ಶ್ರೀನಿವಾಸಪುರ:ಲೋಕ ಕಲ್ಯಾಣಾರ್ಥ ನಡೆಯುವಂತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮಾಜಿ ಸ್ಪೀಕರ್ ಹಾಗು ಶಾಸಕ ರಮೇಶಕುಮಾರ್ ಹೇಳಿದರು ಅವರು ಇಂದು ಪಟ್ಟಣದ ಶ್ರೀ ವರದ ಬಾಲಾಂಜನೇಯ ಕ್ಷೇತ್ರದಲ್ಲಿ ಆರ್ಯ ವೈಶ್ಯ ಮಂಡಳಿಯವರು ನೂತನವಾಗಿ ನಿರ್ಮಾಣ ಮಾಡಿರುವಂತ ಶ್ರೀ ಮಾರುತಿ ಸಭಾ ಭವನ ಲೋಕಾರ್ಪಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಹೋಮ ಹವನ ಪೂಜಾ ಕಾರ್ಯಕ್ರಮಗಳಲ್ಲಿ ಅವರು ಪತ್ನಿ ಸಮೇತ ಕಾರ್ಯಕ್ರಮಗಳು ನಡೆಯುವ ವರಿಗೂ ಪಾಲ್ಗೋಂಡಿದ್ದರು ಈ ಸಂದರ್ಭದಲ್ಲಿ ಮಾತನಾಡಿದರು,ಕಾರ್ಯಕ್ರಮದ ಅಂಗವಾಗಿ ನಡೆದ ಶ್ರೀ ಸಿತಾರಾಮರ ಕಲ್ಯಾಣೋತ್ಸವದಲ್ಲಿ ಕಂಕಣ ಕಟ್ಟಿಕೊಂಡು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ವೈ.ಆರ್.ಎಸ್.ಪ್ರಕಾಶ್ ಮತ್ತು ರಮೇಶಕುಮಾರ್ ದಂಪತಿಗಳು ಪೂಜೆಗೆ ಕುಳತಿದ್ದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ,ವರದಾ ಇನೋವೆಟಿವ್ ಸಂಸ್ಥೆ ಮುಖ್ಯಸ್ಥ ಲಯನ್ ಹರಿಪ್ರಸಾದ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ರಾಜೇಂದ್ರಪ್ರಸಾದ್.ಕೊಚಿಮುಲ್ ಮಾಜಿ ಅಧ್ಯಕ್ಷ ಬೇಟಪ್ಪ,ಮಾವು ಮಂಡಳಿ ಮಾಜಿ ಅಧ್ಯಕ್ಷ ದಳಸನೂರುಗೋಪಾಲಕೃಷ್ಣ,ಉದ್ಯಮಿ ಕೃಷ್ಣೇಗೌಡ,ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್,ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್,ತಾ.ಪಂ ಮಾಜಿ ಸದಸ್ಯ ಕಲ್ಲೂರುಮಂಜು ಮುಂತಾದವರು ಪಾಲ್ಗೋಂಡಿದ್ದರು.
ಮಂಗಳವಾರ ಸಂಜೆ ನಡೆದಂತ ಪೂಜಾ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಪುರಸಭೆ ಸದಸ್ಯ ಬಿ.ವಿ.ರೆಡ್ಡಿ ಮುಂತಾದವರು ಭಾಗವಹಿಸಿದ್ದರು.