ನ್ಯೂಜ್ ಡೆಸ್ಕ್:ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರೆಡ್ದಿ ಪುತ್ರಿ ತೆಲಂಗಾಣದ ವೈ.ಎಸ್.ಆರ್ ಪಾರ್ಟಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ,ಇದೊಂದು ಸೌಹಾರ್ದತೆಯ ಭೇಟಿ ಎನ್ನಲಾಗುತ್ತಿದೆ ಆದರೂ ತೆಲಂಗಾಣ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿಯೆ ಎದ್ದಿದೆಯಂತೆ.
ತೆಲಂಗಾಣ ವೈ.ಎಸ್.ಆರ್ ಪಾರ್ಟಿ ಮುಖ್ಯಸ್ಥೆ ಶರ್ಮಿಳಾ ಅವಿಭಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಅವರ ಪುತ್ರಿ ಅವರ ಅಕಾಲಿಕ ನಿಧನದ ನಂತರ ತಮ್ಮ ಸಹೋದರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ಜಗನ್ಮೋಹನ್ ರೆಡ್ಡಿ ಅವರ ರಾಜಕೀಯ ಬೆನ್ನುಲುಬಾಗಿ ಕಳೆದ ಹತ್ತು ವರ್ಷಗಳಿಂದ ನಿಂತಿದ್ದು ಅಲ್ಲದೆ ಆಂಧ್ರದಲ್ಲಿ 2009 ರಲ್ಲಿ ನಡೆದಂತ ಚುನಾವಣೆಯಲ್ಲಿ ತಮ್ಮ ಸಹೋದರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದರು ನಂತರದಲ್ಲಿ ನಡೆದಂತ ವ್ಯತ್ಯಾಸಗಳಲ್ಲಿ ಸಹೋದರ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯಿಂದ ದೂರ ಸರಿದ ಶರ್ಮಿಳಾ ಕಳೆದ ಒಂದು ವರ್ಷದಿಂದ ತೆಲಾಂಗಾಣದಲ್ಲಿ ತಮ್ಮ ತಂದೆ ರಾಜಶೇಖರರೆಡ್ಡಿ ಹೆಸರು ಬಳಿಸಿಕೊಂಡು ತೆಲಂಗಾಣ ವೈ.ಎಸ್.ಆರ್ ತೆಲಂಗಾಣ ಪಾರ್ಟಿ ಎಂದು ಪಕ್ಷದ ಬ್ಯಾನರ್ ಹಿಡಿದು ತೆಲಂಗಾಣದಲ್ಲಿ ಪಾದಯಾತ್ರೆ ಮೂಲಕ ಶರ್ಮಿಳಾ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಹಾಗು ಅವರ ಮಗ ಕೆ.ಟಿ.ಆರ್ ವಿರುದ್ದ ರಣ ಕಹಳೆ ಮೊಳಗಿಸಿ ಬಿಆರ್ಎಸ್ ಸರ್ಕಾರದ ವೈಫಲ್ಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತ ಗಟ್ಟಿಯಾದ ಪ್ರಚಾರ ಮಾಡುತ್ತಿದ್ದಾರೆ ಜೊತೆಗೆ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೆವಂತರೆಡ್ಡಿ ವಿರುದ್ದವು ತಮ್ಮ ಆಕ್ರೋಶ ಹೊರಹಾಕುತ್ತಿರುವುದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೆವಂತರೆಡ್ಡಿ ನಾಯಕತ್ವ ಒಪ್ಪಿಕೊಳ್ಳದ ತೆಲಂಗಾಣ ಕಾಂಗ್ರೆಸ್ ಪಕ್ಷದ ಕೆಲ ಹಿರಿಯ ಮುಖಂಡರು ತೆಲಂಗಾಣ ವೈ.ಎಸ್.ಆರ್ ತೆಲಂಗಾಣ ಪಾರ್ಟಿ ಮುಖ್ಯಸ್ಥೆ ಶರ್ಮಿಳಾಗೆ ಒಳ ಒಳಗೆ ಬೆಂಬಲ ಸೂಚಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಈ ಎಲ್ಲಾ ಬೆಳವಣಿಗೆಗಳ ನಡುವೆ ಶರ್ಮಿಳಾ ಸೋಮವಾರ ಬೆಂಗಳೂರಿಗೆ ಆಗಮಿಸಿ ಶಿವಕುಮಾರ್ ಅವರ ಮನೆಗೆ ತೆರಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ಅಭಿನಂದಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ತೆಲಂಗಾಣ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ವೈಎಸ್ಆರ್ ತೆಲಂಗಾಣ ಪಾರ್ಟಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸುವ ಪ್ರಯತ್ನ ಇದಕ್ಕೆ ಶರ್ಮಿಳಾ ಒಪ್ಪದಿದ್ದ ಪಕ್ಷದಲ್ಲಿ ಮೈತ್ರಿಗಾದರೂ ಆಕೆಯನ್ನು ಮನವೊಲಿಸಲು ಕಾಂಗ್ರೆಸ್ ಮುಂದಾಗುವ ಉದ್ದೇಶ ಇದೆ ಎನ್ನಲಾಗುತ್ತಿದೆ.ಇದು ತೆಲಂಗಾಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತೆಲಂಗಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ವೈ.ಎಸ್.ರಾಜಶೇಖರ್ ರೆಡ್ಡಿ ಅಭಿಮಾನಿಗಳು ಇದ್ದು ಇದನ್ನು ಎನ್ ಕ್ಯಾಶ್ ಮಾಡಿಕೊಂಡು ರೆಡ್ಡಿ ಹಾಗೂ ಕ್ರೈಸ್ತ ಸಮುದಾಯಗಳ ಮತ ಬ್ಯಾಂಕ್ ಅನ್ನು ಕಾಂಗ್ರೆಸ್ ನತ್ತ ತಿರುಗಿಸಬಹುದು ಎಂಬ ಲೆಕ್ಕಚಾರ ಕಾಂಗ್ರೆಸದು.
ಶರ್ಮಿಳಾ ಅವರು ಸೇರಿದಂತೆ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಲು ಕಾಂಗ್ರೆಸ್ ಆಶಿಸುತ್ತಿದೆ. ಈಗಾಗಲೇ ಎಡಪಕ್ಷಗಳು ಬಿಆರ್ ಎಸ್ ಗೆ ಬೆಂಬಲ ಘೋಷಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಗಮನ ವೈಎಸ್ ಶರ್ಮಿಳಾ ಮೇಲೆ ಬಿದ್ದಿತ್ತು ಎನ್ನಲಾಗಿದೆ. ಪಕ್ಷಕ್ಕೆ ಸೇರಿಸಿಕೊಂಡರೆ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಥಳೀಯವಾಗಿ ಸದೃಡವಾಗುತ್ತದೆ ಎಂಬುದಾಗಿ ಭಾವಿಸಿದೆ.
ತೆಲಂಗಾಣದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಎಲ್ಲಾ ರೀತಿಯ ಅಗತ್ಯ ತಂತ್ರಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ರೂವಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ತಂತ್ರಗಾರ ಪೊಲಿಟಿಕಲ್ ಅನಾಲಸಿಸ್ಟ್ ಸುನೀಲ್ ಕನಗೊಲು ಮುಂದಿನ ಟಾಸ್ಕ್ ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಅದಕ್ಕಾಗಿ ತಂತ್ರಗಳನ್ನು ರೂಪಿಸಲು ಮುಂದಾಗಿದ್ದು 2024ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವತ್ತ ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಕೆಲಸ ಆರಂಭಿಸಿರುವ ಸುನೀಲ್ ಮೊದಲ ಪ್ರಯತ್ನವಾಗಿ ಡಿ.ಕೆ.ಶಿವಕುಮಾರ್ ಹಾಗು ತೆಲಂಗಾಣ ಯೈ.ಎಸ್.ಆರ್ ಪಾರ್ಟಿ ಶರ್ಮಿಳಾ ಭೇಟಿಯ ಹಿಂದೆ ಸುನೀಲ್ ಸಲಹೆ ಇದೆ ಎಂದು ತೆಲಂಗಾಣ ರಾಜಕೀಯ ಪಂಡಿತರ ಮಾತು ತೆಲಂಗಾಣದಲ್ಲಿ ಬಲಿಷ್ಠ ಬಿಎಸ್.ಆರ್,ಎಸ್ ಪಕ್ಷವನ್ನು ಎದುರಿಸಲು ನಾನಾ ರೀತಿಯ ತಂತ್ರಗಳನ್ನು ಕಾಂಗ್ರೆಸ್ ಹಾಗು ಬಿಜೆಪಿ ಪ್ರಯತ್ನಗಳನ್ನು ನಡೆಸುತ್ತಿದೆ ಈ ಪ್ರಯತ್ನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕಾಂಗ್ರೆಸ್ ಈಗಾಗಲೆ ‘ಕಾಂಗ್ರೆಸ್ ವಾರ್ ರೂಂ’ ತೆರೆದು ಸಕ್ರಿಯವಾಗಿದಿಯಂತೆ
ಬಿಎಸ್.ಆರ್,ಎಸ್ ಪಕ್ಷದ ಸಿಎಂ ಕೆಸಿಆರ್,ಸಚಿವ ಕೆಟಿಆರ್ ಹಾಗೂ ಎಂಎಲ್ ಸಿ ಕವಿತಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುವ ಸಲುವಾಗಿ ಕೆಟ್ಟದಾಗಿ ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣ ಸೈಬರ್ ಕ್ರೈಂ ಪೊಲೀಸರು ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ ಕಾರಣ ತೆಲಂಗಾಣ ಪೊಲೀಸ್ ತನಿಖೆಯನ್ನು ಸಹ ಸುನಿಲ್ ಎದುರಿಸಿದ್ದಾರಂತೆ
ಈ ಎಲ್ಲಾ ತಂತ್ರಗಳು ಮೈಗೂಡಿಸಿಕೊಂಡು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯನ್ನು ಎದುರಿಸಲು ತೆಲಂಗಾಣ ಕಾಂಗ್ರೆಸ್ ಸಿದ್ಧವಾಗಿದೆ.ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಶರ್ಮಿಳಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ಉಹಾ-ಪೊಹಗಳು ಇದ್ದು ಇವರಿಬ್ಬರ ಭೇಟಿಯಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ವಾದವೂ ಇದೆ.
ಅಂದಹಾಗೆ ಮತ್ತೊಂದು ಮಾತು ಏನೆಂದರೆ ವೈಎಸ್ ಶರ್ಮಿಳಾ ಸೋಮವಾರ ಶಿವಕುಮಾರ್ ಮನೆಗೆ ಭೇಟಿ ನೀಡಿರುವುದು ಎರಡನೇ ಬಾರಿಯಂತೆ, ಇದಕ್ಕೂ ಮುನ್ನ ಅಂದರೆ ಮಾರ್ಚ್ 15 ರಂದು ಶರ್ಮಿಳಾ, ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಂದು ಡಿಕೆ ಶಿವಕುಮಾರ್ ಅವರಿಗೆ ಜನುಮ ದಿನದ ಶುಭಾಶಯ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಪತ್ನಿ ಶ್ರೀಮತಿ ಉಷಾಶಿವಕುಮಾರ್ ಸಹ ಇದ್ದು ಆ ಫೋಟೋವನ್ನು ಶರ್ಮಿಳಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ