ಮಾಜಿ ಸ್ಪೀಕರ್ ರಮೇಶಕುಮಾರ್ ಜಮೀನು ವಿವಾದ ಕಂದಾಯ ಹಾಗು ಅರಣ್ಯ ಇಲಾಖೆ ಜಂಟಿ ಸರ್ವೆಗೆ ಅಗ್ರಹಿಸಿ ರೈತ ಸಂಘದ ಪ್ರತಿಭಟನೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ ಇಬ್ಬರ ನಡುವೆ ತಳ್ಳಾಟ ನೂಕಾಟ ಪೋಲಿಸರ ಮದ್ಯಪ್ರವೇಶ.
ಶ್ರೀನಿವಾಸಪುರ: ಮಾಜಿ ಸ್ಪೀಕರ್ ರಮೇಶಕುಮಾರ್ ಸೇರಿದಂತೆ ಬಲಾಢ್ಯರು ಸಾವಿರಾರು ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳಿಗೆ ಸಂಬಂದಿಸಿದಂತೆ ಜಂಟಿ ಸರ್ವೆ ನಡೆಸಬೇಕು ಎಂದು ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಇಂದು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಲು ಕುಳತಿದ್ದರು ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗಿದ್ದು ಪೋಲಿಸರು ಮದ್ಯಪ್ರವೇಶಿಸಿ ಎರಡು ಕಡೆ ಕಾರ್ಯಕರ್ತರನ್ನು ಚದುರಿಸಿದರು
ಜಂಟಿ ಸರ್ವೆಗೆ ಅಗ್ರಹಿಸಿ ಸಮಯ ನಿಗದಿ ಮಾಡಿದ್ದ ರೈತ ಸಂಘ
ರೈತ ಮುಖಂಡ ನಾರಯಣಗೌಡ ಹೇಳುವಂತೆ ರಾಯಲ್ಪಾಡು ಹೋಬಳಿ ಜಿನಗಲಕುಂಟೆ ರಾಜ್ಯ ಅರಣ್ಯ ವ್ಯಾಪ್ತಿಯ ಹೊಸಹುಡ್ಯ ಗ್ರಾಮದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು .ಸರ್ವೆ ನಂ 1 ಮತ್ತು 2 ರಲ್ಲಿ, 62 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಈ ಕುರಿತಾಗಿ ನವಂಬರ್ 6 ರಂದು ಅರಣ್ಯ ಇಲಾಖೆ ಹಾಗು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು,
ಸರ್ವೇ ಮಾಡಲು ಆಸಕ್ತಿ ತೊರದ ಕಂದಾಯ ಸಬೂಬು ಹೇಳಿಕೊಂಡು ಮುಂದೂಡುತ್ತಿದ್ದಾರೆ ಕಾಯ್ದೆಯನ್ನು ಮಾಡುವವರೇ ಕಾನೂನನ್ನು ಮುರಿಯುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವ ಇಲ್ಲಿನ ತಹಶೀಲ್ದಾರ್ ಈ ಕೂಡಲೇ ಜಂಟಿ ಸರ್ವೆ ಮಾಡದೆ ಹೋದರೆ ಬೆತ್ತಲೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.ಅದರಂತೆ ಇಂದು ರೈತರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವರು ಅರಣ್ಯಭೂಮಿ ಒತ್ತುವರಿ ಮಾಡಿಕೊಂಡಿದ್ದು ಅವುಗಳನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ರೈತರಲ್ಲ ಪೇಮೆಂಟ್ ಗಿರಾಕಿಗಳು
ರೈತ ಸಂಘದ ಹೆಸರಿನಲ್ಲಿ ಬಂದಿರುವ ರೈತ ಮುಖಂಡ ನಾರಯಣಗೌಡ ಬಣದವರು ನಿಜವಾದ ರೈತರಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು ಇವರು ನಿಜವಾದ ರೈತರಲ್ಲ ಪೇಮೆಂಟ್ ಗಿರಾಕಿಗಳು ಎಂದು ರೈತ ಮುಖಂಡರ ವಿರುದ್ದ ದಿಕ್ಕಾರ ಕೂಗುತ್ತ ಬೊಬ್ಬುಲಿಪುಲಿ ರಮೇಶ್ ಕುಮಾರ್ ಗೆ ಜೈ ಅಂತ ನಿನಾದಗಳನ್ನು ಕೂಗುತ್ತ ರಮೇಶ್ ಕುಮಾರ್ ಪರವಾಗಿ ಜೈಕಾರ ಹೇಳುತ್ತ ರೈತ ಸಂಘದ ಮುಖಂಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಅವರ ವಿರುದ್ದ ಮುಗಿಬಿದ್ದರು ಈ ಸಂದರ್ಭದಲ್ಲಿ ಸ್ಥಳದಲ್ಲಿ ತ್ವೇಷಮಯ ವಾತವರಣ ನಿರ್ಮಾಣವಾಗಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಜನರಿದ್ದ ಹಿನ್ನಲೆಯಲ್ಲಿ ಪೋಲಿಸರು ಮದ್ಯಪ್ರವೇಶಿಸಿ ರೈತ ಸಂಘಟನೆ ಕಾರ್ಯಕರ್ತರನ್ನು ತಹಶೀಲ್ದಾರ್ ಕಚೇರಿ ಒಳಗೆ ಕರೆದೊಯ್ದು ರಕ್ಷಿಸಿದರು.