ಶ್ರೀನಿವಾಸಪುರ:ನಡೆದಿದ್ದು ಶಿಕ್ಷಕರ ಚುನಾವಣೆ ಅದರೆ ನಡೆದ ರೀತಿ ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಎಲ್ಲವೂ ಖುಲ್ಲಂ ಖುಲ್ಲಾ ಎನ್ನುವಂತಿತ್ತು. ಇಂದು ನಡೆದಂತ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಶೈಲಿ ಸಾರ್ವಜನಿಕರನ್ನು ಗಾಭರಿ ಪಡಿಸಿದೆ ಚುನಾವಣೆಗೂ ಒಂದು ವಾರದ ಮುಂಚಿನಿಂದಲೂ ಮತದಾರರನ್ನು ಓಲೈಸಿಕೊಳ್ಳಲು ಪಾನಕ ಪನ್ಯಾರ ಪ್ಯಾಕೆಜ್ ಗಿಫ್ಟ್ ಸೀರೆ ಇನ್ನಿತರೆ ವ್ಯವಹಾರವಾಗಿ ವ್ಯವಸ್ಥಿತವಾಗಿ ಸರಬರಾಜು ಮಾಡುವ ಮೂಲಕ ಪಟ್ಟಭದ್ರರಾದ ಮತದಾರ ಶಿಕ್ಷಕರನ್ನು ಒಲಸಿಕೊಳ್ಳುವ ಕಾರ್ಯ ಭರದಿಂದ ನಡೆದಿದೆ ಎನ್ನಲಾಗುತ್ತಿದ್ದು ಇಂದು ಚುನಾವಣೆ ದಿನ ಕೊಸರು ಎನ್ನುವಂತೆ ಪೆಟ್ರೊಲ್ ಗಾದರು ಇರಲಿ ಎಂಬ ಗೊಜಾಟದ ವ್ಯವಹಾರ ನಾಚಿಕೆ ಗಿಚಿಗೆ ಊರಿಂದಾಚಗೆ ಎನ್ನುವಂತೆ ನಡಿತಿತ್ತು.
ಮತದಾನ ಕೇಂದ್ರ ಇದ್ದ ತಹಶೀಲ್ದಾರ್ ಕಚೇರಿ ಬಳಿಯ ಸುತ್ತಮುತ್ತಲ ಪ್ರದೇಶದಲ್ಲಿ ಹಾಕಲಾಗಿದ್ದ ರಾಜಕೀಯ ಪೆಂಡಾಲ ಕೆಳಗೆ ಹೋಗಿಬರುತ್ತಿದ್ದವರು ಕೈ ಬೆಚ್ಚಗೆ ಮಾಡಿಕೊಂಡು ಪುನಿತರಾಗುತ್ತಿದ್ದರು.ಕೈ ಕೆಲಸ ಅಗದಿದ್ದರೆ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯೇನ ನಮಃ ಎಂದು ಎದುರುಗಿದ್ದ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಮುಖ ಊದಿಸಿಕೊಂಡು ಕುಳತಿದ್ದವರನ್ನು ಮರಿ ನಾಯಕರು ಯಾರದ್ರೂ ಗಮನಿಸಿ ಡೀಲರ್ ಗೆ ಸುದ್ಧಿ ಮುಟ್ಟಿಸಿದರೆ ಊದಿಸಿಕೊಂಡವರ ಊತ ಇಳಿಸಿ ಮತಗಟ್ಟೆ ವರಿಗೂ ಬಿಟ್ಟು ಬರುವ ಕಾರ್ಯ ಭರದಿಂದ ನಡೆಯುತಿತ್ತು.
ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆಯಾಗಿದ್ದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ ಶ್ರೀನಿವಾಸ್,ಎನ್ಡಿಎ ಕೂಟದ ಬಿಜೆಪಿ ಅಭ್ಯರ್ಥಿಯಾಗಿ ವೈ.ಎ ನಾರಾಯಣ ಸ್ವಾಮಿ ಸ್ಪರ್ದಿಸಿದ್ದಾರೆ ಈ ಇಬ್ಬರು ಅಭ್ಯರ್ಥಿಗಳು ಯಾರಿಗೂ ಯಾರು ಕಡಿಮೆ ಇಲ್ಲದಂತ ಪ್ರಭಾವಿ ಅಭ್ಯರ್ಥಿಗಳು, ಇವರಿಗೆ ಸೆಡ್ಡು ಹೊಡೆದು ಹೊಸ ಮುಖ ಎಂಬಂತೆ ಚುನಾವಣೆ ಕಣದಲ್ಲಿ ಪಕ್ಷೇತರರಾಗಿ ವಿನೋದ್ ಶಿವರಾಜ್ ಆಚ್ಚರಿ ಅಭ್ಯರ್ಥಿ ಸ್ಪರ್ದಿಸಿದ್ದಾರೆ ಇತ ಎದ್ದೇಳು ಮಂಜುನಾಥ ಎನ್ನುವಂತೆ ರಾತ್ರೋ ರಾತ್ರಿ ನೇರವಾಗಿ ಪಟ್ಟಭದ್ರ ಮತದಾರ ಶಿಕ್ಷಕರನ್ನು ತಲುಪಿ ಬಿಟ್ಟಿದ್ದಾರೆ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಏನಾಗುತ್ತಿದೆ ಎನ್ನುವಷ್ಟರಲ್ಲಿ ಕ್ಷೇತ್ರದಲ್ಲಿ ವಿನೋದ್ ಶಿವರಾಜ್ ಹೆಸರು ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ ಇದನ್ನು ನೋಡಿದಂತ ಪ್ರಭಾವಿ ಅಭ್ಯರ್ಥಿಗಳಾದ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಗಾಭಾರಿಯಾಗಿ ತಡಬಡಾಯಿಸಿಕೊಂಡು ಸ್ಥಳಿಯತೆ ಇನ್ನೊಂದು ಮತ್ತೊಂದು ಎಂದು ಶಿಕ್ಷಕರನ್ನು ಓಲೈಸಿದ್ದಾರೆ.
ವೈ.ಎ.ನಾರಯಣಸ್ವಾಮಿ ಮಹಾ ಪ್ರವೀಣ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ನಾಲ್ಕನೆ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣ ಸ್ವಾಮಿ ಚುನಾವಣಾ ವ್ಯವಸ್ಥೆ ನಡೆಸುವಲ್ಲಿ ಮಹಾ ಪ್ರವೀಣ ಶಿಕ್ಷಣ ಸಂಸ್ಥೆಗಳ ಆಲ ಅಗಲ ಆರೆತು ಆಡಳಿತ ಮಂಡಳಿ ಮುಖ್ಯಸ್ಥರ ಜೋತೆ ಉತ್ತಮ ಒಡೆನಾಟ ಇಟ್ಟುಕೊಂಡು ಚುನಾವಣೆ ನಡೆಸುವಂತ ತಂತ್ರಗಾರಿಕೆ ಶೈಲಿ ಯಾರಿಗೂ ಅರ್ಥ ಆಗುವುದಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಆಗರ್ಭ ಶ್ರೀಮಂತ
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಡಿ.ಟಿ.ಶ್ರೀನಿವಾಸ್ ಧನವಂತ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮ ಅವರ ಪತಿ,ಕಾಂಗ್ರೆಸ್ ಮಾಜಿ ಮಂತ್ರಿ ದಿವಂಗತ ಕೃಷ್ಣರಾಜಪುರಂ ಕೃಷ್ಣಪ್ಪ ಆಳಿಯ,ಕಾಂಗ್ರೆಸ್ ಆಡಳಿತದಲ್ಲಿ ಇದೆ ಸಿದ್ದರಾಮಯ್ಯ ಹೆಸರಿನಲ್ಲಿ ಹಿಂದುಳಿದ ಮತಗಳನ್ನು ಕ್ರೂಡಿಕರಿಸಿಕೊಂಡು ಪಡೆಯಬಹುದು ಎಂಬ ಲೆಕ್ಕಚಾರದ ಆಶಾಭಾವನೆಯಿಂದ ಇದ್ದಾರೆ.
ಪಕ್ಷೇತರರಾಗಿ ಸ್ಪರ್ದಿಸಿರುವ ವಿನೋದ್ ಶಿವರಾಜ್ ಹಿಂದುಳಿದ ಕುರುಬ ಸಮಾಜದವರು.
ಒಟ್ಟಾರೆ ಪಟ್ಟಭದ್ರ ಮತದಾರ ಶಿಕ್ಷಕರು ಮತ ಚಲಾಯಿಸಿದ್ದಾರೆ ಗೆಲವು ಯಾರು ಪಡೆಯುತ್ತಾರೊ ನೋಡಬೇಕು.