ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ನಿರುದ್ಯೋಗ ಯುವಕರ ಸಮಸ್ಯೆ ನಿವಾರಿಸಲು ತಾಲೂಕಿನ ಎರಡು ಕಡೆ ಕೈಗಾರಿಕಾ ಪ್ರದೇಶಗಳ ಸ್ಥಾಪನೆ ಮಾಡಿ ಕೈಗಾರಿಗಳನ್ನು ತರುಲು ತಾವು ಶ್ರಮಿಸುತ್ತಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಅವರು ಇಂದು ತಾಲೂಕು ಆಡಳಿತ ಆಯೋಜಿಸಿದ್ದ ಎಪ್ಪತೈದನೆ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಅನುಕೂಲ ಆಗುವ ದಿಸೆಯಲ್ಲಿ ಮುಳಬಾಗಿಲು ರಸ್ತೆಯಲ್ಲಿನ ಯದರೂರು ಬಳಿ ಹಾಗು ಮದನಪಲ್ಲಿ ರಸ್ತೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು ಜನರ ನೀರಿಕ್ಷೇಗಳಂತೆ ತಾಲೂಕಿನ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿರುವೆ ಶಿಕ್ಷಣ,ಆರೋಗ್ಯ ಕ್ಷೇತ್ರಗಳ ಆಭಿವೃದ್ಧಿಗೂ ಆದ್ಯತೆ ನೀಡಿದ್ದು ಕ್ಷೇತ್ರದಲ್ಲಿ ಅಭಿವೃದ್ಧಿಯೇ ಧ್ಯೆಯವಾಗಿ ಶ್ರೀನಿವಾಸಪುರ ಪಟ್ಟಣವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಮಾತನಾಡಿ 1950 ಜನವರಿ 26 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ.ರಾಜಾಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವದ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾದ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ಹಾಗು ಹೆಮ್ಮೆಯ ದಿನವಾಗಿದ್ದು,ಇವತ್ತು ಭಾರತ ದೇಶದ ಅಭಿವೃದ್ಧಿ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ಹಿಂದಿಕ್ಕಿ ಸಾಗುತ್ತಿದೆ ಭಾರತ ಇವತ್ತು ಮುಂದುವರಿಯುತ್ತಿರುವ ರಾಷ್ಟ್ರ ಅಲ್ಲ ಮುಂದುವರಿದಿರುವ ರಾಷ್ಟ್ರವಾಗಿದ್ದು ಇತರೆ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ,ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಎಂಬ ಅಂಬೇಡ್ಕರ್ ಆಶಯವನ್ನು ಸಾಕರ ಗೊಳಿಸುವ ನಿಟ್ಟಿನಲ್ಲಿ ವಿಕಸಿತ ಭಾರತದ ಕಲ್ಪನೆಯಲ್ಲಿ ಪ್ರಧಾನಿ ಮೋದಿಯವರು ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಸುಧೀಂದ್ರ,ತಾಪಂ ಇವೋ ಶಿವಕುಮಾರಿ, ವೃತ್ತ ನೀರಿಕ್ಷಕ ಗೊರವನ ಕೊಳ್ಳ,ಬಿಇಓ ಮುನಿಲಕ್ಷ್ಮಯ್ಯ,ತಾಲೂಕು ನೌಕರರ ಸಂಘದ ಅಧ್ಯಕ್ಷ ಜನಾರ್ಧನ್, ಪುರಸಭಾ ಮುಖ್ಯಾಧಿಕಾರಿ ಸತ್ಯನಾರಯಣ, ಚುನಾಯಿತ ಪುರಸಭಾ ಸದಸ್ಯರು ಸೇರಿದಂತೆ ಮುಂತಾದವರು ಇದ್ದರು.ಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿಗೀತೆಗಳಿಗೆ ನಡೆಸಿಕೊಟ್ಟ ನೃತ್ಯರೂಪಕ ಆಕರ್ಷಣಿಯವಾಗಿತ್ತು.


