ಶ್ರೀನಿವಾಸಪುರ:ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದರು ಎನ್ನಲಾದ ರೈತರು ಉಳುಮೆ ಮಾಡುತ್ತಿದ್ದ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಗಿಡನಾಟಿ ಮಾಡಲು ಮುಂದಾದಾಗ ರೈತಾಪಿ ಕುಟುಂಬದ ಸದಸ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ತಳ್ಳಾಟ ನೂಕಾಟ ನಡೆದ ಘಟನೆ ತಾಲೂಕಿನ ಕೋಟಬಲ್ಲಪಲ್ಲಿ ಗ್ರಾಮದ ಬಳಿ ನಡೆಯಿತು ಈ ಸಂದರ್ಭದಲ್ಲಿ ಒರ್ವ ರೈತ ಮಹಿಳೆ ಅಯಾತಪ್ಪಿ ಕೆಳಗೆ ಬಿದ್ದು ಅಸ್ವಸ್ತರಾಗಿದ್ದು ತಕ್ಷಣ ಸ್ಥಳೀಯರು 108 ಅಂಬುಲೆನ್ಸ್ ಕರೆಸಿ ಅಸ್ಪತ್ರೆಗೆ ಸಾಗಿಸಿದರು.
ಜಮೀನು ನಮ್ಮದು ರೈತರ ಆಕ್ರೋಶ
ನಾವು ಉಳುಮೆ ಮಾಡುತ್ತಿದ್ದ ಜಾಗ ನಮ್ಮದು ಎಂದು ರೈತರು ಘೋಷಣೆಗಳನ್ನು ಕೂಗುತ್ತ ನಾವು ಬೆಳೆದಿದ್ದ ಮಾವು ಇತರೆ ಬೆಳೆಗಳನ್ನು ತೆರವು ಮಾಡಿ ನಮಗೆ ಅನ್ಯಾಯ ಮಾಡಿ ಈಗ ಸಸಿ ನೆಡಲು ಮುಂದಾಗಿರುವ ಅರಣ್ಯ ಇಲಾಖೆ ಅಕ್ರಮ ನಡೆಸುತ್ತಿದೆ ಇದು ರೈತರ ಭೂಮಿ ಅರಣ್ಯ ಇಲಾಖೆ ಸಸಿ ನೆಡಲು ಬಿಡುವದಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದ ರೈತರು ಪ್ರಾಣವನ್ನು ಬಿಡುತ್ತೇವೆ ಭೂಮಿಯನ್ನು ಬಿಡುವದಿಲ್ಲವೆಂದು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪಾತಕೋಟೆನವೀನ್ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದ ಸಣ್ಣ-ಪುಟ್ಟ ರೈತರ ಜಮೀನುಗಳನ್ನು ಈಗ ಅರಣ್ಯ ಪ್ರದೇಶಕ್ಕೆ ಸೇರಿದ್ದು ಎಂದು ತೆರವು ಮಾಡಿರುವುದು ಅನ್ಯಾಯ ಇದಕ್ಕಾಗಿ ರೈತರು ನ್ಯಾಯಲಯ ಅಶ್ರಯಿಸಿದ್ದಾರೆ ಅಷ್ಟರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆ ಜಮೀನಿನಲ್ಲಿ ಸಸಿ ನಾಟಿ ಮಾಡುವುದು ಸರಿಯಾದ ಕ್ರಮ ಅಲ್ಲ ಎಂದು ಹೇಳಿದರು.
ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ಪರಿಶೀಲನೆ.