ಶ್ರೀನಿವಾಸಪುರ: ರೈತ ಸಂಘದ ಇತಿಹಾಸ ತಿಳಿಯದೆ ಕೋಲಾರದ ಸಂಸದ ಮುನಿಸ್ವಾಮಿ ರೈತ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಹುದ್ದೆಯ ಗೌರವ ತಾವೆ ಕಳೆದುಕೊಂಡಿದ್ದಾರೆ ಎಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ನಂಬಿಹಳ್ಳಿಶ್ರೀರಾಮರೆಡ್ಡಿ ಆರೋಪಿಸಿದ್ದಾರೆ.
ಇಂದು ತಾಲೂಕು ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಸದ ಮುನಿಸ್ವಾಮಿ ರೈತರು ಮತ್ತು ರೈತ ಸಂಘಟನೆ,ಹೋರಾಟಗಳ ಕುರಿತಾಗಿ ಅಧ್ಯಯನ ನಡೆಸಿ ನಂತರ ಹಸಿರು ಶಾಲು ಕುರಿತಾಗಿ ಮಾತನಾಡಿ ಎಂದರು.
ಎಂಟು ದಶಕಗಳ ಇತಿಹಾಸ ಇರುವಂತ ರೈತ ಹೋರಾಟ ಇವರಿಗೆ ಕೇವಲವಾಗಿ ಕಾಣಿಸುವುದು ಎನ್ನುವುದಾದರೆ ರಿಗೆ ನೀವು ರೈತಾಪಿ ಕುಟುಂಬದ ಸಂಪರ್ಕ ಇಲ್ಲವೇ ನಿಮ್ಗೆ ರೈತರ ಕಷ್ಟ ನಷ್ಟ ಸುಖ ದುಖಃ ತಿಳಿದಿಲ್ಲವೆ ಈ ಎಲ್ಲವೂ ತಿಳಿಯದೆ ರೈತಾಪಿ ಕುಟುಂಬಗಳನ್ನು ಜಪ್ತಿ ಮಾಡುವಾಗ ಪ್ರೊಫೆಸರ್ ನಂಜುಂಡಸ್ವಾಮಿ ಹಸಿರು ಶಾಲು ಹೇಗಲೇರಿಸಿಕೊಂಡು ಬಂದು ರೈತರ ಪ್ರಾಣ ಮಾನ ಉಳಿಸಿದ ಮಹಾನುಭಾವರ ತಿಳಿದುಕೊಳ್ಳಬೇಕಾದ ಅವಶ್ಯಕತೆ ಸಂಸದ ಮುನಿಸ್ವಾಮಿ ಅವರಿಗೆ ಇದೆ ಎಂದರು.
ಹಸಿರು ಶಾಲು ಹಾಕಿಕೊಂಡು ನಾವ್ಯಾರು ಕಛೇರಿಗಳಿಗೆ ಸುಖ ಸುಮನೆ ಓಡಾಡುವುದಿಲ್ಲ ಸಮಸ್ಯೆ ಎಂದು ಬರುವಂತ ರೈತರ ಕಷ್ಟಗಳಿಗೆ ಪರಿಹಾರ ಕೊಡಿಸಲು ನಮ್ಮ ಪ್ರಯತ್ನ, ಸಂಸದರೆ ನಿವೇಳಿದ ರಿತಿಯಲ್ಲಿ ನಾವ್ಯಾರು ಹಸಿರು ಶಾಲು ಹೇಗಲೇರಿಸಿಕೊಂಡು ಒಡಾಡುವುದಿಲ್ಲ ನಮ್ಮ ಹೋರಾಟ ತಪನಃ ಏನಿದ್ದರು ರೈತ ಕಷ್ಟಕ್ಕಾಗಿ ಇದನ್ನು ಹೊರತು ಪಡಿಸಿ ಇಲ್ಲಸಲ್ಲದ ಆರೋಪಗಳನ್ನು ಮಾತನಾಡಿದರೆ ನಿಮ್ಮ ಘನತೆಗೆ ತಕ್ಕದಲ್ಲ ಎಂದ ಅವರು,ಸೋಮವಾರದ ಒಳಗಾಗಿ ನೀವು ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು,ರೈತರ ಬಳಿ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ನಡೆಸುವ ಉಗ್ರ ಹೋರಾಟವನ್ನು ಎದುರಿಸಲು ಸಜ್ಜಾಗುವಂತೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬೈಚೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಸ್ತೇನಳ್ಳಿ ನಾರಾಯಣಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ರಮೇಶ್,ಅಸ್ಲಂ ಮುಂತಾದವರು ಇದ್ದರು.