ಶ್ರೀನಿವಾಸಪುರ:-ಅತಿ ವೇಗವಾಗಿ ಹೊಗುತ್ತಿದ್ದ ಪ್ರಯಾಣಿಕರು ತುಂಬಿದ್ದ ಹಳೇ ಮಾಡಲ್ ಜೀಪು ಸಿಮೆಂಟ್ ಟ್ಯಾಂಕರ್ ಗೆ ಡಿಕ್ಕಿಯಾಗಿ ಜೀಪಿನ ಚಾಲಕ ಸೇರಿ ಜಿಪಿನಲ್ಲಿದ್ದ ಸುಮಾರು ಎಂಟು ಮಂದಿ ಪ್ರಯಾಣಿಕರು ಮೃತ ಪಟ್ಟಿರುವ ಧಾರುಣ ಘಟನೆ ಚಿಂತಾಮಣಿ-ಮದನಪಲ್ಲಿ ರಾಜ್ಯ ಹೆದ್ದಾರಿಯ ಅಲವಾಟ ಗೆಟ್ ಬಳಿ ಸಂಜೆ ನಡೆದಿರುತ್ತದೆ.ಮೃತರ ಕುರಿತಾಗಿ ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ ಆದರೂ ಮೃತ ಪಟ್ಟಿರುವಂತ ಬಹುತೇಕರು ಶ್ರೀನಿವಾಸಪುರ ತಾಲೂಕಿನವರೆಂದು ಹೇಳಲಾಗಿದೆ ಒರ್ವ ಮಹಿಳೆ ಗೋಪಲ್ಲಿಯವರೆಂದು ಮತ್ತೊಬ್ಬ ಪುರುಷ ಕೂಸಂದ್ರ,ಇನ್ನೊಬ್ಬ ವ್ಯಕ್ತಿ ಆಂಧ್ರದ ಮದನಪಲ್ಲಿಯರು, ಮತ್ತೊರ್ವ ಚಿಂತಾಮಣಿಯವರು ಎನ್ನಲಾಗಿದೆ ಮಿಕ್ಕವರ ಮಾಹಿತಿ ತಿಳಿಯಬೇಕಿದೆ.
ಅಪಘಾತದ ತೀವ್ರತೆ ಹೇಗಿತ್ತು ಎಂದರೆ ಲಾರಿಗೆ ಡಿಕ್ಕಿಯಾದ ಸಂದರ್ಭದಲ್ಲಿ ಜೀಪಿನಲ್ಲಿದ್ದ ಪ್ರಯಾಣಿಕರು ರಸ್ತೆಯಲ್ಲ ತರಗೆಲೆಗಳಂತೆ ಚಲ್ಲಾಪಿಲ್ಲಿಯಾಗಿ ಚದರಿ ಬಿದ್ದಿರುತ್ತಾರೆ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
ಮೃತರ ಪೈಕಿ ಜೀಪ್ ಚಾಲಕ ರಮೇಶ್ ಸೇರಿದಂತೆ ಎಂಟು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು ಹಲವರ ಸ್ಥಿತಿ ಚಿಂತಾಜನಕವಾಗಿದೆ ಗಾಯಾಳುಗಳನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆ ಹಾಗು ಕೋಲಾರದ ಎಸ್.ಎನ್.ಆರ್ ಹಾಗು ಜಾಲಪ್ಪ ಆಸ್ಪತ್ರೆಗೆಳಿಗೆ ದಾಖಲಿಸಲಾಗಿದೆ.
ಅಪಘಾತ ನಡೆದ ಸ್ಥಳ ಚಿಂತಾಮಣಿ ತಾಲೂಕು ಕೆಂಚಾರ್ಲಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುತ್ತದೆ,ಸ್ಥಳದಲ್ಲಿ ಚಿಂತಾಮಣಿ ಪೋಲಿಸರು ಮೊಕ್ಕಾಂ ಹೂಡಿದ್ದಾರೆ.
ಅಪಘಾತ ವಾದಾಗ ಕಾರ್ಯನಿಮಿತ್ತ ಅದೇ ರಸ್ತೆಯಲ್ಲಿ ಹೊಗುತ್ತಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಲೂರು ಶಾಸಕ ಕೆ,ವೈ.ನಂಜೇಗೌಡ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಸ್ವತಹಃ ಕಾರ್ಯಚರಣೆಗಿಳಿದು ಗಾಯಾಳುಗಳನ್ನು ಆಸ್ಪಸ್ಪತ್ರೆಗೆ ಸಾಗಿಸಲು ಸಹಕರಿಸಿರುತ್ತಾರೆ. ರಮೇಶ್ ಕುಮಾರ್ ಘಟನೆ ಕುರಿತಾಗಿ ಬಸ್ ಇಲ್ಲದ ಸಂದರ್ಬಗಳಲ್ಲಿ ಜೀಪ್ ಬಳಸಿಕೊಂಡು ಒಡಾಡಿ ಇಂತ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜೀಪ್ ಓಡಾಟ ನಿಲ್ಲಿಸಲಾಗಿತ್ತು.
ಶ್ರೀನಿವಾಸಪುರ-ರಾಯಲ್ಪಾಡು ನಡುವೆ ಒಡಾಡುತ್ತಿದ್ದ ಹಳೇ ಮಾಡಲ್ ವೈಟ್ ಬೋರ್ಡ್ ಜೀಪ್ ಗಳ ಕುರಿತಾಗಿ ಸಾರ್ವಜನಿಕರಿಂದ ತೀವ್ರ ವಿರೋದ ವ್ಯಕ್ತವಾದ ಹಿನ್ನಲೆಯಲ್ಲಿ ಶ್ರೀನಿವಾಸಪುರ ಪೋಲಿಸರು ಜೀಪ್ ಗಳ ಒಡಾಟಕ್ಕೆ ಬ್ರೇಕ್ ಹಾಕಿದ್ದರು ನಂತರದಲ್ಲಿ ಸ್ಥಳೀಯ ಮುಖಂಡರ ಒತ್ತಡದಿಂದ ಜೀಪ್ ಒಡಾಟ ಮತ್ತೇ ಪ್ರಾರಂಭಿಸಲಾಯಿತು.