- ರೈಲ್ವೇ ಕೋಚ್ ಗೆ ಮೀಸಲಿಟಿದ್ದ
- ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ
- ರೈತರ ಜಮೀನು ತಂಟೆಗೆ ಬರಬೇಡಿ
ಶ್ರೀನಿವಾಸಪುರ:ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಹಾಗಿದ್ದರೆ ಹಿಂದೆ ರೈಲ್ವೇ ಕೋಚ್ ಫ್ಯಾಕ್ಟರಿ ಮಾಡಲು ಗುರುತಿಸಿದ್ದ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಇಲ್ಲವಾದರೆ ನಮ್ಮ ಕಂದಾಯ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು ಬೇಡ ಎಂದು ಯದರೂರು ಭಾಗದ ರೈತರು ಒತ್ತಾಯಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬೇಟಪ್ಪ ಹಾಗು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ನೇತೃತ್ವದಲ್ಲಿ ಯದರೂರು ಅರಕೇರಿ ಭಾಗದ ರೈತರು ಇಂದು ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಎನ್.ಜಿ.ಬೇಟಪ್ಪ ಮಾತನಾಡಿ ಖಾಸಗಿ ಕೈಗಾರಿಕೆಗಳನ್ನು ಸ್ಥಾಪಿಸುವ ಗುಜರಾತ್ ಮಾರ್ವಾಡಿಗಳಿಗೆ ಫಲವತ್ತಾದ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸರ್ವನಾಶವಾಗುತ್ತಾನೆ ನಾವು ಬೆಳೆದಿರುವಂತ ಮಾವು, ರೇಷ್ಮೆ,ಹೂವಿನ ಬೇಸಾಯ ಅನ್ಯಾಯವಾಗಿ ಹೋಗುತ್ತದೆ ಜ್ಮೀನು ಇಲ್ಲ ಎಂದರೆ ಹೈನುಗಾರಿಕೆ ಇಲ್ಲವಾಗಿ ಹಾಲು ಉತ್ಪಾದನೆ ಕುಸಿದು ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಾರೆ,ಖಾಸಗಿ ಕೈಗಾರಿಕೆಗಳ ಸ್ಥಾಪನೆಯಿಂದ ಅನಕೂಲಕ್ಕಿಂತ ಅನಾನುಕೂಲ ಹೆಚ್ಚಾಗಿರುತ್ತದೆ.ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಖಾಸಗಿ ಕೈಗಾರಿಕಾ ಬಂಡವಾಳಗಾರ ನಡುವೆ ಮದ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ.ರೈತನ ಜಮೀನು ಅನ್ನು ಖಾಸಗಿ ವ್ಯಕ್ತಿಗಳಿಗೆ ಕೊಡಿಸುವ ಸರ್ಕಾರಿ ಸಂಸ್ಥೆ ಒಂದೆ ಹಂತದಲ್ಲಿ ಹಣ ಕೊಡಿಸುವುದಿಲ್ಲ ಮೊದಲ ಕಂತು ನೀಡಿ ಕರಾರು ಒಪ್ಪಂದ ಮಾಡಿಕೊಳ್ಳುವ ಖಾಸಗಿಯವರು ಮೂರ್ನಾಲ್ಕು ಕಂತುಗಳಲ್ಲಿ ಹಣ ನೀಡುತ್ತಾರೆ ಅದು ನಿಗದಿತ ಸಮಯದಲ್ಲಿ ನೀಡುವುದಿಲ್ಲ ಇದಕ್ಕೆ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಜವಾಬ್ದಾರಿ ಹೊರುವುದಿಲ್ಲ,ಎಲ್ಲಾ ವ್ಯವಹಾರಕ್ಕೂ ಮಂಡಳಿ ಬ್ರೊಕರಗಳನ್ನು ಪ್ರೊತ್ಸಾಹಿಸುತ್ತದೆ ಎಲ್ಲಾ ವ್ಯವಹಾರವೂ ಅವರ ಮೂಲಕವೆ ನಡೆಸುತ್ತದೆ ಸರ್ಕಾರಿ ಜಮೀನು ಇದ್ದರು ಮೊದಲು ಖಾಸಗಿ ವ್ಯಕ್ತಿಗಳ ಜಮೀನುಗಳನ್ನು ಖರಿದಿ ಮಾಡಿಸುತ್ತದೆ ಈ ಮೂಲಕ ಬ್ರೊಕರಗಳು ಒಳ್ಳೆಯ ಸಂಪಾದನೆ ಮಾಡುತ್ತಾರೆ ಇದೊಂದು ಹಗಲು ಮೋಸ ಎಂದರು.
ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಗುರುತಿಸಿರುವ ಕೈಗಾರಿಕಾ ವಲಯದ ನಕ್ಷೆಯಲ್ಲಿ ಯದರೂರು ಕಂದಾಯ ವೃತ್ತ ಎಂದು ನಮೂದಿಸಲಾಗಿದ್ದು ಇಲ್ಲಿ ಕಂದಾಯ ಗ್ರಾಮಗಳು ಒಳಪಟ್ಟು ಈಗಿರುವ ಯದರೂರಿನ ಹಲವಾರು ಮನೆಗಳನ್ನು ಗುರುತಿಸಲಾಗಿದೆ ಇದರಿಂದ ಬಹುತೇಕ ರೈತರು ನೆಲೆ ಕಳೆದುಕೊಳ್ಳುತ್ತಾರೆ ಈ ಬಗ್ಗೆ ನಿನ್ನೆ ಶಾಸಕರು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ರೈತರು ಜಮೀನು ಕೊಡಲು ಸಾಧ್ಯವಿಲ್ಲ ಎಂದಿರುತ್ತಾರೆ ಶೇ 60 ಭಾಗದ ರೈತರು ಜಮೀನು ನೀಡಲು ಒಪ್ಪದಿದ್ದರೆ ಭೂ ಸ್ವಾಧೀನ ಪ್ರಕ್ರಿಯೆಗೆ ನೀಡಿರುವಂತ ನೋಟಿಪಿಕೇಷನ್ ರದ್ದಾಗಲು ಅವಕಾಶ ಇರುತ್ತದೆ ಎಂದರು.ಸುದ್ಧಿಗೋಷ್ಠಿಯಲ್ಲಿ ಯದರೂರು ಗ್ರಾಮಪಂಚಾಯಿತಿ ಸದಸ್ಯ ಸುರೇಶ್,ತೋಟಗಾರಿಕೆ ಸಂಸ್ಥೆ ಮುಖ್ಯಸ್ಥ ಹನುಮೇಶಗೌಡ, ಅರಕೇರಿಪುಟ್ಟರಾಜು, ವೆಂಕಟರೊಣಪ್ಪ,ಬೀರಗಾನಹಳ್ಳಿನಾರಯಣಸ್ವಾಮಿ,ಮುಂತಾದವರು ಇದ್ದರು.
ಅನಾವಶ್ಯಕ ಮಾತುಗಳು ಬೇಡ ಎಚ್ಚರಿಕೆ
ಶಾಸಕರು ನಡೆಸಿದ ರೈತರ ಸಭೆಯಲ್ಲಿ ಭಾಗವಹಿಸಿದ್ದ ಮಹಾನುಭಾವ,ರೈತರಿಗೆ ಬೇಡವಾದ ಅನಗತ್ಯ ಮಾತುಗಳನ್ನು ಆಡುವ ಮೂಲಕ ನಮ್ಮ ತೆಜೋವಧೆಗೆ ಮುಂದಾಗಿರುವುದು ಖಂಡನೀಯ ಎಂದು ಬೇಟಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು ಮೂರ್ನಾಲ್ಕು ಪಕ್ಷಗಳಲ್ಲಿ ಅನಧಿಕೃತವಾಗಿ ಗುರುತಿಸಿಕೊಂಡಿರುವ ವ್ಯಕ್ತಿ ಎಂದು ಪರೋಕ್ಷವಾಗಿ ಶೇಷಾಪುರಗೋಪಾಲ್ ಅವರ ಹೆಸರು ಹೇಳದೆ ಕುಟುಕಿದ ಬೇಟಪ್ಪ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಕೊಚೀಮೂಲ್ ವಿಚಾರದಲ್ಲಿ ನಮ್ಮ ಹೆಸರುಗಳನ್ನು ಎಳೆದು ತಂದು ನಮ್ಮನ್ನೆಲ್ಲ ವೈಯುಕ್ತಿಕವಾಗಿ ನಿಂದಿಸುವುದು ಸೂಕ್ತ ಅಲ್ಲ ಇದು ಮುಂದುವರೆಯುದು ಯಾರಿಗೂ ಒಳ್ಳೆಯದಲ್ಲ ಎಂದು ಸೂಕ್ಷ್ಮವಾಗಿ ಎಚ್ಚರಿಸಿದರು.