ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಮಹಿಳಾ ಪೇದೆ ನಾಗಮಣಿಯನ್ನು ಆಕೆಯ ಸಹೋದರ ಪರಮೇಶ ಹತ್ಯೆ ಮಾಡಿರುವ ಧಾರುಣ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ನಡೆದಿದ್ದು ತೆಲಂಗಾಣದಲ್ಲಿ ಈ ಕೊಲೆ ಸಂಚಲನ ಮೂಡಿಸಿದೆ.
ನ್ಯೂಜ್ ಡೆಸ್ಕ್:ತೆಲಂಗಾಣದ ಹಯಾತ್ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗಮಣಿ ಮರ್ಯಾದ ಹತ್ಯೆಗೆ ಬಲಿಯಾದ ಮಹಿಳಾ ಪೋಲಿಸ್ ಪೇದೆಯಾಗಿದ್ದು ಸೋಮವಾರ ಮುಂಜಾನೆ ತನ್ನ ಹುಟ್ಟೂರು ರಾಯಪೋಳು ಗ್ರಾಮದಿಂದ ಹಯತ್ನಗರದ ಉದ್ಯೋಗಕ್ಕೆ ಸ್ಕೂಟರನಲ್ಲಿ ತೆರಳುತ್ತಿದ್ದ ನಾಗಮಣಿಯನ್ನು ಹಿಂಬದಿಯಿಂದ ಕಾರಿನಲ್ಲಿ ಬಂದು ಡಿಕ್ಕಿ ಹೋಡೆದ ಸಹೋದರ ಪರಮೇಶ್ ಸ್ಕೂಟರ್ ನಿಂದ ಕೆಳಗೆ ಬಿದ್ದ ಆಕೆಯನ್ನು ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ಹೇಳಲಾಗಿದೆ.
ನಾಗಮಣಿ 2020 ರಲ್ಲಿ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗಿ ಪ್ರಸ್ತುತ ಹಯಾತ್ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ನಾಗಮಣಿ ಅದೇ ಗ್ರಾಮದ ಶ್ರೀಕಾಂತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರದು ಜಾತಿ ಬೇರೆ ಆದ ಕಾರಣ ಇವರ ಮದುವೆಗೆ ನಾಗಮಣಿ ಮನೆಯವರು ಒಪ್ಪಿರಲಿಲ್ಲ ಒಂದು ತಿಂಗಳ ಹಿಂದೆ ಪ್ರೀತಿಸಿದ ವ್ಯಕ್ತಿಯ ತಂದೆ-ತಾಯಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಯಾದಗಿರಿಗುಟ್ಟದಲ್ಲಿ ವಿವಾಹವಾಗಿದ್ದಾಳೆ. ಇದಕ್ಕೆ ನಾಗಮಣಿ ಕಿರಿಯ ಸಹೋದರ ಮತ್ತು ಕುಟುಂಬಸ್ಥರು ಆಕೆಯ ಮೇಲೆ ಕೋಪಗೊಂಡಿದ್ದರು.ಇದೆ ಕಾರಣಕ್ಕಾಗಿ
ನಾಗಮಣಿ ತೆರಳುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೋಡೆಸಿ ಕೆಳಗೆ ಬಿದ್ದಾಗ ಕಾರಿನಲ್ಲಿ ಇರಿಸಿಕೊಂಡಿದ್ದ ಮಚ್ಚು ತಗೆದು ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ನಾಗಮಣಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.