಸೋಂಕು ಮುಕ್ತರಾಗಲು ಸಹಕಾರಿಯಾಗುತ್ತದೆ. ಸೋಂಕು ನಿರ್ಮೂಲನೆ ಸ್ಥೈರ್ಯವಾಗಿ ಧೈರ್ಯದಿಂದ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಪ್ರದೀಪ್ ನಾಯಡು, ಮಂಜುನಾಥ್, ಜನಾರ್ಧನ್, ಸುನೀಲ್, ಸಂಜಯ್ ಕುಮಾರ್, ಅಬ್ದುಲ್ ಹಾಜರಿದ್ದರು.
ವರದಿ:ಸುದರ್ಶನರೆಡ್ಡಿ