ಶ್ರೀನಿವಾಸಪುರ:ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ನೌಕರರ ಜೀವನ ಸುಖಮಯವಾಗಿರಲಿ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಶುಭಹಾರೈಸಿದರು.
ಪುರಸಭೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸಿ ವಯೋಸಹಜ ನಿವೃತ್ತರಾದ ಕಚೇರಿ ಸಹಾಯಕಿ ಶಾಂತಮ್ಮ ಹಾಗು ನೀರು ಸರಬರಾಜು ವಿಭಾಗದ ಕೃಷ್ಣ ಅವರನ್ನು ಗೌರವಿಸಿ ಬಿಳ್ಕೊಡುಗೆ ಕೊಟ್ಟು ಮಾತನಾಡಿದರು. ಸೇವಾವಧಿಯಲ್ಲಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿ ಸೌಹಾರ್ದತೆಯಿಂದ ನಡೆದುಕೊಂಡಿದ್ದರೆ ನಿವೃತ್ತಿ ನಂತರವೂ ಸಮಾಜದಲ್ಲಿ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂದರು.
ಪರಿಸರ ಇಂಜನೀಯರ್ ಲಕ್ಷ್ಮೀಶ ಮಾತನಾಡಿ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ ಆದರೆ ಅವರು ಕಾರ್ಯನಿರ್ವಹಣೆ ಸಮಯದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದುವುದು ಅತ್ಯಂತ ಹೆಮ್ಮೆಯ ವಿಚಾರ ಈ ವಿಚಾರದಲ್ಲಿ ಶಾಂತಮ್ಮ ಮತ್ತು ಕೃಷ್ಣ ಯಶ್ವಸಿಯಾಗಿದ್ದಾರೆ ಎಂದರು.
ಹಿರಿಯ ಲೆಕ್ಕಾಧಿಕಾರಿ ನಾಗೇಶ ಮಾತನಾಡಿ ಸರ್ಕಾರಿ ಸೇವೆಯಲ್ಲಿ ಏಳುಬಿಳುಗಳು ಸಹಜ ಕಚೇರಿಯಲ್ಲಿ ಸಹಾಯರಾಗಿದ್ದ ಶಾಂತಮ್ಮ ಎಲ್ಲರಿಗೂ ಹಿರಿಕ್ಕನಾಗಿ ಸಿಬ್ಬಂದಿಯೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದರು,ನೀರು ಸರಬರಾಜು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಕೃಷ್ಣ ಪ್ರಾಮಾಣಿಕವಾಗಿ ವಿಶ್ವಾಸಾರ್ಹತೆಯಿಂದ ಕೆಲಸ ಮಾಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಆರೋಗ್ಯಾಧಿಕಾರಿ ರಮೇಶ್ ಗೌಡ,ಕಂದಾಯಧಿಕಾರಿ ನಾಗರಾಜ್, ಶಂಕರ್,ಸದಸ್ಯ ಸರ್ದಾರ್,ಬಾಲಕೃಷ್ಣ,ಸತೀಶ್,ನಾಗರಾಜ,ಸಂತೋಷ,ಸುರೇಶ್ ಮುಂತಾದವರು ಇದ್ದರು.
ನಿವೃತ್ತ ನೌಕರರನ್ನು ಮನೆಗೆ ಬಿಟ್ಟು ಬಂದ ಮುಖ್ಯಾಧಿಕಾರಿ
ಮುಖ್ಯಾಧಿಕಾರಿ ಸತ್ಯನಾರಯಣ್ ನಿವೃತ್ತ ನೌಕರರನ್ನು ಸರ್ಕಾರಿ ಕಾರಿನಲ್ಲಿ ತಾವೆ ವಾಹನ ಚಲಾಯಿಸಿಕೊಂಡು ಹೋಗಿ ಅವರುಗಳ ಮನೆಯವರಿಗೂ ಬಿಟ್ಟು ಬಂದರು