ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಬಲಾಢ್ಯರು ಸಾವಿರಾರು ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಅಂತಹವರ ಪರವಾಗಿ ಇಲ್ಲಿನ ತಹಶೀಲ್ದಾರ್ ನಿಂತಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ಇಂದು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವರು ಅರಣ್ಯಭೂಮಿ ಒತ್ತುವರಿ ಮಾಡಿಕೊಂಡಿದ್ದು ಅವುಗಳನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಡವ ಒಂದೆಕರೆ ಎರಡೆಕರೆ ಸಾಗುವಳಿ ಮಾಡಿಕೊಂಡಿದ್ದ ರೈತರ ಜಮೀನನ್ನು ತೆರವುಗೊಳಿಸುವಾಗ ಯಾವುದೇ ಅಡ್ಡಿ ಆತಂಕ ಇನ್ಯಾವುದೆ ತಾಂತ್ರಿಕ ದೋಷ ಇರಲಿಲ್ಲ ಈಗ ಬಲಾಢ್ಯ ರಾಜಕಾರಣಿಗಳು ಅತಿಕ್ರಮಿಸಿಕೊಂಡಿರುವ ಜಮೀನುಗಳನ್ನು ಸರ್ವೆ ಮಾಡಲು ಕಂದಾಯ ಇಲಾಖೆಯಲ್ಲಿ ಇಲ್ಲದ ತಾಂತ್ರಿಕ ದೋಷ ಅಡ್ಡಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಸರ್ವೆ ಮಾಡದಿದ್ದರೆ ಬೆತ್ತಲೆ ಪ್ರತಿಭಟನೆ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಾಲೂಕಿನ ರಾಯಲ್ಪಾಡು ಹೋಬಳಿ ಜಿನಗಲಕುಂಟೆ ರಾಜ್ಯ ಅರಣ್ಯ ವ್ಯಾಪ್ತಿಯ ಹೊಸಹುಡ್ಯ ಗ್ರಾಮದಲ್ಲಿ ದೊಡ್ಡಮಟ್ಟದಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು .ಸರ್ವೆ ನಂ 1 ಮತ್ತು 2 ರಲ್ಲಿ, 62 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಈ ಕುರಿತಾಗಿ ನವಂಬರ್ 6 ರಂದು ಅರಣ್ಯ ಇಲಾಖೆ ಹಾಗು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು,
ಸರ್ವೇ ಮಾಡಲು ಆಸಕ್ತಿ ತೊರದ ಕಂದಾಯ ಸಬೂಬು ಹೇಳಿಕೊಂಡು ಮುಂದೂಡುತ್ತಿದ್ದಾರೆ ಕಾಯ್ದೆಯನ್ನು ಮಾಡುವವರೇ ಕಾಯ್ದೆಯನ್ನು ಮುರಿದು ಮುಂದುವರಿಯುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವ ಇಲ್ಲಿನ ತಹಶೀಲ್ದಾರ್ ಈ ಕೂಡಲೇ ಜಂಟಿ ಸರ್ವೆ ಮಾಡದೆ ಹೋದರೆ ಬೆತ್ತಲೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.ಕಂದಾಯ ಇಲಾಖೆ ಕಾರ್ಯವೈಖರಿ ಕುರಿತಾಗಿ ತೀವ್ರಧಾಟಿಯಲ್ಲಿ ರೈತ ಮುಖಂಡರು ಆಕ್ರೋಶ ಹೊರಹಾಕಿದರು.