- ಆಡಳಿತ ರೂಡ ಪಕ್ಷದ ಮುಖಂಡರ ದೌರ್ಜನ್ಯದ ಪರಾಕಾಷ್ಟೆ ನಾಚಿಕೆ ಗೇಡು
- ಪಂಚಾಯಿತಿ ರಾಜ್ ಇಲಾಖೆ ಪ್ರಿನ್ಸಿಪಲ್ ಸೆಕೆಟ್ರಿ ಮೇಲೆ ಒತ್ತಡ ಹಾಕಿ ಎನ್ ಆರ್ ಇ ಜಿ ಬಿಲ್ ತಡೆ
- ಅಧಿಕಾರಿಗಳಿಗೆ ಹೆದರಸಿ ಬೆದರಿಸಿ ಅವಾಚ್ಯ ಶಬ್ದಗಳಿಂದ ಬೈದು ಬ್ಲಾಕ್ ಮೇಲ್
ಶ್ರೀನಿವಾಸಪುರ:- ವಿಧಾನಸಭಾ ಕ್ಚೇತ್ರದಲ್ಲಿ ಆಂಧ್ರ ಪ್ರದೇಶದ ಅಕ್ರಮ ಮತದಾರರು ಇದ್ದಾರೆ ಅಕ್ರಮ ಮತದಾರರನ್ನು ತೊಲಗಿಸಿ ನಂತರ ಮುಂಬರುವಂತ ಚುನಾವಣೆಗಳನ್ನು ನಡೆಸುವಂತೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಜಿಲ್ಲಾಡಳಿತ ಮತ್ತು ಚುನಾವಣೆ ಆಯೋಗವನ್ನು ಒತ್ತಾಯಿಸಿದರು.
ಅವರು ಶ್ರೀನಿವಾಸಪುರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಾಲೂಕಿನ ಗಡಿಭಾಗದ ರಾಯಲ್ಪಾಡು ಹೋಬಳಿಯಲ್ಲಿ ಅಕ್ರಮವಾಗಿ ಆಂಧ್ರದ ಜನರನ್ನು ಕರೆ ತಂದು ಮತದಾರರ ಪಟ್ಟಿಯಲ್ಲಿ ಆಡಳಿತಾರೂಡ ಕಾಮಗ್ರೆಸ್ ಪಕ್ಷದ ಮುಖಂಡರು ಸೇರಿಸಿದ್ದಾರೆ ಎಂದು ರಮೇಶ್ ಕುಮಾರ್ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ 15 ರಿಂದ 20 ಸಾವಿರ ಮತದಾರರನ್ನು ಅಕ್ರಮವಾಗಿ ಸೇರ್ಪಡೆ ಮಾಡಿಸಿ ಚುನಾವಣೆ ನಡೆಸಲು ಕಾಂಗ್ರೆಸ್ ಪಕ್ಷದ ಮುಖಂಡರು ಯೋಜನೆ ರೂಪಿಸಿದ್ದು ಹೀಗೆ ಅಕ್ರಮ ಮತದಾರರ ಪಟ್ಟಿಯನ್ನು ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಯಾವುದೇ ಚುನಾವಣೆ ನಡೆಸಬಾರದು ಎಂದು ಚುನಾವಣೆ ಅಧಿಕಾರಿಗಳನ್ನು ಅಗ್ರಹಿಸಿದರು.ಈ ಬಗ್ಗೆ ರಾಜ್ಯ ಚುನಾವಣೆ ಆಯೋಗಕ್ಕೂ ದೂರು ಕೊಡುವುದಾಗಿ ಹೇಳಿದರು.
ಜೆಡಿಎಸ್ ಆಡಳಿತದ ಗ್ರಾಮಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಹಸ್ತಕ್ಷೇಪ
ಕ್ಷೇತ್ರದ ಹೋಳೂರು,ಹೋಬಳಿ ಸೇರಿದಂತೆ ಹಳೇ ತಾಲೂಕಿನ ಜೆಡಿಎಸ್ ಆಡಳಿತ ಇರುವಂತ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಪಕ್ಷದ ಮುಖಂಡರು ಅನಗತ್ಯವಾಗಿ ಹಸ್ತಕ್ಷೇಪ ಮಾಡಿ ಅಭಿವೃದ್ದಿ ಪರ ಆಡಳಿತ ನಡೆಸಲು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಮಾಜಿ ಶಾಸಕರು ಎನ್ ಆರ್ ಇ ಜಿ ಯೋಜನೆಯಲ್ಲಿ ಉತ್ತಮವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿರುವಂತ ಪಂಚಾಯಿತಿಗಳ ಬಿಲ್ ಮಾಡದಂತೆ ಪಂಚಾಯಿತಿ ರಾಜ್ ಇಲಾಖೆ ಪ್ರಿನ್ಸಿಪಲ್ ಸೆಕೆಟ್ರಿಗೆ ಮೇಲೆ ಒತ್ತಡ ಹಾಕುತ್ತಾರೆ ಜನಸಾಮಾನ್ಯರ ಎನ್ ಆರ್ ಇ ಜಿ ಬಿಲ್ ಪಾಸ್ ಆಗಂದಂತೆ ನಿಲ್ಲಿಸಿರುವ ನೀಚ ಕೆಲಸ ಆಡಳಿತ ರೂಡ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇರುವಂತ ಕೋಡಿಪಲ್ಲಿ ಪಂಚಾಯಿತಿಯಲ್ಲಿ ಅಕ್ರಮ ಬಿಲ್ ಪಾಸ್ ಮಾಡುವಂತ ಅಧಿಕಾರಿಗಳು ತಾಲೂಕಿನ ಅತಿದೊಡ್ಡ ಹಾಗು ಹೆಚ್ಚು ಆದಾಯ ಇರುವಂತ ಗೌವನಿಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯದಂತೆ ಜಿಲ್ಲಾ ಪಂಚಾಯಿತಿ ಸಿಇಒ ಮೇಲೆ ಒತ್ತಡ ಹಾಕಿದ್ದಾರೆ. ತನಿಖೆ ಹೆಸರಲ್ಲಿ ಯಾವುದೋ ಇಲಾಖೆ ಅಧಿಕಾರಿಗಳು ಬಂದು ಅಲ್ಲಿನ ಚುನಾಯಿತ ಮಂಡಳಿ ಸದಸ್ಯರನ್ನು ಹಣಕ್ಕಾಗಿ ಪೀಡಿಸುತ್ತಾರೆ ಇಂತಹ ಹೀನಾಯ ಕೃತ್ಯ ಮಾಡುವುದಕ್ಕಿಂತ ಅಕ್ರಮ ನಡೆದಿರುವುದೇ ಆದರೆ ಎಸಿಬಿ ಯಂತಹ ಸಂಸ್ಥೆಗಳಿಂದ ತನಿಖೆ ನಡೆಸಿ ನಮ್ಮ ಚುನಾಯಿತ ಮಂಡಳಿ ಸದಸ್ಯರು ಸಹಕಾರ ನೀಡುತ್ತಾರೆ ಅದು ಬಿಟ್ಟು ಎನ್ ಆರ್ ಇ ಜಿ ಗಂದಗಾಳಿ ಗೊತ್ತಿಲ್ಲದವರನ್ನು ತನಿಖಾಧಿಕಾರಿಗಳನ್ನಾಗಿ ಮಾಡಿ, ಹೆದರಸಿ ಬೆದರಿಸಿ ಅವಾಚ್ಯ ಶಬ್ದಗಳಿಂದ ಬೈದು ಬ್ಲಾಕ್ ಮೇಲ್ ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಲಿತಾಶ್ರೀನಿವಾಸನ್, ಉಪಾಧ್ಯಕ್ಷೆ ಅಯಿಶಾನಯಾಜ್ ಸದಸ್ಯರಾದ ವೆಂಕಟರೆಡ್ಡಿ, ರಾಜು,ಆನಂದಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ವಕೀಲ ಶಿವಣ್ಣ, ತಾಲೂಕು ಪಂಚಾತಿ ಮಾಜಿ ಸದಸ್ಯ ಹಳೇಪೇಟೆಮಂಜು,ಕಾಡುದೇವಂಡಹಳ್ಳಿ ರಾಚಂದ್ರೇಗೌದ, ಮುಖಂಡರಾದ ಪೂಲಶಿವಾರೆಡ್ಡಿ.ಜಗದೀಶ್, ಕಾರ್ ಬಾಬು ಮುಂತಾದವರು ಇದ್ದರು.
ಪಟ್ಟಣದಲ್ಲಿ ನಡೆಯುತ್ತಿರುವಂತ ಸ್ಲಂ ಬೋರ್ಡ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿದೆ ಈ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿ ಪತ್ರಕರ್ತರಿಗೆ ಮಾಹಿತಿ ನೀಡುವಂತೆ ಪಟ್ಟಣದ ಯುವ ಮುಖಂಡ ಜಗದೀಶ್ ಮಾಜಿ ಶಾಸಕರ ಬಳಿ ಪ್ರಸ್ತಾಪಿಸಿದಾಗ ತಾಲೂಕಿನ ಅಕ್ರಮಗಳನೆಲ್ಲಾ ಹೇಳಿದ್ದೇನೆ ಇದು ಸಹ ಅದರಲ್ಲಿ ಹೇಳಿರುವುದಾಗಿ ಮಾಜಿ ಶಾಸಕರ ಹೇಳಿದಕ್ಕೆ ಬೆಸೆತ್ತ ಜಗದೀಶ್ ಸುದ್ದಿಗೋಷ್ಠಿಯಿಂದ ಎದ್ದು ಹೋರನಡೆದ ಪ್ರಸಂಗ ನಡೆಯಿತು.
ನಾನು ಬಿಜೆಪಿ ಸೇರುವುದಿಲ್ಲ ಸ್ಪಷ್ಟನೆ
ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಮೊನ್ನೆ ನಡೆದ ಆರೋಗ್ಯ ಕೇಂದ್ರಗಳ ಉದ್ಘಾಟನೆ ಸಮಯದಲ್ಲಿ ಆರೋಗ್ಯ ಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಆಹ್ವಾನದ ಮೇರೆಗೆ ನಾನು ಅಥಿತಿಯಾಗಿ ಭಾಗವಹಸಿದ್ದೆ ಹೋರತು ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.