ಶ್ರೀನಿವಾಸಪುರ ಪುರಸಭೆಯಲ್ಲಿ ರಾಜಕೀಯ ಜಿದ್ದಾ-ಜಿದ್ದಿಗೆ ಕಾರಣವಾಗಿದೆ ಯಾರು ಯಾರಿಗೂ ಕಡಿಮೆ ಇಲ್ಲದಂತೆ ಸೇರಿಗೆ ಸವ್ವಾ ಸೇರು ಎಂಬಂತೆ ಇಲ್ಲಿನ ಸಾಂಪ್ರದಾಯಿಕ ಕಾಂಗ್ರೆಸ್ ಹಾಗು ಜೆಡಿಎಸ್ ಎದರು ಬದರಾಗಿದೆ ಇದಕ್ಕೆ ನಿನ್ನೇಯ ಘಟನಾವಳಿಗಳೆ ಸಾಕ್ಷಿ
- ಕಾಂಗ್ರೆಸ್ ಆರೋಪಗಳು
- ಅಕ್ರಮ ಕಟ್ಟಡ ನಿರ್ಮಾಣದಲ್ಲಿ ಜೆಡಿಎಸ್ ಭ್ರಷ್ಟಚಾರ
- ಪುರಸಭೆ ಜಮೀನಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣ
- ಜನಸಾಮನ್ಯರ ಕೆಲಸ ಕಾರ್ಯಗಳಿಗೆ ಬ್ರೋಕರ್ ಗಳ ಕಾಟ
ಶ್ರೀನಿವಾಸಪುರ:-ಪುರಸಭೆ ಜಾಗದಲ್ಲಿ ಪುರಸಭೆ ಆಡಳಿತದಲ್ಲಿರುವ ಜೆ.ಡಿ.ಎಸ್ ನವರು ಅಕ್ರಮವಾಗಿ ಹಣ ಪಡೆದುಕೊಂಡು ವ್ಯಾಪರಸ್ಥರಿಗೆ ಕಟ್ಟಡ ನಿರ್ಮಾಣ ಮಾಡಲು ಅನವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕಾಂಗ್ರೆಸ್ ಮುಖಂಡರು ಪುರಸಭೆ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಪುರಸಭೆ ಸದಸ್ಯ ಬಿ.ಎಲ್ ಭಾಸ್ಕರ್ ಮುನಿರಾಜು ಕೆ.ಕೆ.ಮಂಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರು ಮಾತನಾಡಿ ಪುರಸಭೆಯಲ್ಲಿ ಅಧಿಕಾರದಲ್ಲಿರು ಜೆ.ಡಿ.ಎಸ್ ನವರು ಮತ್ತು ಅಧಿಕಾರಿ ವರ್ಗ ತ್ಯಾಗರಾಜಕಾಲೋನಿ ರಸ್ತೆಯಲ್ಲಿರುವಂತ ಪುರಸಭೆ ಮಳಿಗೆಗಳ ವ್ಯಾಪರಸ್ಥರ ಬಳಿ ಅಕ್ರಮವಾಗಿ ಹಣಪಡೆದುಕೊಂಡು ಪುರಸಭೆ ಅವರಣದಲ್ಲಿನ ಜಾಗವನ್ನು ಬಳಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದಾರೆ ಪುರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ, ಜೆಡಿಎಸ್ ಅಧಿಕಾರದಲ್ಲಿರುವ ಪುರಸಭೆಯಲ್ಲಿ ಎಲ್ಲವೂ ಏಕಪಕ್ಷೀಯ ನಿರ್ಧಾಗಳಲ್ಲಿ ಅಧಿಕಾರ ನಡೆಯುತ್ತಿದೆ ಎಂದು ಆರೋಪಿಸಲಾಯಿತು,ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪುರಸಭೆಗೆ ಬಂದರೆ ಇಲ್ಲಿ ಎಲ್ಲದಕ್ಕೂ ಬ್ರೋಕರಗಳನ್ನು ಆಶ್ರಯಿಸಬೇಕಾಗಿದೆ,ಬ್ರಷ್ಟಚಾರದಲ್ಲಿ ನೇರವಾಗಿ ಅಧಿಕಾರಸ್ಥ ಚುನಾಯಿತ ಪ್ರತಿನಿಧಿಗಳೆ ಭಾಗಿಯಾಗುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಅಗಮಿಸಿದ ತಹಶೀಲ್ದಾರ್ ಶ್ರೀನಿವಾಸ್ ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಅಕ್ರಮ ನಿರ್ಮಾಣ ಎನ್ನಲಾದ ಕಟ್ಟಡವನ್ನು ತಕ್ಷಣ ಜೆಸಿಬಿ ಮೂಲಕ ತೆರವು ಗೊಳಿಸಿದರು.
ಪ್ರತಿಭಟನೆಯಲ್ಲಿ ಹರಿಶ್ ಯಾದವ್ ವೇಣು ಶಿವರಾಜ್ ನರಸಿಂಹಂಮೂರ್ತಿ ಅನಿಸ್ ಮುಂತಾದವರು ಇದ್ದರು.
ಪ್ರತಿಭಟನೆ ನಡೆಯುತ್ತಿದ್ದಂತೆ ನಿರ್ಮಾಣಮಾಡಲಾಗಿದ್ದ ಕಟ್ಟಡವನ್ನು ಪುರಸಭೆ ವತಿಯಿಂದ ತೆರವು ಗೊಳಿಸಲಾಯಿತು.
ಪುರಸಭೆ ಮಳಿಗೆಯಲ್ಲಿದ್ದ ಬಾರ್ ಸಿಝ್
- ಪುರಸಭೆ ಮಳಿಗೆಯಲ್ಲಿ ತೆರವು ಗೊಳಿಸಿದ ಬಾರ್ ಕಾಂಗ್ರೆಸ್ ಮುಖಂಡನದು!
- ಮೂಲ ಬಾಡಿಗೆದಾರ ಯುವ ಕಾಂಗ್ರೆಸ್ ಮುಖಂಡ?
ಪಟ್ಟಣದ ಅಂಚೆಕಚೇರಿ ರಸ್ತೆಯಲ್ಲಿರಿವ ಪುರಸಭೆ ಮಳಿಗೆಯಲ್ಲಿ ಪುರಸಭೆ ಕಾಯ್ದೆ ನಿಯಮಾವಳಿಗಳನ್ನು ಉಲ್ಲಂಘಿಸಿ ರೆಡ್ಡಿ ವೈನ್ಸ್ ನಡೆಸುತ್ತಿದ್ದಾರೆ ಎಂದು ಪುರಸಭೆ ಅಧಿಕಾರಿಗಳು ನೀಡಿದ ದೂರಿನಂತೆ ತಹಶೀಲ್ದರ್ ಶ್ರೀನಿವಾಸ್ ನೇತೃತ್ವದಲ್ಲಿ ಇಂದು ಬಾರ್ ಅನ್ನು ಸಿಝ್ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಬಾರ್ ನಡೆಸಬಾರದು ಎಂದು ಮಾಲಿಕರಿಗೆ ಈ ಹಿಂದೆ ನೋಟಿಸ್ ನೀಡಿದ್ದು ಅದಕ್ಕೆ ಪ್ರತಿಕ್ರಿಯಿಸದೆ ಬಾರ್ ವ್ಯಾಪಾರ ಮುಂದುವರಿಸಿದ ಕಾರಣ ಇಂದು ತಾಲೂಕು ಆಡಳಿತ ಪೋಲಿಸ್ ಹಾಗು ಅಬ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ಇಂದು ಸಿಝ್ ಮಾಡಿರುವುದಾಗಿ ಹೇಳಿದರು. ಬಾರ್ ಸಿಝ್ ಸಂದರ್ಭದಲ್ಲಿ ಸ್ವತಃ ಸಿ.ಐ. ರವಿಕುಮಾರ್,ತಾಲೂಕು ಪಂಚಾಯಿತಿ ಇವೊ ಆನಂದ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.