ಶ್ರೀನಿವಾಸಪುರ:ಶ್ರೀನಿವಾಸಪುರ ಕೇಂದ್ರವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಮಾವು ಬೆಳೆಗಾರರು ಬಂಪರ್ ಹೂ ಬಿಟ್ಟಿದೆ ಒಳ್ಳೆಯ ಇಳುವರಿ ಬರುತ್ತದೆ ಉತ್ತಮ ಆದಾಯ ಕೈ ಸೇರುತ್ತದೆ ಎನ್ನುವ ನೀರಿಕ್ಷೆಯಲ್ಲಿ ಇದ್ದರು. ಆದರೆ ಮಾವು ಬೆಳೆಗಾರರ ನಿರೀಕ್ಷೆಯೆಲ್ಲ ಹುಸಿಯಾಗಿದ್ದು, ಹವಾಮಾನ ವೈಪರಿತ್ಯದಿಂದ ಸಮೃದ್ದಿಯಾಗಿ ಮರದ ತುಂಬ ಬಿಟ್ಟಿದ್ದ ಹೂ ಕಟ್ಟಿ,ಪೀಚಾಗಬೇಕಿದ್ದು ಕಾಯಿ ಹಳದಿ ಬಣ್ಣಕ್ಕೆ ತಿರುಗಿ ಬಿಸಿಲಿನ ತಾಪಕ್ಕೆ ಉದುರಿ ಹೋಗುತ್ತ ಮರಗಳು ಖಾಲಿಯಾಗುತ್ತಿದೆ ಇದು ಮಾವು ಬೆಳೆಗಾರರನ್ನ ಆತಂಕಕ್ಕೆ ಈಡುಮಾಡಿದೆ.
ಮೂರು ಹಂತಗಳಲ್ಲಿ ಬಿಟ್ಟಂತ ಹೂವಿನಿಂದ ನಷ್ಟ!
ಡಿಸೆಂಬರ್ ನಲ್ಲಿ ಬಿಟ್ಟ ಮಾವಿನ ಹೂ ಇಷ್ಟೊತ್ತಿಗಾಗಲೆ ಕಾಯಿಯಾಗ ಬೇಕಿತ್ತು ಆದರೆ ಹವಮಾನ ವೈಪರಿತ್ಯದಿಂದ ಮೂರು ಹಂತಗಳಲ್ಲಿ ಮಾವಿನ ಮರಗಳಲ್ಲಿ ಹೂವು ಬಿಟ್ಟ ಪರಿಣಾಮ ಸಮೃದ್ದಿಯಾಗಿ ಬಂದಿದ್ದ ಹೂ ಕಾಯಿ ಕಚ್ಚಿಲ್ಲ.ಹಿಂದಿನ ಹೂ ಕಾಯಿಯಾಗಲು ಹೊಸದಾಗಿ ಬಂದಂತ ಹೂ ಬಿಡುತ್ತಿಲ್ಲ,ಡಿಸೆಂಬರ್ ನಲ್ಲಿ ಬಂದಿರುವ ಹೂ ಒಂದಷ್ಟು ಹೂ ಕಾಯಿ ಕಚ್ಚಿದೆ ಸ್ವಲ್ಪ ತಡವಾದ ಹೂ ಕಾಯಿಕಚ್ಚಲು ಜನವರಿಯಲ್ಲಿ ಬಂದ ಹೂ ಅಡ್ಡಗಾಲಾದರೆ ಅದೆ ಮರದಲ್ಲಿ ಜನವರಿಯಲ್ಲಿ ಬಂದಂತ ಹೂವನ್ನು ಫೆಬ್ರವರಿಯಲ್ಲಿ ಬಂದಂತ ಹೂ ತಡೆಯುತ್ತಿದೆ ಎನ್ನುವುದು ಮಾವುಬೆಳೆಗಾರ ಶಿವಕುಮಾರ್ ಅಭಿಪ್ರಾಯ ಹೊಸದಾಗಿ ಬರುವಂತ ಹೂ ಹಿಂದಿನ ಹೂವಿನ ಸಾರಂಶ ಹೀರಿಕೊಳ್ಳುವ ಕಾರಣ ಹಳೆ ಹೂ ಕಾಯಿ ಕಚ್ಚಲು ಬೀಡದೆ ಕಾಯಿ ಕಚ್ಚಿರುವಂತ ಮಾವಿನ ಪಿಂದಿ ಹಳದಿ ಬಣ್ಣಕ್ಕೆ ತಿರುಗಿ ಅನಾಯಸವಾಗಿ ಉದುರಿ ಹೋಗುತ್ತಿರುವುದರಿಂದ ನಾವು ಅಸಾಯಕರಾಗಿದ್ದೆವೆ ಎನ್ನುತ್ತಾರೆ.
ಈ ಸಮಯಕ್ಕೆ ಆಗಲೇ, ಅದರಲ್ಲೂ ಸಂಕ್ರಾಂತಿ ಸಮಯಕ್ಕೆ ಜಿಲ್ಲೆಯ ಬಹುತೇಕ ಕಡೆ ಮಾವಿನ ಮರಗಳಲ್ಲಿ ಹೂ ಕಟ್ಟಿ, ಕೆಲವು ಕಡೆ ಮಾವಿನ ಪೀಚು ಸಹ ಆಗಬೇಕಿತ್ತು. ಆದರೆ ಮತ್ತೆ ಮಾವಿನ ಮರ ಚಿಗುರುತ್ತ ಕೆಲವಡೆ ಹೊಸದಾಗಿ ಹೂ ಬಿಡುತ್ತಿರುವುದು ಬಹುತೇಕ ಮಾವಿನ ತೋಟಗಳಲ್ಲಿ ಕಾಣಸಿಗುತ್ತಿದೆ.
ಮಾವು ಬೆಳೆಗಾರರಿಗೆ ಹವಮಾನವೇ ವಿಲನ್!
ಮಾವು ಬೆಳೆಯುವಲ್ಲಿ ವಿಶ್ವಪ್ರಸಿದ್ದಿ ಪಡೆದಿರುವ ಶ್ರೀನಿವಾಸಪುರದಲ್ಲಿ ಅತೀ ಹೆಚ್ಚು ಮಾವು ಬೆಳೆಯನ್ನು ರೈತರು ಬೆಳೆಯುತ್ತಾರೆ. ಸುಮಾರು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಈ ಬಾರಿ ನೀರಿಕ್ಷಿತ ಮಟ್ಟದಲ್ಲಿ ಬೆಳೆಯಾಗಲು ಹವಮಾನವೆ ಮಾವುಬೆಳೆಗಾರರಿಗೆ ವಿಲನ್ ಆಗಿ ಕಾಡುತ್ತಿದೆ ಎನ್ನುತ್ತಾರೆ, ಏರುತ್ತಿರುವ ತಾಪಮಾನದ ಪರಿಣಾಮ ಮಾವುಬೆಳೆ ಮೇಲೆ ತೀವ್ರವಾಗಿದೆ,ಹಗಲು ಸುಡು ಬಿಸಿಲಿನ ಉಷ್ಣಾಂಶ ಇರುತ್ತದೆ ರಾತ್ರಿ ಏಕಾಏಕಿ ಚಳಿಯಾಗುತ್ತದೆ ಜೊತೆಗೆ ಮುಂಜಾನೆ ಸುರಿಯುವ ಹಿಮದಿಂದಾಗಿ ಹೂ ಅರಳಲು, ಕಾಯಿ ಬೆಳವಣಿಗೆಯಾಗಲು ತೊಂದರೆಯಾಗುತ್ತಿದೆ ಎನ್ನುತ್ತಾರೆ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ಡಿ ಇದರ ಪರಿಣಾಮ ಶೇ%30 ರಷ್ಟು ಫಸಲು ಮಾತ್ರ ಸಿಗಬಹುದು ಎಂಬ ಲೆಕ್ಕಾಚಾರದ ಮಾತು ಹೇಳುತ್ತಾರೆ.
ಊಟಕಿಲ್ಲದ ಉಪ್ಪಿನಕಾಯಿ,ಮಾವು ತಙ್ಞರು-ಹವಾಮಾನ ತಙ್ಞರು
ಮಾವು ಬೆಳೆ ಸಂಬಂದ ರೋಗ ರುಜಿನಗಳಿಗೆ ಔಷದಿ ಸಿಂಪಡಿಸಲಿಕ್ಕೆ ಮಾವು ತಙ್ಞರು ಹೇಳಿ ಕೈ ಚಲ್ಲುತ್ತಾರೆ ಇಂತಹ ಸಂದರ್ಭಗಳಲ್ಲಿ ಮಾವು ತಙ್ಞರು-ಹವಾಮಾನ ತಙ್ಞರು ಸ್ಥಳಕ್ಕೆ ಬಂದು ಮಾವುಬೆಳೆಗೆ ಏನು ಸಮಸ್ಯೆ ಎಂದು ಆಗುಹೋಗುಗಳ ಬಗ್ಗೆ ಮಾವು ಬೆಳೆಗಾರರ ಜೊತೆಗೆ ಕೂತು ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯ ಇಲ್ಲವ ಎಂದು ಚಿನ್ನಪ್ಪರೆಡ್ದಿ ಪ್ರಶ್ನಿಸುತ್ತಾರೆ.
ಈಗಿರುವ ಸಮಸ್ಯೆಗೆ ಮಾವಿನಕಾಯಿ ಬಿಸಿಲಿನ ತಾಪಕ್ಕೆ ಉದರಿ ಹೋಗದಂತೆ ಮಾವು ಬೆಳೆಗಾರ 2-3 ನಾಲ್ಕು ಬಾರಿ ದುಬಾರಿ ಬೆಲೆಯ ಔಷಧಿಗಳನ್ನು ಸಿಂಪಡಿಸಿ ಅಸಾಯಕರಾಗಿದ್ದಾರೆ ಮತ್ತೆ ಈಗ ಔಷಧಿ ಸಿಂಪಡಿಸಲೇಬೇಕಾದಂತಹ ಅನಿವಾರ್ಯತೆ ಏರ್ಪಟ್ಟಿದೆ ಜಿಗಿ ಹುಳ ಪ್ರಾರಂಭವಾಗಿದೆ ಇದರ ನಿಯಂತ್ರಣದ ಜೊತೆಗೆ ಲಘು ಪೋಷಕಾಂಶಗಳನ್ನು ಒಳಗೊಂಡಂತಹ ಟಾನಿಕ್ ಅನ್ನು ಕಚ್ಚಿರುವ ಕಾಯಿಗೆ ಸಿಂಪಡಿಸಲೇಬೇಕಾಗುತ್ತದೆ ಇಲ್ಲದಿದ್ದರೆ ಇರುವ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದು,ಇಷ್ಟೆಲ್ಲ ಕಷ್ಟ ಕಾರ್ಪಣ್ಯಗಳ ನಡುವೆ ಮಾವು ಬೆಳೆಗಾರರ ನೆರವಿಗೆ ತೋಟಗಾರಿಕೆ ಇಲಾಖೆ ಬಾರದೆ ಇರುವುದು ದುರಂತವೆ ಸರಿ ಈ ಭಾಗದ ಜನಪ್ರತಿನಿಧಿಗಳಿಗೆ ಕಿಂಚಿತ್ತಾದರೂ ಜೀವನಾಡಿ ಮಾವುಬೆಳೆಗಾರ ಬಗ್ಗೆ ಕಾಳಜಿ ಇದ್ದಿದ್ದರೆ ಮಾವು ಮಂಡಳಿಗೆ ಹೆಚ್ಚಿನ ಅನುದಾನವನ್ನು ಕೊಡಿಸಿ ಮಾವುಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಔಷಧಿಗಳನ್ನು ಕೊಡಬಹುದಾಗಿತ್ತು ರೈತನ ಅರ್ತನಾದ ಜನಪ್ರತಿನಿಧಿಗಳಿಗೆ ಕೇಳಿಸದೆ ಇರುವುದು ಇಲ್ಲಿನ ನಮ್ಮ ದೌರ್ಭಾಗ್ಯ ಎನ್ನುತ್ತಾರೆ.
ಪರಿಹಾರ ಸೈಕ್ಲೋನ್ ಮಳೆ 3-4 ದಿನ ಬರಬಾರದೇ
3-4 ವರ್ಷಗಳಿಂದ ಅತಿವೃಷ್ಠಿಯಿಂದ ಮಾವಿನ ಬೆಳೆ ಹಾಳಾಗುತಿತ್ತು ಆದರೆ ಈ ಬಾರಿ ಅನಾವೃಷ್ಠಿಯ ಪರಿಣಾಮ ಬಿಸಿಲಿನ ತಾಪಕ್ಕೆ ಮಾವು ಪಸಲು ಬೆಳೆ ಇಳುವರಿ ತಗ್ಗುತ್ತಿದೆ ಇದಕ್ಕೆ ಪರಿಹಾರ ಎನ್ನುವಂತೆ ಈಗಿಂದಿಗೆ ಈಗ 3-4 ದಿನಗಳ ಕಾಲ ಸೋನೆ ಮಳೆ ಸುರಿದರೆ ಮಾವುಬೆಳೆಯನ್ನು ಕಾಡುತ್ತಿರುವ ಜಿಗಿಹುಳದ ಜೇನು(ಮಂಗು).ಕಾಯಿಕೊರಕ ಹುಳುವಿನಿಂದ ಮತ್ತು ಮಾವಿನಕಾಯಿ ಅಪೌಷ್ಟಿಕತೆಯಿಂದ ನಲಗುವುದನ್ನು ಕಾಪಾಡಲು ಸಹಕಾರಿಯಾಗುತ್ತದೆ ಮತ್ತು ಕನಿಷ್ಠ ಅರ್ದದಷ್ಟು ಮಾವು ಬೆಳೆ ಉಳಿಸಿಕೊಳ್ಳಬಹುದಾಗುತ್ತದೆ ಎಂದು ಅನುಭವಸ್ಥ ಮಾವು ಬೆಳೆಗಾರರು ಹೇಳುತ್ತಾರೆ.