- ಅಕ್ರಮವಾಗಿ ಉಳುಮೆ ಆರೋಪದ ಟ್ರ್ಯಾಕ್ಟರ್
- ರೈತರನ್ನು ವಶಕ್ಕೆ ಪಡೆದ ಅರಣಾಧಿಕಾರಿಗಳು
- ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ
- ಮುಂದಾದ ರೈತ ನಾಗರಾಜ್
ಶ್ರೀನಿವಾಸಪುರ:ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದ ಭೂಮಿಯಲ್ಲಿ ಉಳುಮೆ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಟ್ರ್ಯಾಕ್ಟರ್ ಗಳನ್ನು ಹಾಗು ರೈತರನ್ನು ವಶಕ್ಕೆ ಪಡೆದ ಘಟನೆ ಇಂದು ತಾಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ನಡೆಯಿತು.
ತೆರವು ಮಾಡಿದ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ವಿವಾದಿತ ಭೂಮಿ ಇರುವ 29 ರ ಅರಣ್ಯ ಪ್ರದೇಶದ ಭೂಮಿಯಲ್ಲಿ ರೈತರು ಉಳುಮೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೇತಗಾನಹಳ್ಳಿ ಗ್ರಾಮದಲ್ಲಿನ ರೈತರಿಗೆ ಸೇರಿದ ಟ್ರ್ಯಾಕ್ಟರ್ ಗಳನ್ನು ರೈತರನ್ನು ಪೋಲಿಸರ ಬದ್ರತೆಯಲ್ಲಿ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುತ್ತಾರೆ.
ಕಳೆದ ಶನಿವಾರ ತೆರವು ಭೂಮಿಯಲ್ಲಿ ಉಳುಮೆ ಮಾಡಲು ಮುಂದಾದ ರೈತರನ್ನು ತಡೆದ ಅರಣ್ಯಾಧಿಕಾರಿಗಳು ಹಾಗು ರೈತರ ನಡುವೆ ತಳ್ಳಾಟ,ನೂಕಾಟ ನಡೆದು ಸ್ಥಳದಲ್ಲಿ ಪ್ರಕ್ಷಬ್ದ ಪರಿಸ್ಥಿತಿ ಏರ್ಪಟ್ಟಿತು.ನಂತರದಲ್ಲಿ ಪೋಲಿಸರ ಮದ್ಯಪ್ರವೇಶದಿಂದ ರೈತರಾಗಲಿ ಹಾಗು ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕಾರಣಕ್ಕೂ ಜಮೀನುಗಳಿಗೆ ಹೋಗದಂತೆ ಯಥಾ ಸ್ಥಿತಿ ಕಾಡಪಾಡಿಕೊಂಡು ಬರಬೇಕೆಂದು ಪರಸ್ಪರ ಬರಿಸಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ವಾಪಸ್ಸು ತೆರಳಿದ್ದರು.
ಟ್ರ್ಯಾಕ್ಟರ್ ಸಮೇತ ರೈತರು ವಶಕ್ಕೆ
ಇಂದು ಭಾನುವಾರ ಮತ್ತೆ ಅರಣ್ಯ ಇಲಾಖೆ ಅಧಿಕಾರಿಗಳು ನೂರಾರು ಸಿಬ್ಬಂದಿಯೊಂದಿಗೆ ಕೇತಗಾನಹಳ್ಳಿಗೆ ಆಗಮಿಸಿ ವಿವಾದಿತ ಜಾಗದಲ್ಲಿ ಉಳುಮೆ ಮಾಡಿದ್ದ ಆರೋಪದ ಮೇಲೆ ರೈತರ ಟ್ರ್ಯಾಕ್ಟರ್ ಗಳನ್ನು ಸಿಝ್ ಮಾಡಿದ್ದಾರೆ ಹಾಗು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟ ಆರೋಪ ಹೊರೆಸಿ ಕೇತಗಾನಹಳ್ಳಿ ಬೈರಾರೆಡ್ಡಿ ಹಾಗು ಕೃಷ್ಣಾರೆಡ್ಡಿ ಎಂಬ ರೈತರನ್ನು ವಶಕ್ಕೆ ಪಡೆದಿದ್ದರು ಇದನ್ನು ವಿರೋಧಿಸಿದ ಕೇತಗಾನಹಳ್ಳಿ ಗ್ರಾಮಸ್ಥರು ಮತ್ತು ರೈತರು ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಿದರು ಕೇತಗಾನಹಳ್ಳಿ ರೈತ ನಾಗರಾಜ್ ಪೆಟ್ರೋಲ್ ಸುರಿದುಕೊಂಡು ಅತ್ಮಹತ್ಯೆಗೆ ಯತ್ನಿಸಿದ್ದು ಇದರಿಂದ ತಣ್ಣಗಾದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದ ರೈತರನ್ನು ಬಿಡುಗಡೆ ಮಾಡಿದ್ದಾರೆ.ಗ್ರಾಮದಲ್ಲಿ ತ್ವೇಷಮಯ ವಾತವರಣ ಉಂಟಾಗಿದೆ.

ಕೇತಗಾನಹಳ್ಳಿ ಸರ್ವೆ ನಂ 29 ರ ಅರಣ್ಯ ಪ್ರದೇಶಕ್ಕೆ ಹೋಗುವ ದಾರಿಯಲ್ಲಿ
ಅರಣ್ಯ ಹಾಗು ಪೋಲಿಸ್ ಸಿಬ್ಬಂದಿ
ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ
ಕೇತಗಾನಹಳ್ಳಿಯಲ್ಲಿ ಅರಣ್ಯಾಧಿಕಾರಿಗಳು ರೈತರ ಮನೆಗಳಿಗೆ ನುಗ್ಗಿ ರೈತರ ಮೇಲೆ ಗುಂಡಾಗಳಂತೆ ದೌರ್ಜನ್ಯವಾಗಿ ವರ್ತಿಸಿದ್ದಾರೆ ಇದು ಸರಿಯಾದ ಕ್ರಮ ಅಲ್ಲ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು ಆರೋಪಿಸಿದ್ದಾರೆ. ಕೇತಗಾನಹಳ್ಳಿ ನಾಗರಾಜ್ ಮಾತನಾಡಿ ನ್ಯಾಯಲದಲ್ಲಿ ಕಾನೂನು ನಮ್ಮ ಪರವಾಗಿ ಇದೆ ಹಾಗಾಗಿ ನಾಳೆಯಿಂದ ನಾವು ನಮ್ಮ ಭೂಮಿಯಲ್ಲಿ ಉಳುಮೆ ಮಾಡಲು ಹೋಗುತ್ತೇವೆ ಅದ್ಯಾರು ತಡೆಯುತ್ತಾರೆ ನೊಡೋಣ ಎಂದು ಸವಾಲ್ ಹಾಕಿದರು.