ಶ್ರೀನಿವಾಸಪುರ:ಜನರ ನಡುವೆ ಸೌಹಾರ್ದತೆಯ ಮಾನವೀಯ ಸಂಭಂದಗಳು ಇರಬೇಕು ಇದರಿಂದ ಸಮಾಜದಲ್ಲಿ ಆರೋಗ್ಯಪೂರ್ಣ ವಾತವರಣ ಇರುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ ಹೇಳಿದರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲದ ನಿವಾಸಿ ಸಕ್ಕರೆ ಕಾಯಿಲೆಯಿಂದ ಕಾಲನ್ನು ಕಳೆದುಕೊಂಡು ಬಳಲುತ್ತಿರುವ ಅತಾವುಲ್ಲಾ ಸೇರಿದಂತೆ ಇತರರಿಗೆ ವೀಲ್ ಚೇರ್ ಹಾಗು ಇತರೆ ಸಲಕರಣೆಗಳನ್ನು ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈಗಾಗಲೇ 88 ಮಂದಿ ವಿಶೇಷ ಚೇತನರಿಗೆ ವೀಲ್ ಚೇರ್, ವಾಟರ್ ಬೆಡ್ ಯೂ ಶೇಪ್ ವಾಕರ್ ಕಮೋಡ್ ಚೇರ್ ಆಕ್ಸಿಲರಿ ಕ್ರಚ್ಚಸ್ ಇನ್ನಿತರ ಸಲಕರಣೆಗಳನ್ನು ಧರ್ಮಸ್ಥಳ ಸಂಸ್ಥೆ ಉಚಿತವಾಗಿ ನೀಡಿದ್ದು ವಿಶೇಷಚೇತನರು ಇದ್ದಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು…
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆಯ ಕೋಲಾರ ಜಿಲ್ಲಾ ನಿರ್ದೇಶಕ ಪದ್ಮಯ್ಯ ಗೌಡ,ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮೇಲ್ವಿಚಾರಕರಾದ ಯಶೋಧಾ ಸೇವಾಪ್ರತಿನಿಧಿ ಉಮಾದೇವಿ ಪುಷ್ಪಾವತಿ ಮುಂತಾದವರು ಇದ್ದರು.