ದೇಣಿಗೆ ನೀಡಿರುವ ತಾರೆಯರು
ಬಾಲಿಹುಡ್ ನಟ ಅಕ್ಷಯ್ ಕುಮಾರ್
ಪವರ್ ಸ್ಟಾರ್ ಪವನ್ ಕಲ್ಯಾಣ್
ಕನ್ನಡ ನವರಸ ನಾಯಕ್ ಜಗ್ಗೇಶ್
ಬಹುಭಾಷೆ ತಾರೆ ಪ್ರಣಿತಾ ಸುಭಾಷ್
ನ್ಯೂಜ್ ಡೆಸ್ಕ್:ರಾಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಭವ್ಯ ಬೆಂಬಲ ವ್ಯಕ್ತವಾಗುವುದರ ಜೊತೆಗೆ ದೇಣಿಗೆ ಸಂಗ್ರಹ ಕಾರ್ಯ ಕೂಡ ಜೋರಾಗಿ ನಡೆಯುತ್ತಿದೆ.ಈಗಾಗಲೇ ಖ್ಯಾತ ರಾಜಕಾರಣಿಗಳು, ಗಣ್ಯರು, ಸಿನಿಮಾ ತಾರೆಯರು,ಉದ್ಯಮಿಗಳು ಹಿಡಿದು ಜನಸಾಮಾನ್ಯರ ವರಿಗೂ ರಾಮನ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಇದಕ್ಕೆ ತೆಲುಗು ಪವರ್ ಸ್ಟಾರ್ ಹಾಗು ತೆಲಗು ನೆಲದ ರಾಜಕಾರಣಿ ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಕೂಡ ಕೈ ಜೋಡಿಸಿದ್ದು ಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಪವನ್ ಕಲ್ಯಾಣ್ ಶುಕ್ರವಾರ (ಜ.22) ರಂದು 30 ಲಕ್ಷ ರೂ.ಗಳ ಚೆಕ್ ಅನ್ನು ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಿದ್ದಾರೆ. ಆಂಧ್ರದ ಬಿಜೆಪಿ ಮುಖಂಡ ಹಾಗು ಮಾಜಿ ಸಚಿವ ಕಾಮಿನೇನಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಚೆಕ್ ಅನ್ನು ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟವರಿಗೆ ಹಸ್ತಾಂತರಿಸಿದ್ದಾರೆ. ಪವನ್ ಕಲ್ಯಾಣ್ ಅವರ ಸಿಬ್ಬಂದಿಗಳ 11 ಸಾವಿರ ರೂ.ಗಳ ಇನ್ನೊಂದು ಚೆಕ್ ಅನ್ನು ಸಹ ನೀಡಿದ್ದಾರೆ.
ನಮ್ಮ ಮನಸ್ಸು ಹೆಮ್ಮೆ ಪಡಬೇಕು ಜಗ್ಗೇಶ್
ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರ. ಗುರು ರಾಯರ ನೆಚ್ಚಿನ ದೇವರು ರಾಮ. ರಾಮ-ಹನುಮಂತರೇ ನಮ್ಮ ಭಾರತದ ಪ್ರತೀಕ.ಎಲ್ಲ ನನ್ನ ಬಾಂಧವರಲ್ಲಿ ನನ್ನ ಮನವಿ ಇಷ್ಟೇ.. ತಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಹಣವನ್ನು ರಾಮ ಮಂದಿರ ಕಟ್ಟುವುದಕ್ಕೆ ದೇಣಿಗೆಯಾಗಿ ನೀಡಿ ಎಂದು ಜಗ್ಗೇಶ್ ಮನವಿಮಾಡಿರುತ್ತಾರೆ .ದೇವಸ್ಥಾನ ನಿರ್ಮಾಣ ಆದಮೇಲೆ ಇಡೀ ವಿಶ್ವವೇ ಬಂದು ನೋಡುತ್ತದೆ.ರಾಮ ಮಂದಿರ ನಿರ್ಮಾಣದ ಕರ್ತವ್ಯವನ್ನು ಮಾಡೋಣ. ಈ ಪುಣ್ಯ ಭವಿಷ್ಯತ್ತಿನಲ್ಲಿ ಇನ್ನೇಂದಿಗೂ ಬರುವುದಿಲ್ಲ, 2024ಕ್ಕೆ ಕಟ್ಟಡ ಕಾರ್ಯ ಮುಕ್ತಾಯ ಆಗುತ್ತದೆ. ನಮ್ಮ ತಲೆಮಾರಿನಲ್ಲಿ,ನಮ್ಮ ಕಾಲದಲ್ಲಿ ಇದು ಆಗುತ್ತಿರುವುದೇ ದೊಡ್ಡ ಪುಣ್ಯ ಅಂತ ನಾವು ಭಾವಿಸೋಣ.ಅಲ್ಲಿ ಹೋಗಿ ನಿಂತಾಗ ನನ್ನದೂ ಒಂದು ಅಳಿಲು ಕಾಣಿಕೆ ಕೂಡ ಈ ಆಲಯದಲ್ಲಿ ಸೇರಿದೆ ಅಂತ ನಮ್ಮ ಮನಸ್ಸು ಹೆಮ್ಮೆ ಪಡಬೇಕು’ ದಯಮಾಡಿ ದೇಣಿಗೆ ನೀಡಲು ತಯಾರಾಗಿ. ದೇಣಿಗೆಯನ್ನು ನೇರವಾಗಿ ತಲುಪಿಸಿ.ಎಲ್ಲರಿಗೂ ಶುಭವಾಗಲಿ. ನಮಸ್ಕಾರ.. ಜೈ ಶ್ರೀರಾಮ್’ ಎಂದು ನವರಸ ನಾಯಕ ಜಗ್ಗೇಶ್ ಜನತೆಯನ್ನು ಕೋರಿದ್ದಾರೆ.
ರಾಮನ ಮಂದಿರಕ್ಕೆ ದೇಣಿಗೆ ನೀಡುವಂತೆ ಅಕ್ಷಯ್ ಮನವಿ
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಚಂದ್ರನ ಭವ್ಯ ರಾಮ ಮಂದಿರ ನಿರ್ಮಾಣದ ಕೆಲಸಗಳು ಶುರುವಾಗಿವೆ. ಅದಕ್ಕಾಗಿ ನಮ್ಮಲ್ಲಿ ಕೆಲವರು ವಾನರರಾಗೋಣ, ಅಳಿಲು ಆಗಿ ಸೇವೆ ಸಲ್ಲಿಸೋಣ.. ನಮ್ಮ ನಮ್ಮ ಕೈಲಾದಷ್ಟು ಸಹಾಯವನ್ನು ಮಂದಿರ ನಿರ್ಮಾಣಕ್ಕೆ ನೀಡೋಣ. ಐತಿಹಾಸಿಕ ರಾಮ ಮಂದಿರ ನಿರ್ಮಾಣದಲ್ಲಿ ಭಾಗಿಯಾಗೋಣ ಎಂದಿರುತ್ತಾರೆ ಬಾಲಿವುಡ್ ನಟ ಅಕ್ಷಯ್ ಕುಮಾರ್
ನಟಿ ಪ್ರಣಿತಾ ಒಂದು ಲಕ್ಷ ದೇಣಿಗೆ
ನಟನೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿರುವ ಬಹುಭಾಷ ನಟಿ ಪ್ರಣಿತಾ ಸುಭಾಷ್. ಈಗ ಅವರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಅವರು ಒಂದು ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೆ,ಕೈಲಾದಷ್ಟು ದೇಣಿಗೆ ನೀಡುವಂತೆ ಅಭಿಮಾನಿಗಳಿಗೂ ಕರೆ ನೀಡಿರುವ ಅವರು ಐತಿಹಾಸಿಕ ಆಂದೋಲನದಲ್ಲಿ ನೀವೂ ಭಾಗಿಯಾಗಿ ಎಂದಿರುತ್ತಾರೆ.
ವರದಿ:ಚ.ಶ್ರೀನಿವಾಸಮೂರ್ತಿ