ಶ್ರೀನಿವಾಸಪುರ:ಭಾರತೀಯ ಜನತಾ ಪಕ್ಷದ ಪ್ರಭಾವಿ ಮಂತ್ರಿ ಡಾ.ಕೆ.ಸುಧಾಕರ್ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಶ್ರೀನಿವಾಸಪುರಕ್ಕೆ ಆಗಮಿಸಿದರೆ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಇರಬೇಕಾಗಿದ್ದ ಜಾಗದಲ್ಲಿ ಹಾರತುರಾಯಿ, ಪಟಾಕಿ ಹಿಡಿದುಕೊಂಡ ಜೆಡಿಎಸ್ ಕಾರ್ಯಕರ್ತರೊಂದಿಗೆ ಸ್ವತಃ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಮತ್ತು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿಯವರೇ ನಿಂತು ಸ್ವಾಗತಿಸಿದರು.
ಇಂದು ಶ್ರೀನಿವಾಸಪುರದಲ್ಲಿ ನಡೆದ ಬಿಜೆಪಿ ಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೋಳ್ಳಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ,ಮಾಜಿ ಶಾಸಕ ವರ್ತೂರ್ ಪ್ರಕಾಶ್, ಸೇರಿದಂತೆ ಹಲವು ಮಾಜಿ ಶಾಸಕರು ಇತರೆ ಮುಖಂಡರು ಆಗಮಿಸಿದ್ದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇದ್ದ ಕಾರು ಪಟ್ಟಣದ ಇಂದಿರಾಭವನ್ ವೃತ್ತಕ್ಕೆ ಅಗಮಿಸುತ್ತಿದ್ದಂತೆ ದೊಡ್ಡಮಟ್ಟದಲ್ಲಿದ್ದ ಜೆಡಿಎಸ್ ಕಾರ್ಯರ್ತರು ಸುಧಾಕರ್ ಅವರಿಗೆ ಜೈಕಾರ ಕೂಗಿ ಹಾರ ತುರಾಯಿಗಳನ್ನು ಹಾಕಿ ಪಟಾಕಿ ಸಿಡಿಸಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ,ಮಾಜಿ ಶಾಸಕ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಅವರು ಸ್ವತಃ ನಿಂತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ ಶಾಲು ಹೊದಿಸಿ ಹೂವಿನಹಾರ ಹಾಕಿ ಸ್ವಾಗತಿಸಿ ಶುಭಕೋರಿದರು ಈ ಸಂದರ್ಭದಲ್ಲಿ ಹಲವಾರು ಜೆಡಿಎಸ್ ಮುಖಂಡರು ವಿಶೇಷವಾಗಿ ಮುಸ್ಲಿಂ ಮುಖಂಡರು ಪುರಸಭೆ ಹಾಲಿ ಮತ್ತು ಮಾಜಿ ಸದಸ್ಯರು ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಇತರೆ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು ಇದ್ದರು.
ಪುರಸಭೆಯಲ್ಲಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಮಾಜಿ ಶಾಸಕ ವೆಂಕಟಶಿವಾರೆಡ್ದಿ ಸ್ವಾಗತ ಕೋರಿದ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಹಾಲಿ ಶಾಸಕ ರಮೇಶ್ ಕುಮಾರ್ ಅವರು ಇಂದಿರಾಭವನ್ ವೃತ್ತಕ್ಕೆ ಕೂಗತೆ ದೂರದ ಪುರಸಭೆ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ರಿವ್ಯೂ ಮೀಟಿಂಗ್ ಮಾಡುತ್ತಿದ್ದರು
ಪೋಲಿಸರ ಮುಂಜಾಗ್ರತೆ ಪಟ್ಟಣದಲ್ಲಿ ಫುಲ್ ಬಂದೋಬಸ್ತು
ಪುರಸಭೆ ಕಚೇರಿಯಲ್ಲಿ ರಮೇಶ್ ಕುಮಾರ್ ಸ್ವತಃ ಅಧಿಕಾರಿಗಳೊಂದಿಗೆ ರಿವ್ಯೂ ಮೀಟಿಂಗ್ ನಲ್ಲಿದ್ದರೆ ಇತ್ತ ಪೋಲಿಸರು ಆತಂಕದಲ್ಲಿದ್ದರು ಕಾರಣ ಇಷ್ಟೆ ಪುರಸಭೆ ಕಚೇರಿ ಕೂಗಳತೆ ದೂರದಲ್ಲಿ ಇಂದಿರಾಭವನ್ ವೃತ್ತದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸ್ವಾಗತಿಸಲು ಮಾಜಿ ಶಾಸಕ ವೆಂಕಟಶಿವಾರೆಡ್ದಿ ಬರುತ್ತಾರೆ ಎಂಬ ಸುದ್ದಿ ಹಿನ್ನಲೆಯಲ್ಲಿ ಪರಿಸ್ಥಿತಿ ಎಲ್ಲಿ ಏನಾಗುತ್ತದೋ ಎಂಬ ಮುಂಜಾಗ್ರತೆಯಾಗಿ ಎರಡು ರಿಜರ್ವ ವ್ಯಾನ್ ತರಿಸಿಕೊಂಡ ಪೋಲಿಸ್ ಇಲಾಖೆ ಒಂದು ವ್ಯಾನ್ ಅನ್ನು ಸಂಜೆಯ ತನಕ ಪುರಸಬೆ ಕಚೇರಿ ಮುಂಬಾಗದಲ್ಲಿ ಬಂದೋಬಸ್ತ್ ಗಾಗಿ ನಿಲ್ಲಿಸಿದ್ದರು. ಬಂದೋಬಸ್ತ್ ಉಸ್ತುವಾರಿಯನ್ನು ಸ್ವತಃ ಮುಳಬಾಗಿಲು ಡಿವೈಎಸ್ಪಿ ಜೈಶಂಕರ್ ವಹಿಸಿಕೊಂಡಿದ್ದರು
ಸೋಶಿಯಲ್ ಮೀಡಿಯಾಗಳಲ್ಲಿ ಬಿಜೆಪಿ ಬಿಟಿಂ ಚರ್ಚೆ
ಬಿಜೆಪಿ ಸಚಿವನನ್ನು ಜೆಡಿಎಸ್ ಮುಖಂಡರು ಸ್ವಾಗತ ಮಾಡಿರುವ ಬಗ್ಗೆ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಫೇಸ್ಬುಕ್ ಮತ್ತು ವ್ಯಾಟ್ಸಾಪ್ ಗಳಲ್ಲಿ ಬಿಜೆಪಿ ಬಿ ಟಿಂ ಯಾರು ಎಂದು ಪ್ರಶ್ನೆ ಮಾಡಿ ಸ್ವಾಗತ ಮಾಡಿದ ಫೋಟೋಗಳನ್ನು ಹಂಚಿಕೊಂಡಿರುವುದು ಎಲ್ಲಡೆ ವೈರಲ್ ಆಗಿದೆ.