ಶ್ರೀನಿವಾಸಪುರ:ಆಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮಹಿಳೆಯರಿಂದ ಮನೆ ಮನೆಗೂ ವಿತರಣೆ ಮಾಡಲಾಗುತ್ತಿದೆ.ದೇಶಾದ್ಯಂತ ಪ್ರತಿ ಹಿಂದೂ ಮನೆಗೂ ವಿತರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಈ ಅಭಿಯಾನದ ಭಾಗವಾಗಿ ಅಯೋಧ್ಯೆಯಿಂದ ಬಂದಿರುವಂತ ಶ್ರೀರಾಮನ ಮಂತ್ರಾಕ್ಷತೆಯನ್ನು ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದೂ ಸಂಘಟನೆ ಕಾರ್ಯಕರ್ತರು,ವಿವಿಧ ಮಹಿಳಾ ಮಂಡಳಿಯ ಮಾತೆಯರು ವಿವಿಧ ಯುವಕ ಸಂಘಗಳ ಕಾರ್ಯಕರ್ತರು ಮುಖಂಡರು ಮಂತ್ರಾಕ್ಷತೆಯನ್ನು ಮನೆ ಮನೆಗೂ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪಟ್ಟಣದ ವಿವಿಧ ಬಡಾವಣೆಗಳಿಗೆ ಹೋಗಿ ಮಂತ್ರಾಕ್ಷತೆಯನ್ನು ನೀಡುವ ಕೆಲಸ ಮಾಡುತ್ತಿದ್ದು,ಮಂತ್ರಾಕ್ಷತೆ ಪಡೆಯುವಂತವರು ಯಾರೂ ಕೂಡ ಹಣವನ್ನು ನೀಡಿವಂತಿಲ್ಲ. ಅಥವಾ ವಸ್ತು ರೂಪದಲ್ಲಿ ಕಾಣಿಕೆ ನೀಡಬಾರದು ಮಂತ್ರಾಕ್ಷತೆ ವಿತರಣೆ ಅಭಿಯಾನವಾಗಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ವ್ರತಾಚಾರಣೆ, ಕಟ್ಟು ಪಾಡು ನಿಯಮಗಳು ಇರುವುದಿಲ್ಲ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ವಿಗ್ರಹ ಪ್ರಾಣಪ್ರತಿಷ್ಠೆಯ ದಿನವಾದ ಜನವರಿ 22 ಸೋಮವಾರದಂದು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಳ್ಳಿ-ಹಳ್ಳಿಗಳ ದೇವಾಲಯಗಳಲ್ಲಿ ವಿಶೇಷ ಪೂಜೆ,ಹೊಮ,ಹವನ, ಸತ್ಸಂಗ, ಭಜನೆ ಕಾರ್ಯಕ್ರಮ ಹಮ್ಮಿಕೊಂಡು ಸಂಜೆ ದೇವಾಲಯ ಸೇರಿದಂತೆ ಮನೆ ಮನೆಯ ಮುಂಬಾಗದಲ್ಲಿ ಮಣ್ಣಿನ ಹಣತೆಯ ದೀಪಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆ ಶ್ರೀರಾಮಚಂದ್ರನ ವಿಗ್ರಹ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಶುಭಕೋರೋಣ ಎಂದು ಆಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ತಾಲೂಕು ಪ್ರಮುಖ ಲಕ್ಷ್ಮಣಗೌಡ ತಿಳಿಸಿದ್ದಾರೆ.
