- ಪಿ.ಡಿ.ಒ. ಚಲಪತಿ ಕಚೇರಿಗೆ ಬರುವುದಿಲ್ಲ
- ನರೇಗಾ ಅನುಷ್ಟಾನದಲ್ಲಿ ಪಾರದರ್ಶಕತೆ ಇಲ್ಲ
- ಗ್ರಾ.ಪಂ.ಮಾಜಿ ಸದಸ್ಯರಿಂದ ನೇರ ಆರೋಪ
ಶ್ರೀನಿವಾಸಪುರ:ತಾಲೂಕಿನ ಯಲ್ದೂರು ಹೋಬಳಿಯ ಮುತ್ತಕಪಲ್ಲಿ ಗ್ರಾಮಪಂಚಾಯಿತಿಯಲ್ಲಿ ಎಲ್ಲವೂ ಅಕ್ರಮಗಳೆ ಎಂದು
ಪೆದ್ದಪಲ್ಲಿ ಈರಪ್ಪ ಮತ್ತು ಎಮ್ಮನೂರುರಾಜಣ್ಣ ಮತ್ತಿತರರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕುಂಟಿತವಾಗಿದೆ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO)ಚಲಪತಿ ಅವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಅಸಮದಾನ ವ್ಯಪ್ತಪಡಿಸಿದ್ದಾರೆ, ಕಳೆದ 8-10 ತಿಂಗಳ ಹಿಂದೆ ಪಿ.ಡಿ.ಒ. ಚಲಪತಿ ಅಧಿಕಾರ ಪಡೆದುಕೊಂಡಿದ್ದಾರೆ ಸಮರ್ಪಕವಾಗಿ ಪಂಚಾಯಿತಿ ಕಛೇರಿಗೆ ಬರುವುದಿಲ್ಲ, ಜನರ ಸಮಸ್ಯೆ ಕೇಳಲು ಇಲ್ಲಿ ಅಧಿಕಾರಿಗಳೆ ಇಲ್ಲದಂತಾಗಿದೆ.
ಮುತ್ತಕಪಲ್ಲಿ ಪಂಚಾಯಿತಿಯಲ್ಲಿ ಸ್ವಚ್ಚತೆ ಮರಿಚಿಕೆಯಾಗಿದೆ
ಮುತ್ತಕಪಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಚತೆ ಮರಿಚಿಕೆಯಾಗಿದೆ ಬಹುತೇಕ ಗ್ರಾಮಗಳಲ್ಲಿ ಚರಂಡಿಗಳಲ್ಲಿ ಕಸ ತುಂಬಿದ ಪರಿಣಾಮ ಗಬ್ಬು ವಾಸನೆಯಿಂದ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ ಕನಿಷ್ಠ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಕಾರ್ಯ ಆಗಿಲ್ಲ,ಸ್ವಚ್ಚ ಭಾರತ್ ಮಿಷಿನ್ ಯೋಜನೆಯಡಿ ಕಸ ವಿಭಜಿಸುವ ಬುಟ್ಟಿಗಳ ವಿತರಣೆ ಇದುವರಿಗೂ ಆಗದಿರುವುದು ದುರಂತ ಎನ್ನುತ್ತಾರೆ ಜನತೆ.ನರೇಗಾ ಯೋಜನೆಯಡಿ ಹಣ ಖರ್ಚಾಗುತ್ತಿದೆ ನರೇಗಾ ಕಾಮಗಾರಿ ನಿಯಮಾವಳಿಗಳಂತೆ ಅನುಷ್ಟಾನ ಅಗುತ್ತಿಲ್ಲ ಪಾರದರ್ಶಕತೆ ಇಲ್ಲ ,ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ಮನೆಮನೆಗೂ ನೀರು ಯೋಜನೆ ಇಲ್ಲಿ ಪ್ರಾರಂಭವೆ ಆಗಿಲ್ಲವಂತೆ!
ಹಣಕಾಸು ಯೋಜನೆಗಳ ದಾಖಲೆಗಳೆ ಇಲ್ಲ
15ನೇ ಹಣಕಾಸು ಯೋಜನೆ ಅನುಧಾನ ಖರ್ಚು ವೆಚ್ಚಗಳ ಮಾಹಿತಿ ಇಲ್ಲ,ದುರಸ್ತಿ ಆಗಿರುವ ಕೊಳವೆ ಬಾವಿಗಳಿಗೆ ಪೈಪುಗಳನ್ನು ತೆಗೆದು ಇಲ್ಲಿಯತನಕ ಪಂಪು ಮೋಟಾರ್ ಬಿಟ್ಟಿಲ್ಲ, ಕೆಲ ಸಮಸ್ಯೆಗಳ ಬಗ್ಗೆ ಅರ್ಜಿಗಳನ್ನು ನೀಡಿದ್ದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ,ಪಂಚಯಿತಿ ಅಭಿವೃದ್ದಿಗೆ ಒತ್ತು ನೀಡದೆ ನಿರ್ಲಕ್ಷ್ಯ ಧೊರಣೆ ತೋರುತ್ತಿರುವ ಪಿ.ಡಿ.ಒ. ಕಛೇರಿಗೆ ಬಾರದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಸಮಯದಲ್ಲಿಕಲ್ಲುಕುಂಟೆ ಶ್ರೀನಾಥ್, ರಾಮಕೃಷ್ಣಪ್ಪ, ಗಾಂಧಿನಗರರಾಮಾಂಜಿ ಮತ್ತಿತರರು ಹಾಜರಿದ್ದರು.
ಹೆಸರಳೇಲು ಇಚ್ಚಿಸದ ಜೆ.ಡಿ.ಎಸ್ ಮುಖಂಡ ಹೇಳುವಂತೆ ಪಿ.ಡಿ.ಒ. ಕಛೇರಿಗೆ ಬರುವುದೆ ಇಲ್ಲ ಜನತೆ ಸಮಸ್ಯೆ ಹೊತ್ತು ಪ್ರತಿ ದಿನ ಶ್ರೀನಿವಾಸಪುರಕ್ಕೆ ತಾಲೂಕು ಪಂಚಾಯಿತಿ ಕಚೇರಿಗೆ ಹೋಗಲು ಆಗುತ್ತದ? ಎಂದು ಪ್ರಶ್ನಿಸಿರುವ ಅವರು ಈ ಬಗ್ಗೆ ತಾಲೂಕು ಪಂಚಾಯಿತಿ ಇವೊ ತೀವ್ರವಾಗಿ ಪರಿಗಣಿಸಿ PDO ಚಲಪತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಸೂಚಿಸಬೇಕು ಎಂದಿರುತ್ತಾರೆ.
ಪಂಚಾಯಿತಿ ಕೇಂದ್ರದಲ್ಲಿ ನೀರಿಗೆ ಹಾಹಾಕಾರ
ಮುತ್ತಕಪಲ್ಲಿ ಪಂಚಾಯಿತಿ ಕೇಂದ್ರದಲ್ಲಿ ಹಲವಾರು ದಿನಗಳಿಂದ ನೀರಿನ ಬೋರ್ ವೆಲ್ ಮೋಟಾರ್ ಕೆಟ್ಟು ಹೋಗಿ ಜನತೆ ಕುಡಿಯಲು ನೀರಿಲ್ಲದೆ ಜನತೆ ಪರಿತಪಿಸುತ್ತಿದ್ದಾರೆ,ಇಲ್ಲಿನ ಪಂಚಾಯಿತಿ ಆಡಳಿತ ಮಂಡಳಿ ಹಾಗು ಅಧಿಕಾರಿ ಜನರ ಗೊಳು ಆಲಿಸಲೆ ಇಲ್ಲದ ಹಿನ್ನಲೆಯಲ್ಲಿ ಗ್ರಾಮಸ್ಥರ ನೀರಿನ ಸಮಸ್ಯೆ ಅರಿತ ಯುವ ಮುಖಂಡ ಆಂಜನೇಯರೆಡ್ಡಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿ ದಿನ 3 ರಿಂದ 4 ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಸರಬರಾಜು ಮಾಡುತ್ತಿದ್ಧಾರೆ.